ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಹೊಳೆನರಸೀಪುರ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ನಾಳೆ ಹಾಸನಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಹೆಚ್‌ಡಿ ರೇವಣ್ಣನವರು ಇದೀ ಹಾಸನ ಭೇಟಿ ಹಠಾತ್ ರದ್ದು ಮಾಡಿದ್ದಾರೆ.
ಹಾಸನ (ಮೇ.14): ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಹೊಳೆನರಸೀಪುರ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ನಾಳೆ ಹಾಸನಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಹೆಚ್‌ಡಿ ರೇವಣ್ಣನವರು ಇದೀ ಹಾಸನ ಭೇಟಿ ಹಠಾತ್ ರದ್ದು ಮಾಡಿದ್ದಾರೆ.
ನಾಳೆ ಮನೆ ದೇವರು ದೇವೇಶ್ವರ ಸೇರಿ ವಿವಿಧ ದೇವಾಲಯಗಳ ಭೇಟಿಗೆ ಪ್ಲಾನ್ ಮಾಡಿದ್ದ ರೇವಣ್ಣ, ಆದರೆ ಪುತ್ರ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ನಾಳೆ ಕಾನೂನು ತಜ್ಞರ ಜೊತೆ ಚರ್ಚಿಸಿ ಸಲಹೆ ಪಡೆಯಲು ಪ್ಲಾನ್ ಈ ಹಿನ್ನೆಲೆ ನಾಳೆ ಬೆಂಗಳೂರಿನಲ್ಲೆ ಇದ್ದು, ಪ್ರಜ್ವಲ್ ಪ್ರಕರಣ ಸಂಬಂಧ ತಜ್ಞರಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ.
undefined
ಪುತ್ರ ಪ್ರಜ್ವಲ್ ಹೆಸರಲ್ಲಿ ಚಾಮುಂಡೇಶ್ವರಿಗೆ ಅರ್ಚನೆ ಮಾಡಿಸಿದ ಹೆಚ್‌ಡಿ ರೇವಣ್ಣ
ನಾಳೆ ಹಾಸನಕ್ಕೆ ಹೊರಡಬೇಕಿದ್ದ ಕಾರ್ಯಕ್ರಮ ರದ್ದಾದ ಬಗ್ಗೆ ಜೆಡಿಎಸ್ ವಕ್ತಾರ ರಘು ಹೊಂಗೆರೆ ಮಾಹಿತಿ ನೀಡಿದ್ದಾರೆ. ನಾಯಕನ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದ್ದ ಕಾರ್ಯಕರ್ತರು, ಅಭಿಮಾನಿಗಳು. ಆದರೆ ಮೈಸೂರು ಚಾಮುಂಡೇಶ್ವರಿ ದರ್ಶನ ಬಳಿಕ ಹೆಚ್ಡಿ ರೇವಣ್‌ಣ ದಿಢೀರ್ ಕಾರ್ಯಕ್ರಮ ಬದಲಾಯಿಸಿದ್ದಾರೆ.. ಹೀಗೆ ಹಠಾತ್ ರದ್ದು ಮಾಡಿರುವುದರಿಂದ ಅಭಿಮಾನಿಗಳು ಇನ್ನಷ್ಟು ದಿನ ಕಾಯುವಂತಾಗಿದೆ.
ಕೋರ್ಟನಿಂದ ಜಾಮೀನು ಸಿಗುತ್ತಿದ್ದಂತೆ ಹೊಳೆನರಸೀಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದ ಅಭಿಮಾನಿಗಳು. ಹಾಸನಕ್ಕೆ ಬಂದ ಬಳಿಕ ನಮ್ಮ ನಾಯಕನ ಫೋಟೊಗೆ ಹಾಲಿನ ಅಭಿಷೇಕ ಮಾಡುವುದಾಗಿ ಹೇಳಿದ್ದ ಅಭಿಮಾನಿಗಳು. ರೇವಣ್ಣ ಅಭಿಮಾನಿಗಳನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ನಾಳೆ ರೇವಣ್ಣ ಆಗಮಿಸಲಿದ್ದಾರೆ ಸಂಭ್ರಮಕ್ಕೆ ಸಜ್ಜಾಗಿದ್ದ ಅಭಿಮಾನಿಗಳು. ಇದೀಗ ದಿಢೀರ್ ಹಾಸನ ಭೇಟಿ ರದ್ದು ಆಗಿದ್ದು, ನಾಡಿದ್ದು ಹಾಸನಕ್ಕೆ ಹೋಗುವ ಸಾಧ್ಯತೆ ಇದೆ.