
ವಿಜಯಪುರ (ನ.08) ಕಳೆದ ಕೆಲ ದಿನಗಳಿಂದ ಸರ್ಕಾರದ ನಿದ್ದೆಗೆಡಿಸಿದ ಕಬ್ಬು ಬೆಳೆಗಾರರ ಹೋರಾಟ ಅಂತ್ಯಗೊಂಡಿದೆ. ಹೋರಾಟಗಾರರ ಬೇಡಿಕೆಯಂತೆ ಕಬ್ಬಿನ ದರ ನಿಗದಿ ಮಾಡಲಾಗಿದೆ. ಜಿಲ್ಲಾಧಿಕಾರಿ ಆನಂದ ಕೆ ಕಬ್ಬಿನ ದರ ನಿಗಧಿ ಮಾಡಿದ ಆದೇಶ ಪ್ರತಿಯನ್ನ ರೈತರಿಗೆ ನೀಡಿದ ಬಳಿಕ ಹೋರಾಟಗಾರರು ಧರಣಿ ಅಂತ್ಯಗೊಳಿಸಿದ್ದಾರೆ. ಆದರೆ ಧರಣಿ ಅಂತ್ಯಗೊಳಿಸುವಾಗ ರೈತರು ಕೆಲ ಷರತ್ತುಗಳನ್ನು ಹಾಕಿದ್ದಾರೆ. ಇಷ್ಟೇ ಅಲ್ಲ 100 ರೂಪಾಯಿ ರಿಕವರಿ ಗೊಂದಲವೂ ಸೃಷ್ಟಿಯಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ ಬಳಿಕ ಧರಣಿ ಅಂತ್ಯಗೊಂಡಿದೆ.
ರಿಕವರಿ ವಿಚಾರದಲ್ಲಿ ಗೊಂದಲಕ್ಕಿಡಾಗಿದ್ದ ವಿಜಯಪುರ ಹೋರಾಟಗಾರರಿಗೆ ಆದೇಶವನ್ನು ಮನವರಿಕೆ ಮಾಡಿಕೊಡಲಾಗಿದೆ. ರಿಕವರಿ ನೋಡದೆ 100 ರೂಪಾಯಿ ಕೊಡಬೇಕು ಎನ್ನುವುದು ಆದೇಶದಲ್ಲಿ ಇದೆ ಎಂದು ಜಿಲ್ಲಾಧಿಕಾರಿ ರೈತರಿಗೆ ಮನವರಿಕೆ ಮಾಡಿದ್ದಾರೆ. ರಿಕವರಿಗೂ 100 ರೂಪಾಯಿಗು ಸಂಬಂಧ ಇಲ್ಲ. 100 ರೂ ರೈತರ ಖಾತೆಗೆ ಜಮೆ ಆಗಲಿದೆ. 3200 ದರ ರಿಕವರಿಗೆ ಆಧರಿಸಿ ಅನ್ವಯ ಎನ್ನುವುದನ್ನ ಮನವರಿಕೆ ಮಾಡಿದ್ದಾರೆ. ಹೋದ ವರ್ಷಕ್ಕಿಂತ ಈ ಬಾರಿ ಹೆಚ್ಚಿಗೆ ದರ ಸಿಗಲಿದೆ ಎಂದಿದ್ದಾರೆ. ಈ ಮೂಲಕ ರೈತರಲ್ಲಿದ್ದ ಗೊಂದಲಕ್ಕೆ ತೆರೆ ಎಳೆದಿದ್ದರೆ. ರೈತರ ಮುಂದೆ ಜಿಲ್ಲಾಧಿಕಾರಿ ಆದೇಶ ಪ್ರತಿ ಓದಿದ್ದಾರೆ. ಡಿಸಿ ಆದೇಶ ಓದಿ ಹೇಳಿದ ಬಳಿಕ ಒಪ್ಪಿಗೆ ಸೂಚಿಸಿ ಕಬ್ಬು ಬೆಳೆಗಾರರು ಹೋರಾಟ ಹಿಂಪಡೆದಿದ್ದಾರೆ.
ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹೋರಾಟದಿಂದ ವಿವಿಧ ಭಾಗದಲ್ಲಿ ರೈತರು ಹೋರಾಟ ಆರಂಭಿಸಿದ್ದರು. ಖದ್ದು ಸಚಿವ ಶಿವಾನಂದ ಪಾಟೀಲ ಅವರು ಸರಕಾರದ ಆದೇಶದ ಪ್ರತಿ ಹಿಡಿದು ಗುರ್ಲಾಪುರ ರೈತರ ಬಳಿ ತೆರಳಿದ್ದಾರೆ. ರೈತರಿಗೆ ಆದೇಶ ಪ್ರತಿ ನೀಡಿದ್ದಾರೆ. ಆದೇಶ ಪ್ರತಿ ಸಿಕ್ಕ ಬಳಿಕ ರೈತರು ಹೋರಾಟ ಕೈಬಿಟ್ಟಿದ್ದಾರೆ. ಕಳೆದ 9 ದಿನಗಳಿಂದ ನಡೆದಿದ್ದ ಹೋರಾಟಕ್ಕೆ ಅಂತ್ಯ ಹಾಡಿದ್ದಾರೆ. ತಮ್ಮ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದು ರೈತರು ಸಂಭ್ರಮ ಆಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ