ಗುಡ್ ನ್ಯೂಸ್ : ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರೀ ಇಳಿಕೆ

By Suvarna News  |  First Published Jun 8, 2021, 8:53 PM IST

 * ರಾಜ್ಯದ ಜನತೆಗೆ ಗುಡ್ ನ್ಯೂಸ್ 
 * ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರೀ ಇಳಿಕೆ
* 86 ದಿನಗಳ ಬಳಿಕ 10 ಸಾವಿರಕ್ಕಿಂತ ಕಡಿಮೆ ಪಾಸಿಟಿವ್ ಕೇಸ್‌


ಬೆಂಗಳೂರು, (ಜೂನ್.08): ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದ್ದು,  ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.

ಹೌದು...ಈ ಹಿಂದೆ ದಿನಕ್ಕೆ 40 ರಿಂದ 50 ಸಾವಿರ ವರೆಗೆ ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿದ್ದವು. ಆದ್ರೆ, ಇಂದು (ಮಂಗಳವಾರ) ರಾಜ್ಯದಲ್ಲಿ 85 ದಿನಗಳ ಬಳಿಕ 10 ಸಾವಿರಕ್ಕಿಂತ ಕಡಿಮೆ ಪಾಸಿಟಿವ್ ಕೇಸ್‌ ಪತ್ತೆಯಾಗಿವೆ. ಕಳೆದ 24ಗಂಟೆಗಳಲ್ಲಿ ಕೇವಲ 9808 ಜನರಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ಪ್ರಮಾಣ ಶೇ.7.53ಕ್ಕೆ ಕುಸಿದಿದೆ.

Tap to resize

Latest Videos

undefined

‘ಆಯುಷ್‌ 64’ ಕೋವಿಡ್‌ ಔಷಧ ಮಾರುಕಟ್ಟೆಗೆ : ಸೇವಿಸಿದ ವಾರದೊಳಗೆ ಸೋಂಕು ಶಮನ

ಈ ಮೂಲಕ ಸೋಂಕಿತರ ಸಂಖ್ಯೆ 27,17,289 ಕ್ಕೆ ಏರಿಕೆಯಾಗಿದೆ.ಕಿಲ್ಲರ್ ಕೊರೋನಾಗೆ ಬುಧವಾರ 179 ಸೋಂಕಿತರು ಸಾವನ್ನಪ್ಪಿದ್ದು, ಇದರೊಂದಿಗೆ ಒಟ್ಟು 32099 ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಇಂದು 23449 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 2460165 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ 225004 ಸಕ್ರಿಯ ಪ್ರಕರಣಗಳಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂಡ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜೂನ್.8ರಂದು ಹೊಸದಾಗಿ 2028 ಜನರಿಗೆ ಸೋಂಕು ತಗುಲಿದ್ದು,  44 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 7664 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 

ಇದುವರೆಗೆ ನಗರದಲ್ಲಿ 1070062 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ರೆ, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 15118 ಕ್ಕೆ ಏರಿಕೆಯಾಗಿದೆ.

click me!