PUC ಫೇಲಾದ್ರೇನಂತೆ ಮತ್ತೊಂದು ಸಲ ಪರೀಕ್ಷೆ ಬರೆಯಿರಿ: ಇಲ್ಲಿದೆ ವೇಳಾಪಟ್ಟಿ

By Web DeskFirst Published Apr 16, 2019, 8:54 PM IST
Highlights

2019ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಜೂನ್‌ 7ರಿಂದ 18ರವರೆಗೆ ಪರೀಕ್ಷೆಗಳು ನಡೆಯಲಿವೆ. ಹಾಗಾದ್ರೆ ಯಾವ ದಿನ ಯಾವ ವಿಷಯ ಪರೀಕ್ಷೆ ನಡೆಯಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

ಬೆಂಗಳೂರು, (ಏ.16): 2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಇದ್ದು, ಜೂನ್ 7 ರಿಂದ 18 ರವರೆಗೆ ಪಿಯು ಪೂರಕ ಪರೀಕ್ಷೆಗಳು ನಡೆಯಲಿವೆ.

ವಾವ್..! ಪಂಕ್ಚರ್ ಹಾಕುತ್ತಲೇ PUC ಟಾಪರ್ ಆದ ಬಳ್ಳಾರಿಯ ಕುಸುಮ

ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 140, 2 ವಿಷಯಕ್ಕೆ 270, ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ.ಗಳು ಶುಲ್ಕ ನಿಗದಿಯಾಗಿದ್ದು, ಹಣ ಪಾವತಿಸಲು ಇದೇ ಮೇ 30 ಕೊನೆ ದಿನವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪಿಯುಸಿ First Rank ಸರದಾರರು

ಏ.30 ಕಡೇ ದಿನ 
ವಿದ್ಯಾರ್ಥಿಗಳು ಪೂರಕ ಪರೀಕ್ಷಾ ಶುಲ್ಕ ಪಾವತಿಸಲು ಹಾಗೂ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡಲು ಏ. 30 ಕಡೇ ದಿನ. ಕಾಲೇಜುಗಳು ಪರೀಕ್ಷಾ ಶುಲ್ಕವನ್ನು ಒಂದೇ ಕಂತಿನಲ್ಲಿ ಖಜಾನೆಗೆ ಸಂದಾಯ ಮಾಡಲು ಮೇ 2 ಕೊನೇ ದಿನ. ಕಾಲೇಜುಗಳು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್‌ಸಹಿತ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಲು ಮೇ 4 ಕಡೇ ದಿನವಾಗಿದೆ. 

ಪೂರಕ ಪರೀಕ್ಷೆಯ ವೇಳಾಪಟ್ಟಿ ಇಂತಿದೆ
ಜೂನ್. 7- ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ. 
ಜೂನ್. 8 - ಇಂಗ್ಲಿಷ್ (ಬೆಳಗ್ಗೆ), ಮಾಹಿತಿ ತಂತ್ರಜ್ಞಾನ ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್ (ಮಧ್ಯಾಹ್ನ).
ಜೂನ್. 10 - ಅರ್ಥಶಾಸ್ತ್ರ, ಭೌತಶಾಸ್ತ್ರ, 
ಜೂನ್.11-ಹಿಂದಿ (ಬೆಳಗ್ಗೆ), ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಕ್ಕ್, ಫ್ರೆಂಚ್ (ಮಧ್ಯಾಹ್ನ)
ಜೂನ್. 12 - ಕನ್ನಡ (ಬೆಳಗ್ಗೆ), ಭೂಗೋಳಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಭೂಗರ್ಭಶಾಸ್ತ್ರ (ಮಧ್ಯಾಹ್ನ)
ಜೂನ್.13 - ರಾಜ್ಯಶಾಸ್ತ್ರ, 
ಜೂನ್.14-ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, 
ಜೂನ್.15 -ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ, 
ಜೂನ್.17 - ಉರ್ದು, ಸಂಸ್ಕೃತ (ಬೆಳಗ್ಗೆ), ಐಚ್ಚಿಕ ಕನ್ನಡ (ಮಧ್ಯಾಹ್ನ). 
ಜೂನ್.18-ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ (ಬೆಳಗ್ಗೆ), ತರ್ಕಶಾಸ್ತ್ರ, ಮನಃಶಾಸ್ತ್ರ, ಗೃಹ ವಿಜ್ಞಾನ.ಬೇಸಿಕ್ ಮ್ಯಾಥ್ಸ್ (ಮಧ್ಯಾಹ್ನ) ಪರೀಕ್ಷೆಗಳು ನಡೆಯಲಿವೆ.

click me!