ಪಿಸಿಎಎಸ್ DGP ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ!

By Suvarna NewsFirst Published Oct 31, 2022, 8:33 PM IST
Highlights

ಪಿಸಿಎಎಸ್ DGP, ಭಯೋತ್ಪಾದನಾ ನಿಗ್ರದಳದ ಎಡಿಜಿಪಿ ಸೇರಿದಂತೆ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಈ ತಕ್ಷಣದಿಂದಲೇ ವರ್ಗಾವಣೆ ಆದೇಶ ಜಾರಿಯಾಗಲಿದೆ.

ಬೆಂಗಳೂರು(ಅ.31):  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪಿಸಿಎಎಸ್ DGP, ಭ್ರಷ್ಟಾಚಾರ ನಿಗ್ರದಳದ ಎಡಿಜಿಪಿ ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆಡೀಶನಲ್ ಜನರಲ್ ಡೈರೆಕ್ಟರ್ ಹಾಗೂ ಪ್ರಿನ್ಸಿಪಲ್ ಸೆಕ್ರೆಟರಿ ಮಾಲಿನಿ ಕೃಷ್ಣಮೂರ್ತಿಯನ್ನು ಈ ತಕ್ಷಣದಿಂದಲೇ ಆಂತರಿಕ ‌ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ನಿಗ್ರಹ ದಳದ ಆಡೀಶನ್ ಜನರಲ್ ಆಫ್ ಪೊಲೀಸ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಎಡಿಜಿಪಿಯಾಗಿ ವರ್ಗಾವಣೆಗೊಳಿಸಿದೆ.

ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ರವಿ ಎಸ್ ಅವರನ್ನು ಐಜಿಪಿ ಹಾಗೂ ಸರ್ಕಾರದ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಲಾಗಿದೆ. ಇನ್ನು ಅಜಯ್ ಹಿಲೋರಿ ಅವರನ್ನು ಡಿಸಿಆರ್‌ಇನ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ವರ್ಗಾವಣೆಗೊಳಿಸಿದೆ. ಭ್ರಷ್ಟಾಚಾರ  ನಿಗ್ರಹ ದಳದ ಸೂಪರಿಡೆಂಟ್ ಆಫ್ ಪೊಲೀಸ್   ಯತೀಶ್ ಚಂದ್ರ ಅವರನ್ನು ಕ್ರೈಂ 2 ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆಗೊಳಿಸಲಾಗಿದೆ.  

ಆಡಳಿತಕ್ಕೆ ಭಾರಿ ಸರ್ಜರಿ: 17 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕಲಬುರಗಿಯ ಭ್ರಷ್ಟಾಚಾರ ನಿಗ್ರಹ ದಳದ ಸೂಪರಿಡೆಂಟ್ ಆಫ್ ಪೊಲೀಸ್ ಅಮರನಾಥ್ ರೆಡ್ಡಿ ಅವರನ್ನು ಕಲಬುರಗಿ ಗುಪ್ತಚರ ವಿಭಾಗದ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ವರ್ಗಾವಣೆಗೊಳಿಸಲಾಗಿದೆ. ಬಳ್ಳಾರಿಯ ಭ್ರಷ್ಟಾಚಾರ  ನಿಗ್ರಹ ದಳದ ಸೂಪರಿಡೆಂಟ್ ಆಫ್ ಪೊಲೀಸ್ ಬಾಬು ಬಿಎಲ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಸೂಪರಿಡೆಂಟ್ ಆಫ್ ಪೊಲೀಸ್ ಶೋಭಾ ರಾಣಿ ವಿಜೆ ಅವರನ್ನು ಬೆಂಗಳೂರು ಮೆಟ್ರೊಪೊಲಿಟಿಯನ್ ಟಾಸ್ಕ್ ಫೋರ್ಸ್‌ನ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ವರ್ಗಾವಣೆಗೊಳಿಸಲಾಗಿದೆ. ಮೈಸೂರು ಭ್ರಷ್ಟಾಚಾರ ನಿಗ್ರಹ ದಳದ ಸೂಪರಿಡೆಂಟ್ ಆಫ್ ಪೊಲೀಸ್ ಸಜೀತ್ ವಿಜೆ ಅವರನ್ನು ಕರ್ನಾಟಕ ಲೋಕಾಯುಕ್ತ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ವರ್ಗಾವಣೆಗೊಳಿಸಲಾಗಿದೆ. ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳದ ಸೂಪರಿಡೆಂಟ್ ಆಫ್ ಪೊಲೀಸ್ ಬಾಬಾಸಾಬ್ ನೇಮಗೌಡ ಅವರನ್ನು ಬೆಳಗಾವಿ ಗುಪ್ತಚರ ಇಲಾಖೆ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ವರ್ಗಾವಣೆಗೊಳಿಸಲಾಗಿದೆ.

click me!