'ಕುಂಭಮೇಳಕ್ಕೆ ನಾನು ಹೋಗ್ತಿನೋ ಬಿಡ್ತೀನೋ ಅವರಿಗೇನು ಪ್ರಾಬ್ಲಂ?' ಆರ್ ಅಶೋಕ್‌ ವಿರುದ್ಧ ಡಿಕೆ ಶಿವಕುಮಾರ ಗರಂ

Published : Feb 05, 2025, 07:48 PM IST
'ಕುಂಭಮೇಳಕ್ಕೆ ನಾನು ಹೋಗ್ತಿನೋ ಬಿಡ್ತೀನೋ ಅವರಿಗೇನು ಪ್ರಾಬ್ಲಂ?' ಆರ್ ಅಶೋಕ್‌ ವಿರುದ್ಧ ಡಿಕೆ ಶಿವಕುಮಾರ ಗರಂ

ಸಾರಾಂಶ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಬಗ್ಗೆ ಮಾತನಾಡಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ಶಿವಕುಮಾರ ಅವರು ತಮ್ಮ ವೈಯಕ್ತಿಕ ನಂಬಿಕೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು. ಕುಂಭಮೇಳಕ್ಕೆ ಹೋಗುವ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು.

ಬೆಂಗಳೂರು (ಫೆ.5): ಯಾರು ಏನು ಬೇಕಾದರೂ ಮಾತನಾಡಲಿ. ನಮ್ಮ ಧರ್ಮ, ನಮ್ಮ ಕರ್ಮ, ನಮ್ಮ ಆಚಾರ ವಿಚಾರ ನಾವು ಪಾಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.

ಡಿಕೆ ಶಿವಕುಮಾರ ಕುಂಭಮೇಳಕ್ಕೆ ಹೋಗುತ್ತಿರುವ ವಿಚಾರಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿರುವ ಹಿನ್ನೆಲೆ ತಿರುಗೇಟು ನೀಡಿದ ಡಿಕೆ ಶಿವಕುಮಾರ, ಅವರು ವಿರೋಧ ಪಕ್ಷದ ನಾಯಕರು. ಅವರ ಪಾರ್ಟಿಯಲ್ಲಿ ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಗೌರವ ಕೊಡುತ್ತಾರೆ. ಗಂಗೆ ಆಗಲೀ ಕಾವೇರಿ ಆಗ್ಲಿ ಕೃಷ್ಣ ಆಗ್ಲಿ, ವೃಷಭಾವತಿ ಆಗಲಿ ನೀರಿಗೆ ಬಣ್ಣ, ಆಕಾರ, ರುಚಿಯಾಗಲಿ ಇಲ್ಲ, ಎಲ್ಲರಿಗೂ ನೀರು ಬೇಕು. ಅವರು ಅಶೋಕ ಅಂತ ಯಾಕೆ ಹೆಸರಿಟ್ಟುಕೊಂಡಿದ್ದಾರೆ? ಕಲ್ಲೋ, ಮಣ್ಣೋ ಅಂತ ಇಟ್ಕೊಬಹುದಿತ್ತಲ್ಲ. ಅವರದು ಏನೇನು ಇದೆಯೋ ಅವರು ಮಾಡುತ್ತಾರೆ. ಅವರಿಗೆ ಏನು ಹೆಚ್ಚು ಕಮ್ಮಿಯಾಗಿದೆಯೋ ಗೊತ್ತಿಲ್ಲ. ಆದರೆ ನನ್ನ ವೈಯಕ್ತಿಕ ನಂಬಿಕೆ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ನನ್ನ ವೈಯಕ್ತಿಕ ನಂಬಿಕೆ ನನ್ನ ಭಕ್ತಿ ಯಾರ ಮೇಲೆ ಭಕ್ತಿನೋ ಅದು ನನಗೆ ಬಿಟ್ಟಿದ್ದು. ಇದರಿಂದ ಅವರಿಗೇನು ಪ್ರಾಬ್ಲಂ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಗಂಗಾಸ್ನಾನದಿಂದ ಬಡತನ ಹೋಗುತ್ತಾ? ಬಿಜೆಪಿ ನಾಯಕರ ವಿರುದ್ಧ ಖರ್ಗೆ ವಾಗ್ದಾಳಿ!

 ನಾನು ಕುಂಭಮೇಳಕ್ಕೆ ವಿಚಾರದ ಬಗ್ಗೆ ಅವರು ಟ್ವೀಟ್ ಆದರೂ ಮಾಡ್ಲಿ ಭಾಷಣ ಆದ್ರು ಮಾಡ್ಲಿ ಅದಕ್ಕೆ ಉತ್ತರ ಕೊಡಕ್ಕೆ ಆಗೋಲ್ಲ. ಅವರ ಟೀಕೆಗೆ ಉತ್ತರ ಕೊಡೋಕೆ ನನಗೆ ಇಷ್ಟನೇ ಇಲ್ಲ. ನನ್ನ ಹೆಸರು ತೆಗೆದುಕೊಳ್ಳಲಿಲ್ಲಂದ್ರೆ ಅವರಿಗೆ ನಿದ್ರೆನೂ ಬರಲ್ಲ. ಕೆಲವರಿಗೆ ಶಕ್ತಿನೂ ಬರೋದಿಲ್ಲ, ಉತ್ಸಾಹನೂ ಬರೋದಿಲ್ಲ. ಹೀಗಾಗಿ ನನ್ನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಕುಂಭ ಮೇಳಕ್ಕೆ ನಾನು ಹೋಗ್ತೀನೋ ಬಿಡ್ತೀನೋ ಅದು ನನಗೆ ಬಿಟ್ಟಿದ್ದು. ಅದು ನನ್ನ ವೈಯಕ್ತಿಕ ವಿಚಾರ. ನಾನು ದೀನಾ ಪೂಜೆ ಮಾಡ್ತೀನಿ, ಹಣೆಗೆ ಕುಂಕುಮನೂ ಇಡ್ತಿನಿ, ಕೊರಳಲ್ಲಿ ರುದ್ರಾಕ್ಷಿನೂ ಹಾಕ್ತಿನಿ ಅದು ನನ್ನಿಷ್ಟ. ಒಬ್ಬೊಬ್ಬರು ಅವರಿಗೆ ಇಷ್ಟ ಬಂದ ಹಾಗೆ ಇರುತ್ತಾರೆ. ನೀವೇ ಮೀಡಿಯಾದವರು 25 ಜನ ಇದ್ದೀರಿ.  ನಿಮಗೆ ಇಷ್ಟದ ಬಣ್ಣದ ಬಟ್ಟೆ ಹಾಕಿಕೊಳ್ತಿಲ್ವ? ಇದು ಹಾಗೆ ಎಂದರು.

ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೋ ಒಂದು ವಿಚಾರದಲ್ಲಿ ಅವರು ಹಾಗೆ ಹೇಳಿದ್ದಾರೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರೆ ಬಡತನ ಹೋಗುತ್ತಾ ಎಂದಿದ್ದಾರೆ. ನೀವು ಅದನ್ನೇ ತಗೊಂಡು ಅದರಲ್ಲಿ ಬೇಳೆ ಬೇಯಿಸಿಕೊಂಡು ಟಿಆರ್‌ಪಿ ತಗೊಬೇಡಿ ಎಂದು ಮಾಧ್ಯಮಗಳ ವಿರುದ್ಧವೇ ಅಸಮಾಧಾನಗೊಂಡರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!