ಗುಡ್‌ ನ್ಯೂಸ್: ರಾಜ್ಯದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಳ

By Suvarna NewsFirst Published Aug 3, 2020, 4:31 PM IST
Highlights

ಕರ್ನಾಟಕದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ  ಸೋಂಕು ಪೀಡಿತರಾಗುತ್ತಿದ್ದಾರೆ. ಆ ಆತಂಕದ ನಡುವೆ ಚೇತರಿಕೆ ಪ್ರಮಾಣದಲ್ಲೂ ಏರಿಕೆಯಾಗಿರುವುದು ಸಮಾಧಾನ ಮೂಡಿಸಿದೆ. ಈ ಬಗ್ಗೆ ಸಚಿವ ಸುಧಾಕರ್ ಅಂಕಿ-ಅಂಶಗಳ ಮೂಲಕ ಮಾಹಿತಿ ನಿಡಿದ್ದಾರೆ.

ಬೆಂಗಳೂರು, (ಆಗಸ್ಟ್.3): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಾಗಿರುವುದು ಹೊಸ ಆಶಾ ಭಾವನೆ ಮೂಡಿಸಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಚೇತರಿಕೆ ಪ್ರಮಾಣದ ಅಂಕಿ-ಅಂಶಗಳ ಮಾಹಿತಿಯನ್ನು ಹಂಚಿಕೊಂಡಿದ್ದು, ರಾಜ್ಯ ಮತ್ತು ಬೆಂಗಳೂರಿನಲ್ಲಿ ಗುಣಮುಖರಾಗುವವರ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಜುಲೈ 27ರಿಂದ ಆಗಸ್ಟ್ 2ರ ವರೆಗಿನ ಅಂಕಿ ಅಂಶಗಳನ್ನು ಹಂಚಿಕೊಂಡಿರುವ ಸುಧಾಕರ್, ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.5.67ರಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಬೆಂಗಳೂರಲ್ಲಿ ಕೊರೋನಾಗೆ ಮಧ್ಯವಯಸ್ಕರೆ ಹೆಚ್ಚು ಬಲಿ: ಹೆಚ್ಚಿದ ಆತಂಕ

ಕಳೆದ ವಾರ ಶೇ.37.14ರಷ್ಟು ಮಂದಿ ಗುಣಮುಖರಾಗಿದ್ದರು,  ಆಗಸ್ಟ್ 2ರ ಅಂಕಿ ಅಂಶಗಳ ಪ್ರಕಾರ ಶೇ.42.81ರಷ್ಟು ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲೂ ಶೇ.9.17ರಷ್ಟು ಹೆಚ್ಚು ಮಂದಿ ಚೇತರಿಕೆ ಕಂಡಿದ್ದಾರೆ.

ಕಳೆದ ವಾರ 27.97ರಷ್ಟು ಮಂದಿ ಗುಣಮುಖರಾಗಿದ್ದರೆ, ನಿನ್ನೆ (ಆ.2) ಶೇ.35.14ರಷ್ಟು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗುತ್ತಿದ್ದಾರೆ. ಆ ಆತಂಕದ ನಡುವೆ ಚೇತರಿಕೆ ದರ ಏರಿಕೆಯಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ಚೇತರಿಕೆ ದರ ಶೇ.5.67%ರಷ್ಟು ಏರಿಕೆ ಕಂಡಿದ್ದು ಬೆಂಗಳೂರು ನಗರದಲ್ಲಿ ಶೇ.9.17%ರಷ್ಟು ಏರಿಕೆ ಕಂಡಿದೆ. ನೆನ್ನೆ ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ದರ ಶೇ.42 81% ರಷ್ಟಿದ್ದು ಬೆಂಗಳೂರಿನಲ್ಲಿ ಶೇ.35.14% ಚೇತರಿಕೆ ದರ ದಾಖಲಾಗಿದೆ. pic.twitter.com/xE0ERPsDjz

— Dr Sudhakar K (@mla_sudhakar)
click me!