TATAದಲ್ಲಿ ಕೆಲಸ ಮಾಡಿದ್ರು ಸಿಎಂ ಬೊಮ್ಮಾಯಿ..! ಗಾಲ್ಫ್‌ , ಕ್ರಿಕೆಟ್ ಫೇವರೇಟ್

By Suvarna NewsFirst Published Jul 28, 2021, 3:07 PM IST
Highlights
  • ಟಾಟಾ ಕಂಪನಿಯಲ್ಲಿ ಕೆಲಸ ಮಾಡಿದ್ದ ಕರ್ನಾಟಕ ಸಿಎಂ
  • ರಾಜಕೀಯ ಹಿನ್ನೆಲೆ ಕುಟುಂಬದಿಂದ ಬಂದರೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ ಬೊಮ್ಮಾಯಿ

ಬೆಂಗಳೂರು(ಜು.28): ಕರ್ನಾಟಕದ ನೂತನ ಮುಖ್ಯಮಂತ್ರಿ 61 ವರ್ಷದ ಬಸವರಾಜ್ ಬೊಮ್ಮಾಯಿ ಅವರು ಟಾಟಾ ಕಂಪನಿಯಲ್ಲಿ ಕೆಲಸ ಮಾಡಿದ್ದರು ಎಂದುಬುದು ನಿಮಗೆ ಗೊತ್ತಾ ? ಹೌದು. ಕರ್ನಾಟಕ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸದ ಬೊಮ್ಮಾಯಿ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್.

ಮಾಜಿ ಗೃಹ ಸಚಿವ, ಮಾಜಿ ಸಿಎಂ ಬಿಎಸ್‌ವೈ ಅವರ ಆಪ್ತ ಸಹಾಯಕರಾಗಿದ್ದ ಬೊಮ್ಮಾಯಿ ಅವರು ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದಲೇ ಬಂದವರು. ರಾಜಕೀಯ ಹಿನ್ನೆಲೆ ಇದ್ದರೂ ಇವರು ಕಲಿತದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್.

ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ!

ಬೊಮ್ಮಾಯಿ ಅವರು ಉದ್ಯಮಿಗುವ ಮೊದಲು ಪುಣೆಯ ಟಾಟಾ ಮೋಟಾರ್ಸ್‌ನಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಯಡಿಯೂರಪ್ಪ ಅವರಂತೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಬೊಮ್ಮಾಯಿ ಅವರು ಮೊದಲು 1998 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಜೆಡಿಎಸ್ ತೊರೆದು 2008 ರಲ್ಲಿ ಬಿಜೆಪಿಗೆ ಸೇರಿದರು.

ಅವರು ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಾಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆಸಕ್ತಿಗಳಲ್ಲಿ ಗಾಲ್ಫ್ ಮತ್ತು ಕ್ರಿಕೆಟ್ ಇವೆ.

click me!