ರಾಜ್ಯಲ್ಲಿ ಕುಸಿದ ಕೊರೋನಾ ಪಾಸಿಟಿವಿಟಿ ಪ್ರಮಾಣ, ಇಲ್ಲಿದೆ ಜೂನ್ 02ರ ಅಂಕಿ -ಸಂಖ್ಯೆ

By Suvarna News  |  First Published Jun 2, 2021, 10:31 PM IST

* ರಾಜ್ಯದಲ್ಲಿ ಕಡಿಮೆಯಾದ ಕೊರೋನಾ ಪಾಸಿಟಿವಿಟಿ ಪ್ರಮಾಣ 
* ರಾಜ್ಯಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ
* 16,387 ಜನರಿಗೆ ಕೊರೋನಾ, 463 ಜನರು ಬಲಿ


ಬೆಂಗಳೂರು, (ಜೂನ್.02): ಕರ್ನಾಟಕದಲ್ಲಿ ಇಂದು (ಬುಧವಾರ) ಹೊಸದಾಗಿ 16,387 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, 463 ಜನರು ಬಲಿಯಾಗಿದ್ದಾರೆ.

 ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 26,35,122ಕ್ಕೆ ಏರಿಕೆಯಾಗಿದ್ರೆ, ಈವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 30,017 ಕ್ಕೆ ಏರಿಕೆಯಾಗಿದೆ. 

Tap to resize

Latest Videos

undefined

ಸಿಎಂ ಸಭೆ ಅಂತ್ಯ: ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧಾರ, ಎಷ್ಟು ದಿನ..?

 ಕಳೆದ 24 ಗಂಟೆಗಳಲ್ಲಿ21199 ಜನ ಗುಣಮುಖರಾಗುವುದರ ಮೂಲಕ ಇದುವರೆಗೆ 2312060 ಜನ ಗುಣಮುಖರಾಗಿದ್ದಾರೆ. 293024 ಸಕ್ರಿಯ ಪ್ರಕರಣಗಳು ಇದ್ದು, ಪಾಸಿಟಿವಿಟಿ ಪ್ರಮಾಣ 11.22ಕ್ಕೆ ಕುಸಿದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನು ಬೆಂಗಳೂರಿನಲ್ಲಿ ಬುಧವಾರ 4095 ಜನರಿಗೆ ಸೋಂಕು ತಗಲಿದ್ದು, 307 ಸೋಂಕಿತರು ಮೃತಪಟ್ಟಿದ್ದಾರೆ.  8620 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ನಗರದಲ್ಲಿ 1,38870 ಸಕ್ರಿಯ ಪ್ರಕರಣಗಳಿವೆ.

click me!