ಚುನಾವಣೆ ವೆಚ್ಚ ವಿವರ ನೀಡದ ಶಾಸಕರು ಅನರ್ಹ: ಚುನಾವಣಾ ಆಯೋಗ ಸೂಚನೆ

By Kannadaprabha NewsFirst Published May 17, 2023, 1:48 AM IST
Highlights

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜೂನ್‌ 17ರೊಳಗಾಗಿ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸದಿದ್ದರೆ ಶಾಸಕರಾಗಿ ಆಯ್ಕೆಯಾದವರು ತಮ್ಮ ಸ್ಥಾನದಿಂದ ಪದಚ್ಯುತರಾಗಲಿದ್ದು, ಸೋತ ಅಭ್ಯರ್ಥಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

- ಗಿರೀಶ್‌ ಗರಗ

ಬೆಂಗಳೂರು (ಮೇ.17) : ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜೂನ್‌ 17ರೊಳಗಾಗಿ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸದಿದ್ದರೆ ಶಾಸಕರಾಗಿ ಆಯ್ಕೆಯಾದವರು ತಮ್ಮ ಸ್ಥಾನದಿಂದ ಪದಚ್ಯುತರಾಗಲಿದ್ದು, ಸೋತ ಅಭ್ಯರ್ಥಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

Latest Videos

ಚುನಾವಣಾ ಆಯೋಗ(Karnataka election commission) ವಿಧಾನಸಭೆ ಚುನಾವಣೆ(Karnataka assembly election 2023)ಯಲ್ಲಿ ಪ್ರತಿ ಅಭ್ಯರ್ಥಿಯ ವೆಚ್ಚದ ಮಿತಿಯನ್ನು 40 ಲಕ್ಷ ರು.ಗೆ ನಿಗದಿ ಮಾಡಿದೆ. ಆ ಮೊತ್ತದಲ್ಲಿಯೇ ಚುನಾವಣಾ ರಾರ‍ಯಲಿ, ಸಮಾವೇಶ, ಪ್ರಚಾರ ಸಾಮಗ್ರಿ, ಪ್ರಚಾರ ಸೇರಿ ಇನ್ನಿತರ ವೆಚ್ಚವನ್ನು ನಿಗದಿಪಡಿಸಿದ ಮಿತಿಯಲ್ಲೇ ಮಾಡಬೇಕಾಗುತ್ತದೆ. ಈ ವೆಚ್ಚಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.ಒಂದು ವೇಳೆ ಖರ್ಚು-ವೆಚ್ಚದ ವಿವರ ಸಲ್ಲಿಸದಿದ್ದರೆ ಹಾಗೂ ನಿಗದಿಗಿಂತ ಹೆಚ್ಚಿನ ಖರ್ಚು ಮಾಡಿದ್ದರೆ ಶಾಸಕರಾಗಿ ಆಯ್ಕೆಯಾದವರನ್ನು ವಜಾ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಅದೇ ರೀತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬಹುದಾಗಿದೆ.

 

ಚುನಾವಣಾ ನೀತಿ ಸಂಹಿತೆ ಹಿಂಪಡೆದ ಆಯೋಗ,ತಕ್ಷಣದಿಂದಲೇ ಜಾರಿ!

37 ದಿನಗಳಲ್ಲಿ ನೀಡಬೇಕು:

ಚುನಾವಣಾ ಆಯೋಗದ ನಿಯಮದಂತೆ ಮತದಾನವಾದ ನಂತರದ ಅಭ್ಯರ್ಥಿಗಳು 37 ದಿನಗಳಲ್ಲಿ ಅಂದರೆ ಜೂನ್‌ 17ರೊಳಗೆ ಚುನಾವಣಾ ಖರ್ಚಿನ ಮಾಹಿತಿ ಕೊಡಬೇಕಿದೆ. ಅದಕ್ಕೂ ಮುನ್ನ ಚುನಾವಣೆಗೆ ನಾಮಪತ್ರ ಸಲ್ಲಿಸಿದವರು ಪ್ರತಿ ದಿನ ಖರ್ಚನ್ನು ಖರ್ಚು ವೆಚ್ಚ ಮೇಲ್ವಿಚಾರಣಾ ಅಧಿಕಾರಿಗಳಿಗೆ ನೀಡಬೇಕು. ಅದನ್ನು ಮಾಡದಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಅಲ್ಲದೆ, ಚುನಾವಣೆಯ ಖರ್ಚಿನ ಕುರಿತ ಮಾಹಿತಿಯನ್ನು ನೀಡಲು ವಿಫಲರಾದ ಅಭ್ಯರ್ಥಿಗಳ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬಹುದಾಗಿದೆ. ಒಂದು ವೇಳೆ ಲೆಕ್ಕ ಕೊಡಲು ವಿಫಲರಾದವರು ಅಥವಾ ನಿಗದಿತ 40 ಲಕ್ಷ ರು.ಗಿಂತ ಹೆಚ್ಚಿನ ಮೊತ್ತ ವ್ಯಯಿಸಿದ್ದವರು ಶಾಸಕರಾಗಿ ಆಯ್ಕೆಯಾಗಿದ್ದರೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು.

ಬೆಂಗಳೂರಲ್ಲಿ 389 ಅಭ್ಯರ್ಥಿಗಳಿಗೆ ತರಬೇತಿ:

ಚುನಾವಣಾ ವೆಚ್ಚದ ಪಟ್ಟಿಸಲ್ಲಿಸುವ ಕುರಿತಂತೆ ಬೆಂಗಳೂರು ಚುನಾವಣಾ ವಿಭಾಗ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್ಲ 389 ಅಭ್ಯರ್ಥಿಗಳಿಗೆ ಜೂನ್‌ 6ರಂದು ತರಬೇತಿ ನೀಡಲಿದೆ. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಖರ್ಚು-ವೆಚ್ಚ ಮೇಲ್ವಿಚಾರಣಾ ಅಧಿಕಾರಿ ಸೇರಿ ಇನ್ನಿತರರು ತರಬೇತಿ ನೀಡಲಿದ್ದಾರೆ. ಪ್ರತಿ ಕ್ಷೇತ್ರದ ಅಭ್ಯರ್ಥಿಗೂ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತಿದೆ.

ಇದಾದ ನಂತರ ಜೂನ್‌ 8ರಂದು ಕ್ಷೇತ್ರವಾರು ಖರ್ಚು-ವೆಚ್ಚ ಮೇಲ್ವಿಚಾರಣಾ ಅಧಿಕಾರಿಗಳು ತಾವು ಸಿದ್ಧಪಡಿಸಿದ ಅಭ್ಯರ್ಥಿಗಳ ಖರ್ಚಿನ ಕುರಿತ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಅಭ್ಯರ್ಥಿಗಳು ನೀಡುವ ಖರ್ಚಿನ ಪಟ್ಟಿಮತ್ತು ಖರ್ಚು-ವೆಚ್ಚ ಮೇಲ್ವಿಚಾರಣಾ ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯನ್ನು ತಾಳೆ ಮಾಡಲಿದ್ದಾರೆ.

Karnataka Election 2023: ಮತ​ದಾ​ನ​ದಲ್ಲಿ ರಾಮ​ನ​ಗರಕ್ಕೆ ರಾಜ್ಯ​ದ​ಲ್ಲಿಯೇ 2ನೇ ಸ್ಥಾನ

ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಜೂನ್‌ 17ರೊಳಗೆ ಎಲ್ಲರೂ ಚುನಾವಣಾ ವೆಚ್ಚದ ವರದಿ ನೀಡಬೇಕು. ಅದಕ್ಕಾಗಿ ಜೂನ್‌ 6ರಂದು ಬೆಂಗಳೂರಿನ 389 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಒಂದು ವೇಳೆ ಖರ್ಚಿನ ಲೆಕ್ಕ ನೀಡದಿದ್ದರೆ, ನಿಗದಿಗಿಂತ ಹೆಚ್ಚಿನ ವೆಚ್ಚ ಮಾಡುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶಾಸಕರಾಗಿದ್ದರೆ ಅವರ ಸ್ಥಾನದಿಂದ ವಜಾ ಮಾಡುವ ಅಧಿಕಾರವಿದೆ.

- ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ

click me!