ಮುಖದಲ್ಲಿ ಅರಳಿದ 'ಗಂಧದ ಗುಡಿ': ಮಂಗಳೂರಿನ ಮೇಕಪ್ ಆರ್ಟಿಸ್ಟ್ ಕೈಚಳಕ!

Published : Oct 31, 2022, 07:26 PM ISTUpdated : Oct 31, 2022, 07:59 PM IST
ಮುಖದಲ್ಲಿ ಅರಳಿದ 'ಗಂಧದ ಗುಡಿ': ಮಂಗಳೂರಿನ ಮೇಕಪ್ ಆರ್ಟಿಸ್ಟ್ ಕೈಚಳಕ!

ಸಾರಾಂಶ

ಅಪ್ಪು ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಅಪ್ಪು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಹಸಿರಾಗಿಡಲು ವಿಭಿನ್ನವಾಗಿ ಪ್ರಯತ್ನಿಸ್ತಾ ಇದಾರೆ.

ಮಂಗಳೂರು (ಅ.31): ಅಪ್ಪು ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ಮಧ್ಯೆ ಅಪ್ಪು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ನೆನಪುಗಳನ್ನು ಹಸಿರಾಗಿಡಲು ವಿಭಿನ್ನವಾಗಿ ಪ್ರಯತ್ನಿಸ್ತಾ ಇದಾರೆ. ಈ ಮಧ್ಯೆ ಮಂಗಳೂರಿನ ಅಪ್ಪು ಆಭಿಮಾನಿಯೊಬ್ಬರು 'ಗಂಧದ ಗುಡಿ' ಫೇಸ್ ಪೇಂಟಿಂಗ್ ಮೂಲಕ ಪುನೀತ್‌ಗೆ ವಿಭಿನ್ನ ಗೌರವ ಸಲ್ಲಿಸಿದ್ದಾರೆ. 

ಅಪ್ಪು‌ ನಟನೆಯ ಗಂಧದ ಗುಡಿ ಸಿನಿಮಾ ಜನ ಮಾನಸವನ್ನು ಸೆಳೆಯುತ್ತಿದೆ. ಈ ಹೊತ್ತಲ್ಲಿ ಮೇಕಪ್ ಆರ್ಟ್ ಮೂಲಕ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಬ್ಯೂಟಿಷಿಯನ್, ಅಪ್ಪು ಅವರ ಅಭಿಮಾನಿ, ಮಂಗಳೂರಿನ ಬೆಂದೂರ್ ವೆಲ್‌ನಲ್ಲಿರುವ ಹೆಸರಾಂತ ಚೇತನಾ ಬ್ಯೂಟಿ ಲೌಂಜ್‌ನ ಚೇತನಾ ಅವರ ಕೈ ಚಳಕದಲ್ಲಿ ಅಪ್ಪು ಅಭಿನಯದ 'ಗಂಧದ ಗುಡಿ' ಫೇಸ್ ಪೇಂಟಿಂಗ್ ಬಹಳ ಅದ್ಭುತವಾಗಿ ಮೂಡಿಬಂದಿದೆ. ಈ ಸುಂದರ ಆರ್ಟ್ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿಕೊಂಡು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭ ಕೋರಿದ್ದಾರೆ. 

ಕರಾವಳಿ ತೀರ ರಕ್ಷಣೆಗೆ ಕೋಸ್ಟ್‌ಗಾರ್ಡ್ಸ್ ನೂತನ ತಂತ್ರಜ್ಞಾನ

ಜೊತೆಗೆ ಕರ್ನಾಟಕ ರತ್ನ ಪುನೀತ್ ಗೆ ಗೌರವ ಸಲ್ಲಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ಚೇತನಾ, ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿಯೂ ಹೌದು. ಅಪ್ಪು ಅಭಿನಯದ ಕೊನೆಯ ಚಿತ್ರ 'ಗಂಧದ ಗುಡಿ' ಸಿನಿಮಾದಿಂದ ಪ್ರೇರಣೆಗೊಂಡು, ಆ ಸಿನಿಮಾದ ಪ್ರಾಕೃತಿಕ ಕಲ್ಪನೆಯನ್ನು ತಮ್ಮ ಕಲೆಯ ಮೂಲಕ ಬಿಂಬಿಸಿದ್ದಾರೆ ಚೇತನಾ. ಗಂಧದ ಗುಡಿಯ ಸಂಪೂರ್ಣ ದೃಶ್ಯವನ್ನು ಕೇವಲ ಒಂದು ಮೊಗದ ಮೇಲೆ ಸುಂದರವಾಗಿ ಚಿತ್ರಿಸಿ ಕಲಾ ಲೋಕ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ. ಗಂಧದ ಗುಡಿ ಚಿತ್ರದಲ್ಲಿ ಕಂಡು ಬರುವ ಹಸಿರಿನ ಬನಸಿರಿಯನ್ನು ವಿದ್ಯಾರ್ಥಿಯೊಬ್ಬನ ಮುಖದ ಮೇಲೆ ಚಿತ್ರಿಸುವ ಮೂಲಕ ಯುವ ರತ್ನ ಪುನೀತ್ ಅವರ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ. 

ಅದರ ಜೊತೆಯಲ್ಲಿ, 'ಕಾಡನ್ನು ರಕ್ಷಿಸಿ-ಪ್ರಾಣಿಗಳನ್ನು ಉಳಿಸಿ' ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಕಲೆಯನ್ನು ಅನಾವರಣಗೊಳಿಸಿದ್ದು, ಅವರ ಪರಿಸರ ಪ್ರೇಮವನ್ನು ಕೂಡ ಪ್ರತಿಬಿಂಬಿಸುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ, ಯುವತಿಯೊಬ್ಬಳ ಮೊಗದ ಮೇಲೆ ಮೂರನೇ ಕಣ್ಣಿನ ಆರ್ಟ್ ಚಿತ್ರಿಸುವ ಮೂಲಕ ಜನಮನ ಸೆಳೆದಿದ್ದರು. ಅವರ ಈ ಮೂರನೇ ಕಣ್ಣಿನ ಫೇಸ್ ಪೇಂಟಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತಲ್ಲದೇ, ಕಲಾ ಪ್ರೇಮಿಗಳ ಹೃದಯ ಗೆದ್ದಿತ್ತು.

ಕೋಳಿ ಅಂಕದ ಭವಿಷ್ಯ ಹೇಳುವ ಕುಕ್ಕುಟ ಪಂಚಾಂಗ!

ಯಕ್ಷಗಾನ ರಂಗದಲ್ಲಿ ಸದಾ ಬಣ್ಣಹಚ್ಚಿ ಕುಣಿಯುವ ಯಕ್ಷಗಾನ ಕಲಾವಿದ, ಮಾಡೆಲ್, ಬಿಬಿಎ ವಿದ್ಯಾರ್ಥಿ ಭುವನ್ ಶೆಟ್ಟಿ ಅವರು ಈ ಗಂಧದ ಗುಡಿಯ ಚಿತ್ರಕಲೆಗೆ ಸಹಕರಿಸಿದ್ದಾರೆ. ಅಲ್ಲದೇ ಚೇತನಾ ಅವರ ಈ ವಿಭಿನ್ನ ಕಲಾಕುಂಚವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದು, ಖ್ಯಾತ ಛಾಯಚಿತ್ರಗಾರ ಪುನೀಕ್ ಶೆಟ್ಟಿ. ಚೇತನಾ ಬ್ಯೂಟಿ ಲೌಂಜ್‌ನ ಚೇತನಾ ಅವರು ರಿಯಲಿಸ್ಟಿಕ್‌ ಮೇಕಪ್‌, ಫೇಸ್‌ ಪೇಂಟಿಂಗ್‌ ಹಾಗೂ ಇನ್ನಿತರ ವಿಭಿನ್ನ ವಿನೂತನ ಪ್ರಯೋಗಗಳ ಮೂಲಕವೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್