
ಬೆಂಗಳೂರು(ಮೇ.05): ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೆ ಕೆಲ ನಿಯಮಗಳು ಬದಲಾವಣೆಯಾಗಿದೆ. ಆರಂಭದಲ್ಲಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಒನ್ ವೇ ಪಾಸ್ ನೀಡಲಾಗಿತ್ತು. ಇದೀಗ ಟೋವೇ ಪಾಸ್ ಜಾರಿ ಮಾಡಲಾಗಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಹೊಸ ಆದೇಶ ಹೊರಡಡಿಸಿದ್ದಾರೆ.
ದಾವಣಗೆರೆಯಿಂದ ಓಡಾಡುವ ಅಧಿಕಾರಿಗಳಿಗೆ ನಿರ್ಬಂಧ.
ಈ ಹಿಂದೆ ಒನ್ ಟೈಮ್ ಒನ್ ವೇ ಪಾಸ್ ಜಾರಿ ಮಾಡಲಾಗಿತ್ತು. ಈ ಪಾಸ್ ಬಳಸಿ ಎರಡು ಜಿಲ್ಲೆಗಳ ನಡುವೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಒನ್ ವೇ ಬದಲಿಗೆ ಒನ್ ಟೈಮ್ ಟೂವೇ ಪಾಸ್ ನೀಡುವಂತೆ ಆದೇಶ ಜಾರಿ ಮಾಡಲಾಗಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ತುರ್ತು ಕೆಲಸದ ಮೇಲೆ ಹೋಗುವ ನಾಗರಿಕರಿಗೆ ಇದೀಗ ಟೂವೇ ಪಾಸ್ ವಿತರಿಸಲು ಸೂಚಿಸಲಾಗಿದೆ.
ಲಾಕ್‌ಡೌನ್ ನಿಯಮ ಸಡಿಲಿಕೆಯಿಂದ ಕಾರ್ಖಾನೆಗಳು, ಕೈಗಾರಿಕೆಗಳು ನಿಯಮಿತ ನೌಕರರ ಮೂಲಕ ಆರಂಭಗೊಂಡಿದೆ. ಹೀಗಾಗಿ ಕಾರ್ಮಿಕರು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಕೆಲಸಕ್ಕಾಗಿ ತೆರಳುವುದು ಅನಿವಾರ್ಯವಾಗಿದೆ. ಇನ್ನು ವಿದ್ಯಾರ್ಥಿಗಳು ಸೇರಿದಂತೆ ಇತರರಿಗೂ ಅನೂಕೂಲವಾಗುವಂತೆ ಇದೀಗ ಟೂವೇ ಪಾಸ್ ನೀಡಲಾಗುತ್ತಿದೆ. ಪೊಲೀಸ್ ಇಲಾಖೆ ಅಂತರ್ ಜಿಲ್ಲಾ ಪಾಸ್‌ಗಳನ್ನು ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ