ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದು ಮತ್ತೆ ಅಕ್ಕಿ ಸಮರ..!

By Kannadaprabha News  |  First Published May 15, 2024, 6:27 AM IST

ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆ.ಜಿ. ಉಚಿತ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಮುಂದಾದಾಗ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತು. ನಾವು 34 ರು.ನಂತೆ ಪ್ರತಿ ಕೆ.ಜಿ. ಅಕ್ಕಿ ಖರೀದಿಸುತ್ತೇವೆ ಎಂದರೂ ಅಕ್ಕಿ ನೀಡಲಿಲ್ಲ. ಕನ್ನಡಿಗರಿಗೆ ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರ ಈಗ ಹೆಚ್ಚುವರಿ ದಾಸ್ತಾನನ್ನು ಮಾರಾಟ ಮಾಡಲು ಹೊರಟಿದೆ: ಸಿಎಂ ಸಿದ್ದರಾಮಯ್ಯ 


ಬೆಂಗಳೂರು(ಮೇ.15):  ಭಾರತೀಯ ಆಹಾರ ನಿಗಮ (ಎಫ್‌ಸಿಐ)ದ ಗೋದಾಮಿನಲ್ಲಿ ಶೇಖರಿಸಲಾಗಿರುವ 18.3 ಮಿಲಿಯನ್ ಟನ್ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿರುವ ನಿರ್ಧಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಫ್‌ಸಿಐ ಗೋದಾಮಿನಲ್ಲಿ ಸಾಮಾನ್ಯವಾಗಿ ಏಪ್ರಿಲ್ 1ರ ವೇಳೆಗೆ 13.5 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿ ಶೇಖರಣೆ ಇರುತ್ತದೆ. ಆದರೆ, ಈ ಬಾರಿ 31.8 ಮೆಟ್ರಿಕ್ ಟನ್ ಅಕ್ಕಿ ಶೇಖರಣೆಯಾಗಿದ್ದು, ನಿಗದಿಗಿಂತ ಹೆಚ್ಚುವರಿಯಾಗಿ 18.3 ಮಿಲಿಯನ್ ಟನ್ ಶೇಖರಣೆಯಾಗುವಂತಾಗಿದೆ. ಅದರಿಂದಾಗಿ ಎಫ್‌ಸಿಐ ಹಾಗೂ ಕೇಂದ್ರ ಸರ್ಕಾರಕ್ಕೆ ಗೋದಾಮಿನ ನಿರ್ವಹಣೆ ಸೇರಿ ಇನ್ನಿತರ ವಿಚಾರ ವೆಚ್ಚವು ಹೆಚ್ಚುತ್ತಿದೆ. ಈ ಹೊರೆಯನ್ನು ತಗ್ಗಿಸಲು ಹೆಚ್ಚುವರಿಯಾಗಿ ಶೇಖರಣೆಯಾಗಿರುವ 18.3 ಮಿಲಿಯನ್ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರು.ನಂತೆ ಮಾರಾಟ ಮಾಡಲು ಮುಂದಾಗಿದೆ ಮಾಧ್ಯಮಗಳಲ್ಲಿ ವರದಿಯಾಗಿದೆ.

Tap to resize

Latest Videos

ಮಹಾರಾಷ್ಟ್ರ ಮಾದರಿ ಆಪರೇಷನ್ ಕಮಲ: ನಮ್ಮ ಶಾಸಕರು ಮಾರಾಟಕ್ಕಿಲ್ಲ, ಸರ್ಕಾರ ಬೀಳಲ್ಲ, ಸಿದ್ದು, ಡಿಕೆಶಿ

ಕೇಂದ್ರದ ಈ ನಡೆಯ ವಿರುದ್ಧ ಟ್ವಿಟ್ (ಎಕ್ಸ್) ಮಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆ.ಜಿ. ಉಚಿತ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಮುಂದಾದಾಗ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತು. ನಾವು 34 ರು.ನಂತೆ ಪ್ರತಿ ಕೆ.ಜಿ. ಅಕ್ಕಿ ಖರೀದಿಸುತ್ತೇವೆ ಎಂದರೂ ಅಕ್ಕಿ ನೀಡಲಿಲ್ಲ. ಕನ್ನಡಿಗರಿಗೆ ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರ ಈಗ ಹೆಚ್ಚುವರಿ ದಾಸ್ತಾನನ್ನು ಮಾರಾಟ ಮಾಡಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಡಾಯಿ ಕೊಚ್ಚಿಕೊಳ್ಳುವ ಆಡಳಿತ ಇದೇನಾ? ಎಷ್ಟೇ ತಡೆಯುಂಟಾದರೂ ಅನ್ನಭಾಗ್ಯ ಯೋಜನೆ ಯಶಸ್ವಿಗೆ ರಾಜ್ಯ ಸರ್ಕಾರ ಗಟ್ಟಿಯಾಗಿ ನಿಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

click me!