ಹಾರ-ತುರಾಯಿ, ಪೊಲೀಸ್ ಗೌರವ ವಂದನೆಗೆ ಬ್ರೇಕ್ ಬೆನ್ನಲ್ಲೇ ಸಿಎಂ ಮತ್ತೊಂದು ಮಹತ್ವದ ನಿರ್ಧಾರ

By Suvarna NewsFirst Published Aug 14, 2021, 3:40 PM IST
Highlights

* ಹಾರ-ತುರಾಯಿ, ಪೊಲೀಸ್ ಗೌರವ ವಂದನೆಗೆ ಬ್ರೇಕ್ ಬೆನ್ನೆಲ್ಲೇ ಸಿಎಂ ಮತ್ತೊಂದು ಮಹತ್ವ ನಿರ್ಧಾರ
* ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ನಿರಾಕರಿಸಿದ ಸಿಎಂ
 * ಮತ್ತೊಮ್ಮೆ ಮಾದರಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, (ಆ.14): ಸರ್ಕಾರಿ ಸಮಾರಂಭಗಳಲ್ಲಿ ಹಾರ-ತುರಾಯಿ ಸನ್ಮಾನ ಬೇಡ, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆಗೆ ಬ್ರೇಕ್ ಹಾಕಿ ಮಾದರಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಮತ್ತೊಂದು ಪ್ರಮುಖ ನಿರ್ಧಾರ ಮಾಡಿದ್ದಾರೆ.

ಹೌದು...ತಮಗೆ ಬೆಂಗಳೂರು ನಗರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  ಸಾಮಾನ್ಯವಾಗಿ ಸಿಎಂ ಆದಿಯಾಗಿ ಸಚಿವರು, ರಾಜಕೀಯ ನಾಯಕರು ರಸ್ತೆಯಲ್ಲಿ ಹೋಗುವಾಗ ಝೀರೋ ಟ್ರಾಫಿಕ್ ವ್ಯವಸ್ಥೆಯಿರುತ್ತದೆ, ಆದ್ರೆ, ಬೊಮ್ಮಾಯಿ ಇದನ್ನ ಬೇಡ ಎಂದು ಹೇಳಿವ ಮೂಲಕ ಮಾದರಿಯಾಗಿದ್ದಾರೆ.

ಹೂಗುಚ್ಛ ಬಳಿಕ ಗಾರ್ಡ್‌ ಆಫ್‌ ಹಾನರ್‌ ನಿಷೇಧಿಸಿದ ಸಿಎಂ ಬೊಮ್ಮಾಯಿ!

ತಾವು ಸಂಚರಿಸುವಾಗ ಸಿಗ್ನಲ್ ಫ್ರೀ ಮಾಡಿಕೊಡಲು ಸೂಚಿಸಿರುವ ಸಿಎಂ, ತಮ್ಮ ಸಂಚಾರ ವೇಳೆ ಆಂಬ್ಯುಲೆನ್ಸ್ ಗೆ ಹೋಗಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ.

ಸಿಎಂ ಬರ್ತಾರೆ ಅಂದ್ರೆ ಸಾಕು ಪೊಲೀಸರು ಅರ್ಧ ಗಂಟೆ ಮೊದಲೇ ಎಲ್ಲೊಂದರಲ್ಲಿ ವಾಹನಗಳನ್ನ ತಡೆ ನಿಲ್ಲಿಸುತ್ತಿದ್ದರು. ಆದ್ರೆ, ಬೊಮ್ಮಾಯಿಯವರ ನಿರ್ಧಾರದಿಂದ ಅರ್ಧ ಗಂಟೆಗಳ ವರೆಗೆ ಸಾರ್ವಜನಿಕರಿಗೆ ಆಗುತ್ತಿದ್ದ ಟ್ರಾಫಿಕ್ ಕಿರಿಕಿರಿ ತಪ್ಪಿದಂತಾಗುತ್ತದೆ.

ಈ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ತಮಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡವೆಂದು ಎಂದು ಹೇಳಿರುವುದನ್ನಿ ಇಲ್ಲಿ ಸ್ಮರಿಸಬಹುದು.

click me!