ನನ್ನನ್ನು ಸೇರಿದಂತೆ ರಾಜಕಾರಣದಲ್ಲಿ ಯಾರೂ ನೈತಿಕತೆ ಉಳಿಸಿಕೊಂಡಿಲ್ಲ: ಎಚ್‌ಡಿಕೆ!

By Web Desk  |  First Published Nov 23, 2019, 12:02 PM IST

ಮಹಾರಾಷ್ಟ್ರದಲ್ಲಿ ಬಿಜೆಪಿ ಎನ್‌ಸಿಪಿ ಸರ್ಕಾರ ರಚನೆ ವಿಚಾರ ದೇವ್ರೇ ಕಾಪಾಡಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ| ಇಷ್ಟು ದಿನ ಎನ್‌‌ಸಿಪಿ, ಶಿವಸೇನೆ ಸರ್ಕಾರ ರಚನೆ ಮಾಡ್ತಾರೆ ಅಂತಿದ್ರು, ಆದ್ರೀವತ್ತು ಬಿಜೆಪಿ ಎನ್‌‌ಸಿಪಿ ಸರ್ಕಾರ ರಚನೆ ಮಾಡಿದೆ| ಶರದ್ ಪವಾರ್ ಬಿಜೆಪಿಯ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದವರು, ಇವತ್ತು ರಾಜಕಾರಣದಲ್ಲಿ ನೈತಿಕತೆ ಉಳಿದುಕೊಂಡಿಲ್ಲ


ಬೆಂಗಳೂರು[ನ.23]: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಪ್ರಹಸನ ಸರ್ಕಾರ ರಚಿಸಲು ತಯಾರಾಗಿದ್ದ ಶಿವಸೇನೆ ಹಾಗೂ ಕಾಂಗ್ರೆಸ್ ಗೆ ಬಹುದೊಡ್ಡ ಆಘಾತ ನೀಡಿದೆ. ಮಹಾರಾಷ್ಟ್ರದಲ್ಲಾದ ಈ ಕ್ಷಿಪ್ರ ಕ್ರಾಂತಿ ಇಡೀ ದೇಶದ ರಾಜಕೀಯ ವಲಯದಲ್ಲೇ ಸಂಚಲನ ಮೂಡಿಸಿದೆ. ಶಿವಸೇನೆ ಹಾಗೂ ಕಾಂಗ್ರೆಸ್ ನಾಯಕರು ಇದು ವಂಚನೆ ಎಂದು ಬಣ್ಣಿಸಿದ್ದಾರೆ. ಹೀಗಿರುವಾಗ ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್, ಡಿ ಕುಮಾರಸ್ವಾಮಿ ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.

"

Latest Videos

undefined

'ಮಹಾಶಯರು 9 ಗಂಟೆವರೆಗೆ ನಮ್ಮೊಂದಿಗೇ ಇದ್ರು ಬಳಿಕ ನಾಪತ್ತೆ, ಮೊಬೈಲೂ ಸ್ವಿಚ್ ಆಫ್'!

ಮಹಾರಾಷ್ಟ್ರ ರಾಜಕೀಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಚ್. ಡಿ. ಕುಮಾರಸ್ವಾಮಿ 'ಮಹಾರಾಷ್ಟ್ರವನ್ನು ದೇವರೇ ಕಾಪಾಡಬೇಕು. ಇಷ್ಟು ದಿನ ಎನ್‌‌ಸಿಪಿ, ಶಿವಸೇನೆ ಸರ್ಕಾರ ರಚನೆ ಮಾಡ್ತಾರೆ ಅಂತಿದ್ರು, ಆದರೆ ಈಗ ಬಿಜೆಪಿ ಎನ್‌‌ಸಿಪಿ ಸರ್ಕಾರ ರಚನೆ ಮಾಡಿದೆ. ಶರದ್ ಪವಾರ್ ಬಿಜೆಪಿಯ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದವರು. ಇವತ್ತು ರಾಜಕಾರಣದಲ್ಲಿ ನೈತಿಕತೆ ಉಳಿದುಕೊಂಡಿಲ್ಲ' ಎಂದು ನುಡಿದಿದ್ದಾರೆ.

ಇನ್ನು ಕರ್ನಾಟಕದಲ್ಲಾದ ರಾಜಕೀಯ ಹಾಗೂ ಮಹಾರಾಷ್ಟ್ರದಲ್ಲಾದ ಬೆಳವಣಿಗೆಯನ್ನು ತಾಳೆ ಹಾಕಿ ಮಾತನಾಡಿದ ಮಾಜಿ ಸಿಎಂ 'ನನ್ನನ್ನು ಸೇರಿದಂತೆ  ರಾಜಕಾರಣದಲ್ಲಿ ಯಾರು ಕೂಡ ನೈತಿಕತೆಯನ್ನ ಉಳಿಸಿಕೊಂಡಿಲ್ಲ. ಸಿದ್ದಾಂತಗಳಿಗೆ ಬೆಲೆ ಇಲ್ಲದಂತಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಲಾಲ್ ಯಾದವ್ ಜೊತೆ ಸೇರಿಕೊಂಡಿದ್ರು, ಆನಂತರ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ರು' ಎಂದಿದ್ದಾರೆ.

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

ಮಹಾರಾಷ್ಟ್ರ ಸರರ್ಕಾರ ಉಳಿವಿನ ಬಗ್ಗೆಯೂ ಪ್ರಸ್ತಾಪಿಸಿದ ಕುಮಾರಸ್ವಾಮಿ 'ಮಹಾರಾಷ್ಟ್ರದಲ್ಲಿ ಅಗತ್ಯ ಸ್ಥಾನಗಳನ್ನು ಬಿಜೆಪಿ, ಎನ್‌ಸಿಪಿ ಹೊಂದಿವೆ. ಎಷ್ಟು ದಿನ ಸರ್ಕಾರ ಇರುತ್ತೆ ಅನ್ನೋದನ್ನ ನೋಡೋಣ' ಎಂದಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಹಲವು ಸುದ್ದಿಗಳು

click me!