ಸ್ಯಾಟ್ಸ್‌ ಮೂಲಕ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೆ ಚಾಲನೆ

By Kannadaprabha NewsFirst Published Aug 19, 2020, 7:02 AM IST
Highlights

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲಾ ಆಡಳಿತ ಮಂಡಳಿಗಳು, ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸಲು ಆಯಾ ಶಾಲಾ ಮುಖ್ಯಸ್ಥರಿಗೆ SATS ತಂತ್ರಾಂಶದ ಮೂಲಕ ಸಾಧನೆ ಅಳೆಯಲು ಲಾಗ್‌ಇನ್‌ ನೀಡಲಾಗಿದೆ. 

ಬೆಂಗಳೂರು (ಆ.19): ವಿದ್ಯಾರ್ಥಿ ಸಾಧನಾ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌) ತಂತ್ರಾಂಶದ ಮೂಲಕ ಶಾಲಾ ಮುಖ್ಯಸ್ಥರು ಶೈಕ್ಷಣಿಕ ಚಟುವಟಿಕೆ ಅನುಷ್ಠಾನಗೊಳಿಸಲು ನಿರ್ವಹಿಸಬೇಕಾದ ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 

ರಾಜ್ಯದ ಎಲ್ಲ ಶಾಲಾ ಆಡಳಿತ ಮಂಡಳಿಗಳು, ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳು ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸಲು ಆಯಾ ಶಾಲಾ ಮುಖ್ಯಸ್ಥರಿಗೆ ಲಾಗ್‌ಇನ್‌ ನೀಡಲಾಗಿದೆ. ಶಾಲಾ ಮುಖ್ಯಸ್ಥರು ತಮ್ಮ ಶಾಲಾ ಲಾಗಿನ್‌ ಮೂಲಕ ಚಟುವಟಿಕೆ ನಡೆಸಬೇಕು ಎಂದು ಸೂಚಿಸಿದೆ. 

2020-21ನೇ ಸಾಲಿನಲ್ಲಿ ನಡೆಯುವ UPSC ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ರಿಲೀಸ್...

ಕಳೆದ ಸಾಲಿನ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಪ್ರಕ್ರಿಯೆ, ವಿದ್ಯಾರ್ಥಿಗಳಿಗೆ ಪ್ರಗತಿ ಪತ್ರ ನೀಡುವುದು, ವಿದ್ಯಾರ್ಥಿಗಳ ವರ್ಗಾವಣೆ ಪತ್ರ, ಶಿಕ್ಷಕರ ಹಾಜರಾತಿ ಮಾಹಿತಿ, ವಿದ್ಯಾರ್ಥಿ ವೇತನ ಹಾಗೂ 10ನೇ ತರಗತಿ ಪರೀಕ್ಷೆ ನಾಮಿನಲ್‌ ರೋಲ್‌ ಪ್ರವೇಶ ಪತ್ರ ಸಿದ್ಧಪಡಿಸುವ ಕಾರ್ಯ ಸೇರಿದಂತೆ ವಿವಿಧ ಕಾರ್ಯದ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುವಂತೆ ತಿಳಿಸಿದೆ.

'ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3.65 ಕೋಟಿ ಉದ್ಯೋಗ ಸೃಷ್ಟಿ'...

ಶಾಲಾ ಮೂಲಭೂತ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ, ವಿದ್ಯಾರ್ಥಿಗಳನ್ನು ದಾಖಲಿಸುವುದು, ಪ್ರೋತ್ಸಾಹದಾಯಕ ಯೋಜನೆಯ ಮಾಹಿತಿ ದಾಖಲಿಸುವುದು, ವಿದ್ಯಾರ್ಥಿಗಳ ತಿಂಗಳವಾರು, ದೈನಂದಿನ ಹಾಜರಾತಿ ಮಾಹಿತಿ ದಾಖಲಿಸುವುದು, ಪಠ್ಯಪುಸ್ತಕದ ಮಾಹಿತಿ,

click me!