‘ಪಿಎಂ ಕೇರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್| 34 ಕೋಟಿ ರು. ಅನುದಾನ ಮಂಜೂರು
ನವದೆಹಲಿ(ಜೂ.24): ಕೊರೋನಾ ವಿರುದ್ಧ ಹೋರಾಡಲು ‘ಪಿಎಂ ಕೇರ್ಸ್’ ನಿಧಿ ಸ್ಥಾಪಿಸಿದ್ದ ಕೇಂದ್ರ ಸರ್ಕಾರ, ಅದರಲ್ಲಿ ಸಂಗ್ರಹವಾದ ಹಣದಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್ ಹಾಗೂ 34 ಕೋಟಿ ರು. ಅನುದಾನ ಮಂಜೂರು ಮಾಡಿದೆ.
ಚೀನಾ ಹಣಿಯಲು ಮೋದಿ ಸೂಕ್ತ: ನಮೋ ಮೇಲೆ ಶೇ. 89ರಷ್ಟು ಜನರಿಗೆ ನಂಬಿಕೆ!
undefined
50 ಸಾವಿರ ಸ್ವದೇಶಿ ವೆಂಟಿಲೇಟರ್ ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಆ ಪೈಕಿ ಈಗಾಗಲೇ 3000 ವೆಂಟಿಲೇಟರ್‌ಗಳು ತಯಾರಾಗಿದ್ದು, ಅದರಲ್ಲಿ 1300 ವೆಂಟಿಲೇಟರ್‌ಗಳನ್ನು ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಿದೆ. ಕೊರೋನಾದಿಂದ ಹೆಚ್ಚು ನಲುಗಿರುವ ಮಹಾರಾಷ್ಟ್ರ ಹಾಗೂ ದೆಹಲಿಗೆ ತಲಾ 275, ಗುಜರಾತ್‌ಗೆ 175, ಬಿಹಾರಕ್ಕೆ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್‌ಗಳನ್ನು ಕೊಡಲಾಗಿದೆ.
ವಲಸೆ ಕಾರ್ಮಿಕರ ಸಾಗಣೆಗಾಗಿ ಕರ್ನಾಟಕಕ್ಕೆ 34 ಕೋಟಿ ರು. ಕೊಟ್ಟಿದೆ. ಮಹಾರಾಷ್ಟ್ರಕ್ಕೆ 181 ಕೋಟಿ, ಉತ್ತರಪ್ರದೇಶಕ್ಕೆ 103, ತಮಿಳುನಾಡಿಗೆ 83, ಗುಜರಾತ್‌ಗೆ 66, ದೆಹಲಿಗೆ 55, ಪಶ್ಚಿಮ ಬಂಗಾಳಕ್ಕೆ 53, ಬಿಹಾರಕ್ಕೆ 51, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ತಲಾ 50 ಕೋಟಿ ರು. ಸಿಕ್ಕಿದೆ.
'ಬಿಜೆಪಿ ಸರ್ಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ವಿಫಲ'
ಪಿಎಂ ಕೇರ್ಸ್ ನಿಧಿಯಡಿ 3100 ಕೋಟಿ ರು. ಅನ್ನು ಮೇ 14ರಂದು ಮಂಜೂರು ಮಾಡಿದ್ದ ಕೇಂದ್ರ ಸರ್ಕಾರ ಆ ಪೈಕಿ 2 ಸಾವಿರ ಕೋಟಿ ರು.ಗಳನ್ನು 50 ಸಾವಿರ ವೆಂಟಿಲೇಟರ್ ಖರೀದಿಗೆ ಬಳಲು ಉದ್ದೇಶಿಸಿತ್ತು. ವಲಸಿಗ ಕಾರ್ಮಿಕರ ಸೌಲಭ್ಯಕ್ಕೆ 1000 ಕೋಟಿ ರು. ನೀಡುವುದಾಗಿ ತಿಳಿಸಿತ್ತು.