
ಧಾರವಾಡ (ನ.12): ರಾಜ್ಯದಲ್ಲಿರುವ ದೊಡ್ಡ ದೊಡ್ಡ ಗುಡಿ ಗುಂಡಾರಗಳು ವಕ್ಪ್ ಆಸ್ತಿ ಎಂದು ಹೇಳುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಒಬ್ಬ ರಾಕ್ಷಸ, ಹಳುಗಳು ಬಿದ್ದು ಸಾಯ್ತಾನೆ. ಇವನು ಇಸ್ಲಾಂ ಧರ್ಮವನ್ನು ಕೆಡಿಸುತ್ತಿದ್ದಾನೆ. ಸ್ವತಃ ಅಲ್ಲಾಹುನೇ ಹರಾಮಿ ಆಸ್ತಿ ತಗೋಬಾರದು, ನಿಯತ್ತಾಗಿ ದುಡಿರಿ, ನಿಯತ್ತಾಗಿ ಜಾಗ ತಗೋರಿ ಎಂದಿದ್ದಾನೆ. ಈ ಗೆಜೆಟ್ ತೆಗೆದಾಗ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಮುಸ್ಲಿಂ ಮುಖಂಡ ಅಯೂಫ್ ಹೇಳಿದ್ದಾರೆ.
ಧಾರವಾಡದಲ್ಲಿ ವಕ್ಫ್ ವಿವಾದ ಕುರಿತು ಧಾರವಾಡದಲ್ಲಿ ವಿಶ್ವಹಿಂದೂ ಪರಿಷ್ಯತ್ ಮತ್ತು ಬಜರಂಗದಳ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಬಂದಾಗಿಂದ ಎಲ್ಲ ಆಸ್ತಿ ನಮ್ಮದೆ ಎಂದು ಹೇಳುತ್ತಾರೆ. ಎಲ್ಲವೂ ವಕ್ಪ್ ಆಸ್ತಿ ನಮ್ಮದೆ ಎಂದು ಹೇಳುತ್ತಾರೆ. 1937 ರಿಂದ ನಮ್ಮಆಸ್ತಿ ಸಬ್ ರೆಜಿಸ್ಟರ ಕಚೇರಿಯಲ್ಲಿ ಡೀಡ್ ಆಗಿದೆ. 1975 ರಲ್ಲಿ ವಕ್ಪ್ ಎಂದು ನಮ್ಮಆಸ್ತಿಗೆ ಬರ್ತಾರೆ, ನಾವು ಯಾವ ಹರಾಮಿ ಆಸ್ತಿಯನ್ನ ತೆಗೆದುಕೊಂಡಿಲ್ಲ. ಅದೇನು ವಕ್ಪ್ ಆಸ್ತಿಯಲ್ಲ. ಜಮೀರ್ ಅಹ್ಮದ್ ಹೇಳ್ತಾನೆ..ದೊಡ್ಡ ದೊಡ್ಡ ಗುಡಿ ಗುಂಡಾರಗಳು ವಕ್ಪ್ ಆಸ್ತಿ ಎಂದು ಹೇಳುತ್ತಾನೆ. ಜಮೀರ್ ಅಹ್ಮದ್ ರಾಕ್ಷಸ, ಹಳುಗಳು ಬಿದ್ದು ಸಾಯ್ತಾನೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಡಾ.ಬಿ.ಆರ್. ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ದವಾಗಿದ್ದರು; ಅಜ್ಜಂಪೀರ್ ಖಾದ್ರಿ
ಸ್ವತಃ ಅಲ್ಲಾಹುನೆ ಹೇಳ್ತಾನೆ ನಮ್ಮ ಜಾತಿಯಲ್ಲಿ ಹರಾಮಿ ಆಸ್ತಿ ತುಗೊಬಾರದು ಎಂದು. ಇವರೆಲ್ಲ ರಾಕ್ಷಸರು, ಮನುಷ್ಯರಲ್ಲ ಇವರು. ಈ ಗೆಜೆಟ್ ತೆಗೆದಾಗ ಮಾತ್ರ ಎಲ್ಲರಿಗೂ ಒಳ್ಳೆಯದಾಗುತ್ತದೆ. ನಿಯತ್ತಾಗಿ ದುಡಿರಿ, ನಿಯತ್ತಾಗಿ ಜಾಗ ತಗೋರಿ, ಎಂದು ಅಲ್ಲಾ ಹೇಳ್ತಾನೆ. ಆದ್ದರಿಂದ ವಕ್ಫ್ ಆಸ್ತಿಯ ಕುರಿತಾದ ಗೆಜೆಟ್ ನೋಟಿಪಿಕೇಶನ್ ರದ್ದಾಗಬೇಕು. ವಕ್ಪ್ ಬೋರ್ಡನಲ್ಲಿ ಇವರೆ ಸಾಹೇಬರು. ವಕ್ಪ್ ಬೋರ್ಡ ಟ್ರಿಬ್ಯೂನಲ್‌ನಲ್ಲಿ ಎಲ್ಲರೂ ಮುಸ್ಲಿಂ ಜನರೆ ಇರ್ತಾರೆ. ಅಲ್ಲಿ ನಾವೇ ಜಡ್ಜ್, ಪೋಲಿಸ್ ಹಾಗೂ ಸಾಹೇಬ್ರು ನಾವೇ ಆಗಿರುತ್ತೇವೆ. ವಕ್ಪ್ ಬೋರ್ಡ ಕಮಿಟಿಯಲ್ಲೆ ಎಲ್ಲರೂ ಅವರೆ ಇರ್ತಾರೆ. ಆದ್ದರಿಂದಲೇ ಇಂತಹ ಹಲಕಟ್ ಗೇರಿ ಮಾಡ್ತಾರೆ ಎಂದು ಕಿಡಿಕಾರಿದರು.
ನಾವು ದುಡಿಯುತ್ತೇವೆ ತಿಂತೇವೆ ಇದರಲ್ಲಿ ಇವರದ್ದೇನಿದೆ. ಇಸ್ಲಾಂ ಧರ್ಮವನ್ನ ಜಮೀರ್ ಅಹ್ಮದ್ ಕೆಡಸುತ್ತಿದ್ದಾರೆ. ಅಲ್ಲಾನೆ ನಿಮಗೆ ಮುಂದಿನ ದಿನಗಳಲ್ಲಿ ನೋಡಿಕ್ಕೊಳ್ಳುತ್ತಾನೆ ಎಂದು ಆಕ್ರೋಶ ಹೊರ ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ