ಲಾಲಾ ಲಜಪತ್ ರಾಯ್ ಹುಟ್ಟುಹಬ್ಬ: ಯಡವಟ್ಟು ಮಾಡಿ ತಿದ್ದಿಕೊಂಡ ಕಾಂಗ್ರೆಸ್

Published : Jan 28, 2019, 07:11 PM IST
ಲಾಲಾ ಲಜಪತ್ ರಾಯ್ ಹುಟ್ಟುಹಬ್ಬ: ಯಡವಟ್ಟು ಮಾಡಿ ತಿದ್ದಿಕೊಂಡ ಕಾಂಗ್ರೆಸ್

ಸಾರಾಂಶ

ಲಾಲಾ ಲಜಪತ್ ರಾಯ್ ಹುಟ್ಟುಹಬ್ಬ ದಿನಕ್ಕೆ ಕರ್ನಾಟಕ ಕಾಂಗ್ರೆಸ್ ಶುಭಾಶಯ ಕೋರುವ ಭರದಲ್ಲಿ ಯಡವಟ್ಟು ಮಾಡಿಕೊಂಡು ಬಳಿಕ ತಿದ್ದಿಕೊಂಡಿರುವ ಪ್ರಸಂಗ ನಡೆದಿದೆ.

ಬೆಂಗಳೂರು, [ಜ.28]: ಲಾಲಾ ಲಜಪತ್ ರಾಯ್ ಅವರ ಹುಟ್ಟಹಬ್ಬಕ್ಕೆ ಶುಭಾಶಯ ಕೋರುವ ಭರದಲ್ಲಿ ಕರ್ನಾಟಕ ಕಾಂಗ್ರೆಸ್ ಯಡವಟ್ಟು ಮಾಡಿ ತಿದ್ದಿಕೊಂಡಿದೆ.

ಇಂದು [ಸೋಮವಾರ] ಅಪ್ರತಿಮ ಸ್ವಾತಂತ್ರ್ಯ ಹೊರಾಟಗಾರ, ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ 150ನೇ ಜನ್ಮದಿನೋತ್ಸವ. ಈ ಹಿನ್ನಲೆಯಲ್ಲಿ ಲಾಲಾ ಲಜಪತ್ ರಾಯ್ ಅವರ ಹುಟ್ಟಹಬ್ಬಕ್ಕೆ ರಾಜ್ಯ ಕಾಂಗ್ರೆಸ್ ಶುಭಾಶಯ ಕೋರಿ ಟ್ವೀಟ್ ಮಾಡಿದೆ.

ಆದ್ರೆ, ಲಾಲಾ ಲಜಪತ್ ರಾಯ್ ಬದಲಾಗಿ ಬಾಲ ಗಂಗಾಧರ್ ತಿಲಕ್ ಫೋಟೋ ಸಮೇತ ಟ್ವೀಟ್ ಮಾಡಿ ಮುಜುಗರಕ್ಕೀಡಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಕಾಂಗ್ರೆಸ್ ನ ಈ ಪೋಸ್ಟ್ ಗೆ ಟೀಕೆಗಳು ವ್ಯಕ್ತವಾಗಿವೆ.

ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್, ಬಾಲ ಗಂಗಾಧರ್ ತಿಲಕ್ ಫೋಟೋ ಇರೋ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದು, ನಂತರ ಲಾಲಾ ಲಜಪತ್ ರಾಯ್ ಫೋಟೋ ಹಾಕಿ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?
Premium FAR and TDR Issues: ಪ್ರೀಮಿಯಂ ಎಫ್​ಎಆರ್​, ಟಿಡಿಆರ್​​ ಕುರಿತು ಸಿಎಂ, ಡಿಸಿಎಂಗೆ ದೂರು