ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಲಿಂಗರಾಜು ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಬೆಂಗಳೂರು (ಜೂ.08): ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದಕ್ಷ ಅಧಿಕಾರಿ ಮಂಜುನಾಥ್ ಸಾವಿನ ಬೆನ್ನಲ್ಲೇ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಲಿಂಗರಾಜು ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಪ್ರತಿನಿತ್ಯ ಒತ್ತಡದಿಂದ ಕೆಲಸ ಮಾಡುವ ಪೊಲೀಸರಿಗೆ ರಜೆ ಸೌಲಭ್ಯ, ನೆಮ್ಮದಿ ಜೀವನ ಹಾಗೂ ಕುಟುಂಬದ ಒಡನಾಟವೇ ಬಹುತೇಕವಾಗಿ ಇರುವುದಿಲ್ಲ. ಆದರೆ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ಲಿಂಗರಾಜು ಅವರು ಈಗ ಹೃದಾಯಘಾತದಿಂದ ಇನ್ಸ್ ಪೆಕ್ಟರ್ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ನವೀನ್ ರೆಜೆನ್ಸಿಯಲ್ಲಿ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ನವೀನ್ ರೆಜೆನ್ಸಿಯಲ್ಲಿ ಕೋಣೆ ಬುಕ್ ಮಾಡಿ ವಾಸವಾಗಿದ್ದರು. ಆದರೆ, ಇಂದು ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದಿದ್ದರು.
undefined
ಬೆಂಗಳೂರಿನ ಪೀಪಲ್ಸ್ ಮ್ಯಾನ್ ಖ್ಯಾತಿಯ ಇನ್ಸ್‌ಪೆಕ್ಟರ್ ಮಂಜುನಾಥ್ ಲಿವರ್ ಕ್ಯಾನ್ಸರ್‌ಗೆ ಬಲಿ
ಅಮಾನತ್ತಾಗಿದ್ದರಿಂದ ಚಿಂತನೆಗೀಡಾಗಿದ್ದ ಇನ್ಸ್‌ಪೆಕ್ಟರ್: ಚಿತ್ರದುರ್ಗದ ಲಾಡ್ಜ್‌ನಲ್ಲಿ ಕುಸಿದುಬಿದ್ದ ಇನ್ಸ್‌ಪೆಕ್ಟರ್ ಲಿಂಗರಾಜು ಅವರನ್ನು ಲಾಡ್ಜ್ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ಸಾಗಿಸಲು ಮುಂದಾಗಿದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಇನ್ಸ್ ಪೆಕ್ಟರ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 2007ರ ಬ್ಯಾಚ್ ನ ಇನ್ಸ್ ಪೆಕ್ಟರ್ ಲಿಂಗರಾಜು, ಚಿಕ್ಕಮಗಳೂರು ತಾಲೂಕಿನ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಚಿನ್ನದ ವ್ಯಾಪಾರಿಯಿಂದ ಹಣ ವಸೂಲಿ ಆರೋಪದಲ್ಲಿ ಎಫ್ ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅಮಾನತ್ತಾಗಿದ್ದರು. ಇನ್ನು ಅಮಾನತ್ತಿನ ಘಟನೆಯಿಂದ ತೀವ್ರ ಬೇಸತ್ತಿದ್ದ ಲಿಂಗರಾಜು ಅವರು ಹೆಚ್ಚು ಹೊತ್ತು ಮನೆಯಲ್ಲಿಯೂ ಇರದೇ ಬೇರೆಡೆ ಉಳಿದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಅಮಾನತು ಅವಧಿ ಮುಕ್ತಾಯಗೊಂಡ ಬಳಿಕ ಲಿಂಗರಾಜು ಅವರು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನವರಾದ ಲಿಂಗರಾಜು ಅವರ ಮೃತದೇಹವನ್ನು ಸದ್ಯ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.
ಪೀಪಲ್ಸ್ ಮ್ಯಾನ್ ಖಾತಿಯ ಇನ್ಸ್‌ಪೆಕ್ಟರ್ ಮಂಜುನಾಥ್ ಸಾವು:
ಬೆಂಗಳೂರು (ಜೂ.04): ಕಳೆದ ನಾಲ್ಕು ದಿನಗಳ ಹಿಂದೆ ಸಿಲಿಕಾನ್ ಸಿಟಿ, ಟ್ರಾಫಿಕ್ ಸಿಟಿ ಎಂದು ಖ್ಯಾತವಾದ ಬೆಂಗಳೂರಿನಲ್ಲಿ ಕುಟುಂಬ, ಸಂಸಾರಕ್ಕಿಂತಲೂ ಹೆಚ್ಚಾಗಿ ವೃತ್ತಿಯನ್ನೇ ಪ್ರೀತಿಸುತ್ತಿದ್ದ ಪೀಪಲ್ಸ್ ಮ್ಯಾನ್ ಖ್ಯಾತಿಯ ಜಯನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಲಿವರ್ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಕಾರ್ಯದಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಮಂಜುನಾಥ್ ಆರೋಗ್ಯದ ಕಡೆಗೆ ಹೆಚ್ಚಾಗಿ ಗಮನ ಹರಿಸಿರಲಿಲ್ಲ. ಹೀಗಾಗಿ, ಆಹಾರ ಮತ್ತು ದಿನನಿತ್ಯದ ದೈಹಿಕ ಚಟುವಟಿಕೆಗಳಿಂದ ಲಿವರ್ ಕ್ಯಾನ್ಸರ್ ಉಂಟಾಗಿದೆ.
Bengaluru: ತ್ರಿಬಲ್ ಡ್ಯೂಟಿ ಮಾಡಿದ ಟ್ರಾಫಿಕ್ ಎಎಸ್‌ಐಗೆ ಹೃದಯಾಘಾತ ?: ಮನೆಗೆ ಹೋಗುವಾಗ ಸಾವು
ಕ್ಯಾನ್ಸರ್ ಚಿಕಿತ್ಸೆ ಫಲಿಸದೇ ಸಾವು: ಇನ್ನು ಅದು ಕೊನೆಯ ಹಂತದಲ್ಲಿರುವಾಗ ಕಳೆದ ಜನವರಿಯಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಮಂಜುನಾಥ್ ಸಾವನ್ನಪ್ಪಿದ್ದಾರೆ. ಹುಟ್ಟೂರು ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ರವಾನೆ ಮಾಡಿ ಅಂತಿಮ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ.