ಮನೆ ನಿರ್ಮಾಣ,ಸಂಘಕ್ಕೆ 10 ಲಕ್ಷ ರೂ ಸೇರಿ ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

Published : Jun 03, 2026, 09:12 PM IST
DK Shivakumar pc

ಸಾರಾಂಶ

ಮನೆ ನಿರ್ಮಾಣಕ್ಕೆ ಒಸಿ ಸಿಸಿ ತಲೆನೋವಿಲ್ಲ, ನಿರುದ್ಯೋಗಿಗಳಿಗೆ ತರಬೇತಿ ಹಾಗೂ ಉದ್ಯೋಗ ಅವಕಾಶ, ಉಚಿತ ಬಸ್ ಬಾಸ್ ಸೇರಿ 6 ಮಹತ್ವದ ಘೋಷಣೆ ಹೊರಬಿದ್ದಿದೆ. ಸಿಎಂ ಡಿಕೆ ಶಿವಕುಮಾರ್ ಮಾಡಿದ 6 ಘೋಷಣೆ ವಿವರ ಇಲ್ಲಿದೆ. 

ಬೆಂಗಳೂರು (ಜೂ.03) ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ಮಹತ್ವದ 6 ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಮನೆ ನಿರ್ಮಾಣಕ್ಕೆ ಒಸಿ ಸಿಸಿ ತಲೆನೋವು ಅಂತ್ಯ ಸೇರಿದಂತೆ ಪ್ರಮುಖವಾಗಿ 6 ಘೋಷಣೆ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನ, ಮೊದಲ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಜನತೆಗೆ ಡಿಕೆ ಶಿವಕುಮಾರ್ ಬಂಪರ್ ಘೋಷಣೆ ಮಾಡಿದ್ದಾರೆ.

ಮನೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

25000 ಚದರ ಅಡಿವರಗೆ ಮನೆ ನಿರ್ಮಾಣಕ್ಕೆ ಒಸಿ ಸಿಸಿ ಇಲ್ಲದಿದ್ದರೂ ವಿದ್ಯುತ್ ಸೇರಿ ಇತರ ಸಂಪರ್ಕ ನೀಡುವುದಾಗಿ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಸದ್ಯದ ನಿಯಮ ಪ್ರಕಾರ ಒಸಿ ಸಿಸಿ ಪತ್ರಗಳು ಇಲ್ಲ ಎಂದರೆ ವಿದ್ಯುತ್ ಸಂಪರ್ಕಗಳು ಸಿಗುತ್ತಿರಲಿಲ್ಲ. ಆದರೆ ಇದಕ್ಕೆ ರಿಲೀಫ್ ಕೊಡಲಾಗುತ್ತದೆ. 2500 ಅಡಿ ವರೆಗೂ ಇರುವ ಕಟ್ಟಡಗಳಿಗೆ ಒಸಿ ಹಾಗೂ ಸಿಸಿ ಇಲ್ಲದಿದ್ದರೂ ಕರೆಂಟ್ ನೀಡುತ್ತೇವೆ ಎಂದಿದ್ದಾರೆ.

ಬೆಂಗಳೂರನಲ್ಲಿ ರಸ್ತೆ ಡಾಂಬರೀಕರಣಕ್ಕೆ 2000 ಕೋಟಿ ರೂ ಕೋಟಿ

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ, ಸರಿಯಾದ ವ್ಯವಸ್ಥೆಗಳಿಲ್ಲದೆ ಜನರು ಹೈರಾಗಣಾಗಿದ್ದರು. ಈ ಕುರಿತು ಹಲವು ದೂರುಗಳು ಸಲ್ಲಿಕೆಯಾಗಿದೆ. ಇದೀಗ ಮುಖ್ಯಮಂತ್ರಿಯಾದ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಡಾಂಬರೀಕರಣಕ್ಕೆ 2000 ಕೋಟಿ ರೂಪಾಯಿ ಘೋಷಿಸಿದ್ದಾರೆ.

ಖಾತಾ ರಾಜ್ಯಕ್ಕೆ ವಿಸ್ತರಣೆ

ಇತ್ತೀಚೆಗೆ ಬೆಂಗಳೂರಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಸ್ತಿ, ನಿವೇಷಗಳ ಖಾತೆ ಬದಲಾವಣೆ ಆಂದೋಲನ ಮಾಡಲಾಗಿತ್ತು. ಇದೀಗ ಬಿ ಖಾತೆಯಿಂದ ಎ ಖಾತೆ ಅಭಿಯಾನ ರಾಜ್ಯಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದಿದ್ದಾರೆ.

ನಿರುದ್ಯೋಗಿಗಳಿಗೆ ತರಬೇತಿ, ಉದ್ಯೋಗವಕಾಶ

ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ನಿರುದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತದೆ. ಇದೇ ವೇಳೆ ಯುವ ಸಮೂಹಕ್ಕೆ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಪಂಚಾಯತಿ ಮಟ್ಟದ ಸಂಘಕ್ಕೆ 10 ಲಕ್ಷ ರೂ

ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೊ ಯುವಕ ಸಂಘ ಮಾಡಲಾಗುತ್ತದೆ. ಪ್ರತಿ ಪಂಚಾಯಿತಿಗೆ ಒಂದು ಸಂಘ ಮಾಡಲಾಗುತ್ತದೆ. ರಾಜ್ಯದಲ್ಲಿ 6 ಸಾವಿರ ಪಂಚಾಯಿತಿ ಇದೆ. ಈ ಸಂಘಗಳು ಯುವ ಸಮೂಹಕ್ಕೆ ನಾಯಕತ್ವ ಬೆಳೆಸಲು ನೆರವಾಗಲಿದೆ. ಒಂದು ಸಂಘಕ್ಕೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಪಾಸ್

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ವಿದ್ಯಾರ್ಥಿಗಳ ಪಾಸ್‌ಗೆ ಎಷ್ಟೇ ಖರ್ಚಾದರೂ ಚಿಂತೆ ಇಲ್ಲ, ವಿದ್ಯಾರ್ಥಿಗಳು ಹಾಗೂ ಪೋಷಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲಾಗುತ್ತದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಪಿಸಿಸಿಗೆ ಹೊಸ ಸಾರಥಿ: ಬಿ.ಕೆ. ಹರಿಪ್ರಸಾದ್ ನೂತನ ರಾಜ್ಯಾಧ್ಯಕ್ಷ; ಅಧಿಕೃತ ಆದೇಶ ಹೊರಡಿಸಿದ ಎಐಸಿಸಿ!
ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿವಕುಮಾರ್ ಘೋಷಣೆ