
ಬೆಂಗಳೂರು (ಅ.11): ಬೆಂಗಳೂರು ನಗರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯಕ್ಕೆ ಅನೇಕ ಬಟವಾಡೆ ಅಧಿಕಾರಿಗಳನ್ನೂ ನಿಯೋಜಿಸಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಸಾವಿರಾರು ಸರ್ಕಾರಿ ನೌಕರರಿಗೆ ವೇತನ ವಿಳಂಬವಾಗಿದೆ.
ಸರ್ಕಾರಿ ನೌಕರರಿಗೆ ಪ್ರತೀ ತಿಂಗಳು 1ನೇ ತಾರೀಕು ಅಥವಾ ಆರಂಭದಲ್ಲೇ ವೇತನ ಬಿಡುಗಡೆಯಾಗುತ್ತದೆ. ಆದರೆ, ಈ ತಿಂಗಳಲ್ಲಿ 10 ದಿನ ಕಳೆದರೂ ಇನ್ನೂ ಕೂಡ ನಗರದ ಸುಮಾರು 25ರಿಂದ 30 ಸಾವಿರ ನೌಕರರಿಗೆ ವೇತನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ: ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೇಳುವ ಪ್ರಕಾರ, ಸರ್ಕಾರ ವೇತನ ಬಿಡುಗಡೆ ಮಾಡುವ ಅಥವಾ ಬಟವಾಡೆ ಅಧಿಕಾರಿಗಳನ್ನೂ ಜಾತಿ ಗಣತಿ ಸಮೀಕ್ಷೆಗೆ ನಿಯೋಜಿಸಲಾಗಿದೆ. ಅವರು ಕಚೇರಿಗೆ ಆಗಮಿಸಿ ಬಟವಾಡೆ ನೀಡುವವರೆಗೆ ವೇತನ ಆಗುವುದಿಲ್ಲ. ಬಟವಾಡೆ ಅಧಿಕಾರಿಗಳು ಇರುವ ಕೆಲವು ಇಲಾಖೆಗಳಲ್ಲಿ ಮಾತ್ರ ವೇತನ ಆಗಿದೆ. ವಿವಿಧ ಇಲಾಖೆಗಳ ಸುಮಾರು 30 ಸಾವಿರ ನೌಕರರಿಗೆ ಇನ್ನೂ ವೇತನ ಆಗಿಲ್ಲ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ