ಮತ್ತೆ ಸಿಎಂ ಕುಮಾರಸ್ವಾಮಿ ಕೈ ಹಿಡಿಯುವಳಾ ಶೃಂಗೇರಿ ಶಾರದಾಂಬೆ ?

By Web Desk  |  First Published Feb 8, 2019, 2:16 PM IST

ಸದ್ಯ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದೇ ವೇಳೇ ಸಿಎಂ ಕುಮಾರಸ್ವಾಮಿ ಶೃಂಗೇರಿ ಶಾರದಾಂಬೆಯ ಮೊರೆ ಹೋಗುವ ಸಾಧ್ಯತೆ ಇದೆ. 


ಚಿಕ್ಕಮಗಳೂರು :  ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗುತ್ತಿದ್ದು, ಚದುರಂಗದಾಟದ ನಡುವೆ ಸಿಎಂ ಕುಮಾರಸ್ವಾಮಿ ಶುಕ್ರವಾರ ಫೆ. 8ರಂದು ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು  ತೆರಳುವ ಸಾಧ್ಯತೆ ಇದೆ. 

ಅಧಿಕಾರಕ್ಕೆ ಏರುವ ಮುನ್ನ ಹಾಗೂ ಅಧಿಕಾರಕ್ಕೆ ಏರಿದ ಬಳಿಕವೂ ಹಲವು ಬಾರಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದಿದ್ದ ಸಿಎಂ ಇದೀಗ ಮತ್ತೆ ಶಾರದಾಂಬೆ ಮೊರೆ ಹೊಗಲು ಸಿದ್ಧರಾಗಿದ್ದಾರೆ. 

Tap to resize

Latest Videos

ಈ ಹಿಂದೆ ಗೌಡರ ಕುಟುಂಬದಿಂದ  ಅತಿರುದ್ರ ಮಹಾಯಾಗ ನಡೆಸಿದ್ದು, ಸಿಎಂ ಪಟ್ಟಕ್ಕೇರಿದ ಬಳಿಕವೇ ಐದು ಬಾರಿ ಶೃಂಗೇರಿಗೆ ತೆರಳಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಪ್ರತಿಶೂಲಿನಿ ಯಾಗ ಮಾಡಿದ್ದರು. 

ಪ್ರತೀ ಬಾರಿ ದೇಗುಲಕ್ಕೆ ಆಗಮಿಸದಾಗಲೆಲ್ಲಾ ವಿಶೇಷ ಪೂಜೆ ಕೈಗೊಳ್ಳುವ ಸಿಎಂ ಶುಕ್ರವಾರ [ಫೆ.8ರ] ಸಂಜೆ ವೇಳೆಗೆ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ ಇದೆ. 

ಕಳೆದ ಬಾರಿಯೂ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಿದ್ದ ವೇಳೆ ಶೃಂಗೇರಿಗೆ ತೆರಳಿದ್ದು, ಸದ್ಯ ರಾಜ್ಯ ರಾಜಕೀಯದ ಚದುರಂಗದಾಟದಿಂದ ಕಂಗಾಲಾಗಿದ ಸಿಎಂ ದೇವರ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. 

click me!