'ಬಲವಂತವಾಗಿ ಕುಮಾರಸ್ವಾಮಿಗೆ ಕಾಂಗ್ರೆಸ್‌ನಿಂದ ಸಿಎಂ ಪಟ್ಟ..!'

By Web DeskFirst Published Jan 28, 2019, 12:58 PM IST
Highlights

'ಸಿಎಂ ಪಟ್ಟದಿಂದ ಕೆಳಕ್ಕೆ ಇಳಿಯಲು ಸಿದ್ಧವಾಗಿದ್ದೇನೆ..' ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಇದೀಗ ಜೆಡಿಎಸ್ ಮುಖಂಡ ದತ್ತಾ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಬಲವಂತವಾಗಿ ಸಿಎಂ ಪಟ್ಟ ನೀಡಿ ಈಗ ಕಿರುಕುಳ ನೀಡಲಾಗುತ್ತಿದೆ ಎಂದವರು ಆರೋಪಿಸಿದ್ದಾರೆ.

ಬೆಂಗಳೂರು:  'ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಬಾರಿ ಸಣ್ಣ ಬೆಳವಣಿಗೆಗಳು ಸಹಜವಾಗಿದ್ದು, ನಮ್ಮ ಗುರಿ ಬಿಜೆಪಿಯಿಂದ ದೇಶವನ್ನು ರಕ್ಷಿಸುವುದು ಮಾತ್ರ,' ಎಂದು ಜಿಡಿಎಸ್ ಮುಖಂಡ ವೈಎಸ್‌ವಿ ದತ್ತಾ ಹೇಳಿದರು.'ಅಧಿಕಾರಕ್ಕೆ ನಾನು ಅಂಟಿ ಕುಳಿತಿಲ್ಲ.  ರಾಜೀನಾಮೆ ನೀಡಲು ಸಿದ್ಧ' ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‌ವಿ ದತ್ತಾ ಪ್ರತಿಕ್ರಿಯಿಸಿದ್ದಾರೆ. 

ಕಾಂಗ್ರೆಸ್ ಮುಖಂಡರು ಈ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ವಿಚಾರಗಳ ಬಗ್ಗೆಯೂ ಮಾತನಾಡುವುದು ಸರಿಯಲ್ಲ, ದೇಶದ ಹಿತದೃಷ್ಟಿಯಿಂದ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು. 

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಬಿಕ್ಕಟ್ಟೂ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಕೆಲಸ ಮಾಡುತ್ತಾರೆ.  ಕುಮಾರಸ್ವಾಮಿ ಬೇಡ ಎಂದರೂ ಕಾಂಗ್ರೆಸ್ ಮುಖಂಡರು ಬಲವಂತ ಮಾಡಿ ಸಿಎಂ ಪಟ್ಟ ಕಟ್ಟಿದರು.  ಈಗ ಕಾಂಗ್ರೆಸ್‌ನಿಂದ ಕಿರುಕುಳ, ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುವ ಭಾವನೆಯಿಂದ ಭಾವನಾತ್ಮಕವಾಗಿ ಸಿಎಂ ಕುರ್ಚಿ ಬಿಟ್ಟುಕೊಂಡುವ ಬಗ್ಗೆ ಕುಮಾರಸ್ವಾಮಿ ಅವರು ಹೇಳಿರಬಹುದು, ಎಂದು ದತ್ತಾ ಹೇಳಿದರು. 

'ಸಿಎಂ ಹೇಳಿಕೆ ತಕ್ಷಣದ ಭಾವನಾತ್ಮಕ ಹೇಳಿಕೆ ಅಷ್ಟೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕು. ಸಿದ್ದರಾಮಯ್ಯ ಅವರಿಗೂ ಸರ್ಕಾರದ ಬಗ್ಗೆ ಜವಾಬ್ದಾರಿ ಇದೆ. ಸುತ್ತಮುತ್ತಲಿರುವ ಅಭಿಮಾನಿಗಳ ಅತಿ ಅಭಿಮಾನ ಕೆಲವು ಬಾರಿ ತಪ್ಪು ಸಂದೇಶ ನೀಡುತ್ತವೆ,' ಎಂದು ಸಮರ್ಥನೆ ನೀಡಿ, 'ಕಾಂಗ್ರೆಸ್‌ನವರು ಅತಿಯಾದ ಅಭಿಮಾನಿಗಳನ್ನು ದೂರ ಇರಿಸಿದರೆ ಸೂಕ್ತ,' ಎಂದೂ ಸಲಹೆ ನೀಡಿದರು.

ಸಿಎಂ ಹೇಳಿದ್ದೇನು:

"

click me!