ಖರ್ಚಿಗೆ ಒಂದಿಷ್ಟು ಕೊಡಿ? ನಾಚಿಕೆ ಬಿಟ್ಟು ರೈತನ ಬಳಿ ಲಂಚ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ

Published : Apr 02, 2026, 09:55 AM IST
Forest police Officer

ಸಾರಾಂಶ

ಆನೆ ದಾಳಿಯಿಂದಾದ ಬೆಳೆ ಹಾನಿ ವರದಿ ಸಿದ್ಧಪಡಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು, ರೈತರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. "ಖರ್ಚಿಗೆ ಏನಾದರೂ ಕೊಡಿ, ಹೆಚ್ಚು ಹಾನಿ ಎಂದು ಬರೆಯುತ್ತೇನೆ" ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು: ರಾಜ್ಯದ ಅರಣ್ಯ ಇಲಾಖೆಯ ಸಿಬ್ಬಂದಿ ರೈತರೊಬ್ಬರ ಬಳಿ ಲಂಚ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಟ್ಯಾಗ್ ಮಾಡಿ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಯಾವುದೇ ಅಂಜಿಕೆ, ನಾಚಿಕೆ ಇಲ್ಲದೇ ಅಧಿಕಾರಿ, ಖರ್ಚಿಗೆ ಏನಾದರೂ ಕೊಡ್ತೀರಾ ಎಂದು ಕೇಳುತ್ತಾನೆ. ರೈತ ಲಂಚ ನೀಡಲು ಒಪ್ಪಲ್ಲ. ಈ ಎಲ್ಲಾ ದೃಶ್ಯಗಳನ್ನು ರಹಸ್ಯವಾಗಿ ಸೆರೆ ಹಿಡಿದುಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ.

ಅರಣ್ಯ ಪ್ರದೇಶದ ಗಡಿಯಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಯಾಗಿರುತ್ತವೆ. ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡುವ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಶೀಲನೆ ನೀಡಿ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತಾರೆ. ಈ ವರದಿಯನ್ನಾಧರಿಸಿ ಸರ್ಕಾರ, ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದೇ ರೀತಿ ವರದಿ ಸಿದ್ಧಪಡಿಸಲು ತೆರಳಿದ ಅಧಿಕಾರಿ, ಖರ್ಚಿಗೆ ಹಣ ಕೇಳಿದ್ದಾನೆ. ಈತನಿಗೆ ಸರ್ಕಾರದಿಂದ ಸಂಬಳ ಸಿಗಲ್ಲವಾ? ಬೆಳೆಹಾನಿಯಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ರೈತರ ಬಳಿ ಲಂಚ ಕೇಳುತ್ತಿದ್ದಾನೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾನೂನು ಕ್ರಮಕ್ಕೆ ಆಗ್ರಹ

ರವಿ ಕೀರ್ತಿ ಗೌಡ ಎಂಬವರು ತಮ್ಮ ಎಕ್ಸ್ (@ravikeerthi22) ಖಾತೆಯಲ್ಲಿ ಅಧಿಕಾರಿ ಲಂಚ ಕೇಳುವ ವಿಡಿಯೋ ಹಂಚಿಕೊಂಡಿದ್ದಾರೆ. ಆನೆ ದಾಳಿಯಿಂದ ಅಡಿಕೆ, ಬಾಳೆ ಬೆಳೆ ಕಳೆದುಕೊಂಡ ರೈತ ನಷ್ಟದ ವಿವರ ಬರೆಯುವ ಮುನ್ನವೇ ಲಂಚ ಕೇಳಿದ ಫಾರೆಸ್ಟ್ ಆಫೀಸರ್ 'ನೀವು ಖರ್ಚಿಗೆ ಏನಾದರೂ ಕೊಟ್ಟರೆ ನಾನು ಜಾಸ್ತಿ ಬರೀತೀನಿ, ಇಲ್ಲಾಂದ್ರೆ ಅಷ್ಟೇ ಬರೀತೀನಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ್ನು ಸಚಿವ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆಯ ಅಧಿಕೃತ ಎಕ್ಸ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಈಗ ಆನೆ ದಾಳಿಗೆ 65 ಗಿಡ ನಾಶವಾಗಿರೋದು ಸಿಕ್ಕಿದೆ. ಈಗ ನೀವು ಖರ್ಚಿಗೆ ಏನಾದರೂ ಕೊಡ್ತೀರಿ ಅಂದ್ರೆ ಹೆಚ್ಚಿಗೆ ಮರಗಳ ಸಂಖ್ಯೆ ಬರೆಯುತ್ತೇನೆ. ಏನು ಕೊಡಲ್ಲ ಅಂದ್ರೆ ಎಷ್ಟಿದೆಯೋ ಅಷ್ಟೇ ಬರೆಯುತ್ತೇನೆ. ಖರ್ಚಿಗೆ ಹಣ ಈಗಲೇ ಕೊಡಬೇಕೆಂದು ಅಧಿಕಾರಿ ಡಿಮ್ಯಾಂಡ್ ಮಾಡುತ್ತಾರೆ. ಅಧಿಕಾರಿ ಏನೇ ಕೇಳಿದರೂ ರೈತ ಮಾತ್ರ ಹೂಂ ಅಂತ ಹೇಳುವದನ್ನು ಕೇಳಿಸಿಕೊಳ್ಳಬಹುದು. ಬಹುಶಃ ರೈತ ಲಂಚ ನೀಡಲು ಒಪ್ಪದ ಹಿನ್ನೆಲೆ ವರದಿಯಲ್ಲಿ 65 ಗಿಡಗಳೆಂದು ಅಧಿಕಾರಿ ದಾಖಲಿಸಿದ್ದಾನೆ.

ಇದನ್ನೂ ಓದಿ: ರಿಸರ್ವೇಶನ್ ಇರಲಿಲ್ಲ, ಟಾಯ್ಲೆಟ್ ಬಳಿ ಮಲಗಿದ್ದ ಸೈನಿಕರಿಗೆ ಸೀಟ್ ಕೊಟ್ಟ TTE; ಹೃದಯ ಗೆದ್ದ ವಿಡಿಯೋ

ಹೆಚ್ಚು ಬೆಳೆ ಹಾನಿ ಅಂತ ಉಲ್ಲೇಖಿಸಿದ್ರೆ ಸರ್ಕಾರದಿಂದ ಅಧಿಕ ಪರಿಹಾರ ಸಿಗಲಿದ ಎಂಬ ಆಸೆಯನ್ನು ಅರಣ್ಯ ಅಧಿಕಾರಿಯೇ ಪರೋಕ್ಷವಾಗಿ ಹೇಳುತ್ತಾನೆ. ಈ ಮೂಲಕ ಸುಳ್ಳು ಮಾಹಿತಿ ನೀಡಿ ಸರ್ಕಾರಕ್ಕೆ ಮೋಸ ಮಾಡೋದು ಅಧಿಕಾರಿಯ ಉದ್ದೇಶ ಎಂಬುವುದು ಸ್ಪಷ್ಟವಾಗುತ್ತದೆ. ಈ ವಿಡಿಯೋ ಎಲ್ಲಿಯದ್ದು? ಈ ಅರಣ್ಯ ಅಧಿಕಾರಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಇದನ್ನೂ ಓದಿ: Hubballi: ನೈಋತ್ಯ ರೈಲ್ವೆಯಿಂದ ದಾಖಲೆಗಳ ಮೇಲೆ ದಾಖಲೆ; ಆದಾಯ ಕೇಳಿದ್ರೆ ಶಾಕ್ ಆಗ್ತೀರಿ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: ಶೀಘ್ರದಲ್ಲೇ ವೇತನ ಹೆಚ್ಚಳ ಫಿಕ್ಸ್‌? ಏ.6ರಂದು ಮಹತ್ವದ ಸಭೆ
ಧರ್ಮಸ್ಥಳ ವಿರುದ್ಧ ವರದಿ: ಸಮೀರ್‌ ಮೇಲಿನ ಕೇಸ್‌ ತನಿಖೆಗೆ ಹೈಕೋರ್ಟ್ ತಡೆ