Bannerghatta aquarium project: ಬನ್ನೇರುಘಟ್ಟದಲ್ಲಿ ₹144.4 ಕೋಟಿ ವೆಚ್ಚದ, ವಿಶ್ವದರ್ಜೆಯ ಅಕ್ವೇರಿಯಂಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ

Kannadaprabha News   | Kannada Prabha
Published : May 08, 2026, 09:57 AM IST
Karnataka Cabinet Major Decision for a Rs 144 Crore World Class Aquarium in Bannerghatta bengaluru

ಸಾರಾಂಶ

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 144.4 ಕೋಟಿ ರು. ವೆಚ್ಚದಲ್ಲಿ ಸಾರ್ವಜನಿಕ ಮತ್ಸ್ಯಾಗಾರ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗಲಿರುವ ಈ ಅಕ್ವೇರಿಯಂ, ವಾಕ್‌ ಥ್ರೂ ಸುರಂಗಗಳು ಮತ್ತು 5ಡಿ ಥಿಯೇಟರ್‌ನಂತಹ ಹಲವು ವಿಶೇಷ ಆಕರ್ಷಣೆ.

- ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

- ಪಿಪಿಪಿ ಮಾದರಿಯಲ್ಲಿ ಕಾಮಗಾರಿ, ನಿರ್ವಹಣೆ

ಬೆಂಗಳೂರು (ಮೇ.8): ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತ್ಯಾಕರ್ಷಣೀಯ ಸಾರ್ವಜನಿಕ ಮತ್ಸ್ಯಾಗಾರವನ್ನು (ಅಕ್ವೇರಿಯಂ) 144.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಾರ್ವಜನಿಕ- ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ (ಪಿಪಿಪಿ) 30 ವರ್ಷಗಳ ಅವಧಿಗೆ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ ಆಧಾರದ ಮೇಲೆ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಅಕ್ವೇರಿಯಂನಲ್ಲಿ ಅಕ್ವೇರಿಯಂ ಮೀನುಗಳು, ಸಿಹಿ ನೀರು, ಸಮುದ್ರ ಹಾಗೂ ಉಪ್ಪು ನೀರಿನ ಜಲಚರಗಳ ಆಕರ್ಷಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. 

7.5 ಎಕರೆ ವಿಸ್ತೀರ್ಣದಲ್ಲಿರುವ ಅಕ್ವೇರಿಯಂನಲ್ಲಿ ಏಷ್ಯನ್‌, ಅಮೇಜಾನ್‌, ಆಫ್ರಿಕಾ, ಕೋರಲ್‌ ರೀಫ್‌ಗಳ ಪ್ರದರ್ಶನ ಇರಲಿದೆ. ಜತೆಗೆ ಪಾರದರ್ಶಕ ವಾಕ್‌ ಥ್ರೂ ಸುರಂಗಗಗಳನ್ನು ಮಾಡಲು ತೀರ್ಮಾನಿಸಲಾಗಿದೆ. 3ಡಿ, 4ಡಿ, 5ಡಿ ಇಮ್ಮರ್ಸಿವ್‌ ಥಿಯೇಟರ್‌, ಗ್ಲಾಸ್‌ ಬಾಟಮ್‌ ಬೋಟ್‌ ರೈಡ್‌, ಸ್ಕ್ಯೂಬಾ ಡೈವಿಂಗ್‌, ಅಂಡರ್‌ ವಾಟರ್‌ ಶೋ ಸಹ ಇರಲಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಏಪ್ರಿಲ್‌ ತಿಂಗಳು ಎಣ್ಣೆ ಪಾರ್ಟಿ ರೆಕಾರ್ಡ್: 13ವರ್ಷದ ದಾಖಲೆ ಉಡೀಸ್! ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ
ಕಾರ್ಮಿಕರ ಕಲ್ಯಾಣ ಮಂಡಳಿ ಇನ್ನು ಸಾರಿಗೆ ಇಲಾಖೆ ವ್ಯಾಪ್ತಿಗೆ; - ರಾಜ್ಯ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ!