ವಾರ್ತಾ ಇಲಾಖೆ ದುರುಪಯೋಗ ಆರೋಪ; ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ

By Suvarna NewsFirst Published Aug 18, 2024, 7:26 PM IST
Highlights

ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದಿಂದ ವಾರ್ತಾ ಇಲಾಖೆ ಕಚೇರಿ ದುರುಪಯೋಗ ಆಗಿದೆ ಎಂದು ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶಗೊಂಡಿದ್ದಾರೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.18): ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದಿಂದ ವಾರ್ತಾ ಇಲಾಖೆ ಕಚೇರಿ ದುರುಪಯೋಗ ಆಗಿದೆ ಎಂದು ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶಗೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಅಧಿಕೃತ ಖಾತೆಯಿಂದ ವಾರ್ತಾ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಫೇಸ್ ಬುಕ್ ನಲ್ಲಿರುವ ಸಿಎಂ ಹೆಸರಿನ ಖಾತೆ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿದೆ. ಸಿಎಂ ಹೆಸರಿನ ಖಾತೆಯಿಂದ ರಾಜ್ಯಪಾಲರು, ಮೋದಿ, ಬಿಜೆಪಿಯನ್ನು ಟೀಕೆ ಮಾಡಲು ಬಳಕೆ ಮಾಡಲಾಗಿದೆ. ಸಿಎಂ ಆಫ್ ಕರ್ನಾಟಕ(CM of Karnataka facebook) ಎನ್ನುವ ಫೇಸ್ ಬುಕ್ ಖಾತೆ ಜನರಿಗೆ ಸರ್ಕಾರದ ಬಗ್ಗೆ ಮಾಹಿತಿ ನೀಡಲು ಮಾಡಲಾಗಿದೆ. ಆದ್ರೆ, ವಾರ್ತಾ ಇಲಾಖೆಯ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ತಿಳಿಸಲು ಹಾಗೂ ಬಿಜೆಪಿ, ಮೋದಿ, ರಾಜ್ಯಪಾಲರನ್ನು ಟೀಕೆ ಮಾಡಲು ಬಳಕೆ ಮಾಡುತ್ತಿದ್ದಾರೆ. ಸಿಎಂ ಹೆಸರಿನ ಖಾತೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಿರ್ವಹಿಸುತ್ತಿದ್ದಾರೋ ಅಥವಾ ವಾರ್ತಾಧಿಕಾರಿಗಳು ನಿರ್ವಹಿಸುತ್ತಿದ್ದರೋ ಎಂಬ ಅನುಮಾನ ಮೂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಾರ್ತಾ ಇಲಾಖೆ(DIPR Karnataka) ವಿರುದ್ದ ಸಿ.ಟಿ ರವಿ(CT Ravi) ಕಿಡಿಕಾರಿದ್ದಾರೆ.

Latest Videos

ಒಂದೇ ಸಂವಿಧಾನ ಇರೋದು : 

ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯಸಿ.ಟಿ. ರವಿ, 1950 ರಿಂದ 2024ರವರೆಗೂ ಒಂದೇ ಸಂವಿಧಾನ ಇರೋದು. 2011ರಲ್ಲಿ ಅಂದಿನ ಸಿಎಂ ಬಿ.ಎಸ್.ವೈ (BS Yadiyurappa)ಮೇಲೆ ಆರೋಪ ಬಂದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ರು. ಆಗ ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಎಲ್ಲರೂ ಅದನ್ನ ಸ್ವಾಗತಿಸಿದ್ರು. ರಾಜ್ಯಪಾಲರದ್ದು ಸಂವಿಧಾನಿಕ ಹುದ್ದೆ ಎಂದು ಸ್ವಾಗತ ಮಾಡಿದ್ರಿ. ಭ್ರಷ್ಟರು ಮಾತ್ರ ತನಿಖೆಗೆ ಹೆದರುತ್ತಾರೆ, ಭ್ರಷ್ಟಾಚಾರ ಮಾಡದಿದ್ರೆ ತನಿಖೆ ಏಕೆ ಭಯ ಎಂದಿದ್ರಿ. 13 ವರ್ಷಗಳ ಹಿಂದೆ ಅಂದಿನ ರಾಜ್ಯಪಾಲರ ಕ್ರಮವನ್ನೇ ಇಂದಿನ ರಾಜ್ಯಪಾಲರು ತೆಗೆದುಕೊಂಡಿದ್ದಾರೆ. ಅವತ್ತು ನೀವು ಹೇಳಿದ ಮಾತು ಇಂದು ನಿಮಗೆ ಅನ್ವಹಿಸಲ್ವಾ? ಅಂದು ಸ್ವಾಗತ ಮಾಡಿದ್ರಿ, ಇಂದು ಸ್ವಾಗತ ಮಾಡಿ ಎಂದು ಗುಡುಗಿದರು. ಅಂದು ಸ್ವಾಗತಿಸಿ ಇಂದು ಏಕೆ ವಿರೋಧ ಮಾಡ್ತೀರಾ, ನಿಮ್ಮ ಪ್ರಶ್ನೆಯನ್ನೇ ನಾವು ಕೇಳೋದಲ್ವಾ. ನೀವು ಭ್ರಷ್ಟಾಚಾರ ಮಾಡಿದ್ದೀರಾ ಅದಕ್ಕೆ ಹೆದರುತ್ತಿದ್ದೀರಾ? ರಾಜ್ಯಪಾಲರು ಈಗ ನಿಷ್ಪಕ್ಷಪಾತ ತನಿಖೆಗೆ ಅಷ್ಟೆ ಅನುಮತಿ ನೀಡಿದ್ದಾರೆ. ಸಿಎಂ ಭ್ರಷ್ಟಾಚಾರ ಮಾಡಿದ್ದಾರೆ ಅಂತ ಹೇಳಿಲ್ಲ, ಜಡ್ಜ್ ಮೆಂಟ್ ಕೊಡೋ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಸಿಟಿ ರವಿ ಹೇಳಿದರು.

ಪ್ರಾಸಿಕ್ಯೂಷನ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ; 'ಇದೇನಾ ನಿಮ್ಮ ಸಂವಿಧಾನ ರಕ್ಷಣೆ?' ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ!

ಸಿಎಂ ಭಯ ಏಕೆ ಬೀಳಬೇಕು?

 ಸಿಎಂ ಸಿದ್ದರಾಮಯ್ಯನವರೇ... ನಿಮಗೆ ಯಡಿಯೂರಪ್ಪನವರ ದಾರಿಯಲ್ಲಿ ಹೋಗಲು ಅವಕಾಶ ಇದೆ. ರಾಮಕೃಷ್ಣ ಹೆಗಡೆ ದಾರಿಯಲ್ಲಿ ಹೋಗುವ ಅವಕಾಶವನ್ನ ಕಳೆದುಕೊಂಡ್ರಿ. ಹೆಗಡೆ ಮೇಲೆ ಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ರು. ನಿಮ್ಮ ಮೇಲೆ ಆರೋಪ ಬಂದಾಗ ಸೈಟ್ ಹಿಂದಿರುಗಿಸಿ ತನಿಖೆಯಾಗೋವರೆಗೂ ಸೈಟ್ ಬೇಡ ಅನ್ನಬೇಕಿತ್ತು. ಹೀಗೆ ಹೇಳಿದ್ರೆ ತುಂಬಾ ದೊಡ್ಡ ವ್ಯಕ್ತಿ ಆಗ್ತಿದ್ರಿ, ರಾಜ್ಯದ ಜನ ನಿಮ್ಮನ್ನ ನೈತಿಕ ಉತ್ತುಂಗದ ಸ್ಥಾನದಲ್ಲಿ ಇಡ್ತಿದ್ರು. ಈಗ ರಾಜ್ಯಪಾಲರು ತನಿಖೆ ನೀಡಿರೋದೆ ಅಪರಾಧ ಅಂತ ಬಿಂಬಿಡುತ್ತಿದ್ದೀರಾ? ತನಿಖೆ ಮಾಡೋದ್ರಿಂದ ನಿಮಗೆ ಏಕೆ ಭಯ, ನೀವು ಸ್ವಚ್ಛ ಆಡಳಿತ ಕೊಟ್ಟಿರೋದ್ರಿಂದ ಭಯ ಏಕೆ ಬೀಳಬೇಕು ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪರ ಬಿಕೆ ಹರಿಪ್ರಸಾದ್ ಬ್ಯಾಟಿಂಗ್!

2001ರಲ್ಲಿ ಎಲ್ ಅಂಡ್ ಟಿಗೆ 11 ಕೋಟಿ ವೆಚ್ಚದಲ್ಲಿ ದೇವನೂರು ಬಡಾವಣೆ ಕೊಟ್ಟಿದ್ದಾರೆ, ಬಿಜೆಪಿ ಇರಲಿಲ್ಲ. ಡೆವೆಲಲಪ್ಮೆಂಟ್ ಆಗಿರೋ ಭೂಮಿಯನ್ನ ಡಿನೋಟಿಫೈ ಮಾಡಿದ್ದೀರಾ, ಬಿಜೆಪಿ ಇರಲಿಲ್ಲ. ಡೆವಲಪ್ ಆಗಿರೋ ಜಾಗವನ್ನ ನಿಮ್ಮ ಬಾಮೈದ ಕೃಷಿ ಭೂಮಿ ಅಂತ ಖರೀದಿ ಮಾಡಿದ್ದಾರೆ, ಬಿಜೆಪಿ ಇರಲಿಲ್ಲ. ಡೆವಲಪ್ ಆಗಿರೋ ಬಡಾವಣೆ ತೋರಿಸಿ ಕೃಷಿ ಭೂಮಿ ಅಂತ ಖರೀದಿ ಮಾಡಿದ್ದೀರಾ, ಬಿಜೆಪಿ ಇರಲಿಲ್ಲ. 2013ರಲ್ಲಿ ಚುನವಾಣೆ ಅಫಿಡವಿಟ್ ನಲ್ಲಿ ಇದನ್ನ ಕಾಣಿಸಿಲ್ಲ, ಇದರಲ್ಲಿ ಬಿಜೆಪಿ ಕೈವಾಡ ಇದ್ಯಾ? ನೀವು ಅಫಿಡವಿಟ್ ನಲ್ಲಿ ಮುಚ್ಚಿಟ್ಟಿರೋದ್ರಲ್ಲಿ ಬಿಜೆಪಿ ಕೈವಾಡ ಇದ್ಯಾ? ಸಿಎಂ ವಕೀಲರಾಗಿದ್ದೋರು, ಮಾಹಿತಿಯನ್ನ ಮುಚ್ಚಿಟ್ರೆ ಸೆಕ್ಷನ್ 125 (a) ಅಡಿ ತಪ್ಪೋ.. ಅಲ್ಲೋ... ಎಂದು ಪ್ರಶ್ನೆ ಮಾಡಿದರು.

click me!