ಐಪಿಎಸ್‌ ಅಧಿಕಾರಿಗಳಿಗೂ ಹೊಸ ವರ್ಷ ಉಡುಗೊರೆ: 50 ಜನಕ್ಕೆ ಬಡ್ತಿ

Published : Jan 01, 2023, 01:30 AM IST
ಐಪಿಎಸ್‌ ಅಧಿಕಾರಿಗಳಿಗೂ ಹೊಸ ವರ್ಷ ಉಡುಗೊರೆ: 50 ಜನಕ್ಕೆ ಬಡ್ತಿ

ಸಾರಾಂಶ

ಬೆಂಗಳೂರು ಪೊಲೀಸ್‌ ಆಯುಕ್ತರು ಸೇರಿದಂತೆ 50 ಐಪಿಎಸ್‌ ಅಧಿಕಾರಿಗಳಿಗೆ ಶನಿವಾರ ಮುಂಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರವು ಹೊಸ ವರ್ಷದ ಉಡುಗೊರೆ ನೀಡಿದೆ. ಇದೇ ವೇಳೆ ಕೆಲವು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿದೆ.

ಬೆಂಗಳೂರು (ಜ.01): ಬೆಂಗಳೂರು ಪೊಲೀಸ್‌ ಆಯುಕ್ತರು ಸೇರಿದಂತೆ 50 ಐಪಿಎಸ್‌ ಅಧಿಕಾರಿಗಳಿಗೆ ಶನಿವಾರ ಮುಂಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರವು ಹೊಸ ವರ್ಷದ ಉಡುಗೊರೆ ನೀಡಿದೆ. ಇದೇ ವೇಳೆ ಕೆಲವು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿದೆ.

ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಡಿಜಿಪಿ ಡಾ.ಅಮರ್‌ ಕುಮಾರ್‌ ಪಾಂಡೆ ಅವರ ನಿವೃತ್ತಿಯಿಂದ ತೆರವಾದ ಡಿಜಿಪಿ ಹುದ್ದೆಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರಿಗೆ ಮುಂಬಡ್ತಿ ನೀಡಿದ ಸರ್ಕಾರವು, ಬಳಿಕ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಹುದ್ದೆಯನ್ನು ಪದೋನ್ನತಿಗೊಳಿಸಿ ಪ್ರತಾಪ್‌ ರೆಡ್ಡಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿದೆ. ಇನ್ನು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ ಮೋಹನ್‌ ಅವರನ್ನು ಅಗ್ನಿಶಾಮಕ ದಳದ ಡಿಜಿಪಿ ಸ್ಥಾನಕ್ಕೆ ವರ್ಗಾಯಿಸಿದೆ. ಅದೇ ರೀತಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಸೇರಿದಂತೆ 28 ಎಸ್ಪಿ ದರ್ಜೆ ಅಧಿಕಾರಿಗಳಿಗೆ ಆಡಳಿತಾತ್ಮಕ ಹಿರಿತನ ಲಭ್ಯವಾಗಿದೆ.

ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್‌ ಶಾಗೆ ಎಚ್‌ಡಿಕೆ ತಿರುಗೇಟು

ಎಡಿಜಿಪಿಗಳ ಮುಂಬಡ್ತಿ: ಮನೀಶ್‌ ಕರ್ಬೀಕರ್‌- ಕಾರಾಗೃಹ ಇಲಾಖೆ, ಸೌಮೇಂದು ಮುಖರ್ಜಿ- ಲಾಜಿಸ್ಟಿಕ್‌ ಮತ್ತು ಕಂಪ್ಯೂಟರ್‌ ವಿಭಾಗ, ಕೇಂದ್ರ ಸೇವೆಯಲ್ಲಿರುವ ಪಂಕಜ್‌ ಕುಮಾರ್‌ ಠಾಕೂರ್‌. ರಮಣಗುಪ್ತ- ಉತ್ತರ ವಲಯ, ಡಾ.ಬಿ.ಆರ್‌.ರವಿಕಾಂತೇಗೌಡ- ಕೇಂದ್ರ ವಲಯ, ಎಸ್‌.ಎನ್‌.ಸಿದ್ದರಾಮಪ್ಪ- ಆಯುಕ್ತ ಸಾರಿಗೆ ಇಲಾಖೆ, ಬಿ.ಎಸ್‌.ಲೋಕೇಶ್‌- ಬಳ್ಳಾರಿ ವಲಯ, ಕೆ.ಟಿ.ಬಾಲಕೃಷ್ಣ-ಅಗ್ನಿಶಾಮಕ ದಳ, ಕೇಂದ್ರ ಸೇವೆಯಲ್ಲಿರುವ ಅಭಿಷೇಕ್‌ ಗೋಯೆಲ್‌ ಹಾಗೂ ಕೌಶಲೇಂದ್ರ ಕುಮಾರ್‌ ಅವರು ಐಜಿಪಿ ಹುದ್ದೆಗೆ ಮುಂಬಡ್ತಿ ಪಡೆದು ವರ್ಗಾವಣೆಯಾಗಿದ್ದಾರೆ.

ಐಜಿಪಿಗಳ ಹುದ್ದೆಗೆ ಮುಂಬಡ್ತಿ, ವರ್ಗ: ಎಂ.ಚಂದ್ರಶೇಖರ್‌-ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಬೆಂಗಳೂರು, ಎನ್‌.ಸತೀಶ್‌ ಕುಮಾರ್‌- ಈಶಾನ್ಯ ವಲಯ, ಐಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ವರ್ಗಗೊಂಡವರು: ರಮಣಗುಪ್ತ- ಉತ್ತರ ವಲಯ, ಡಾ.ಬಿ.ಆರ್‌.ರವಿಕಾಂತೇಗೌಡ- ಕೇಂದ್ರ ವಲಯ, ಎಸ್‌.ಎನ್‌.ಸಿದ್ದರಾಮಪ್ಪ- ಆಯುಕ್ತ ಸಾರಿಗೆ ಇಲಾಖೆ, ಬಿ.ಎಸ್‌.ಲೋಕೇಶ್‌- ಬಳ್ಳಾರಿ ವಲಯ, ಕೆ.ಟಿ.ಬಾಲಕೃಷ್ಣ-ಅಗ್ನಿಶಾಮಕ ದಳ, ಕೇಂದ್ರ ಸೇವೆಯಲ್ಲಿರುವ ಅಭಿಷೇಕ್‌ ಗೋಯೆಲ್‌ ಹಾಗೂ ಕೌಶಲೇಂದ್ರ ಕುಮಾರ್‌ ಮುಂಬಡ್ತಿ ಪಡೆದಿದ್ದಾರೆ.

ಜೆಡಿಎಸ್‌ನಿಂದ ಜಿಲ್ಲೆಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ: ಸಿ.ಪಿ.ಯೋಗೇಶ್ವರ್‌

ಡಿಐಜಿ ಹುದ್ದೆಗೆ ಮುಂಬಡ್ತಿ: ಡಾ.ಎಸ್‌.ಶರಣ್ಪಪ್ಪ -ಸಿಸಿಬಿ ಜಂಟಿ ಆಯುಕ್ತ, ಎಂ.ಎನ್‌.ಅನುಚೇತ್‌- ಜಂಟಿ ಆಯುಕ್ತ ಸಂಚಾರ ಬೆಂಗಳೂರು, ರವಿ.ಡಿ.ಚೆನ್ನಣ್ಣವರ್‌- ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್‌, ಬಿ.ರಮೇಶ್‌-ಆಯುಕ್ತ ಮೈಸೂರು, ಇಡಾ ಮಾರ್ಟಿನ್‌- ಡಿಐಜಿ ನೇಮಕಾತಿ, ಕೇಂದ್ರ ಸೇವೆಯಲ್ಲಿರುವ ಅಧಿಕಾರಿಗಳಾದ ಬೋರೆಸ್‌ ಭೂಷಣ್‌ , ಶಾಂತುನು ಸಿನ್ಹಾ, ಅಭಿನವ್‌ ಖರೆ ಹಾಗೂ ಸಿ.ವಂಶಿಕೃಷ್ಣ ಪದನ್ನೋತಿ ಪಡೆದು ಅಲ್ಲೇ ಸೇವೆ ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Kamalakar Bhat Case: ಜಮೀನ್ದಾರನಿಗೆ ಗಾಳ, ಅಪ್ಪು ಆರ್ಕೆಸ್ಟ್ರಾ ಶುರು; ಸುಚಿತ್ರಾಳ ಮತ್ತೊಂದು ಕರ್ಮಕಾಂಡ ಬಯಲು
ಆ 35 ನಿಮಿಷದ ಕರಾಳತೆ ಬಿಚ್ಚಿಟ್ಟ ಸಂತ್ರಸ್ಥೆ; ಆ ಕಾರಣಕ್ಕೆ ಸುಪಾರಿ ಕೊಟ್ಟು ಗ್ಯಾಂಗ್‌ ರೇ*ಪ್‌ ಮಾಡಿಸಿದ್ರಾ?