ಪರಂ ಕೈ ತಪ್ಪಿದ ಗೃಹ ಖಾತೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಫೈನಲ್ ಪಟ್ಟಿ

By Web DeskFirst Published Dec 28, 2018, 11:38 AM IST
Highlights

ಖಾತೆ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, 8 ನೂತನ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಖಾತೆ ಹಂಚಿಕೆ ನಡೆಸಿದೆ. ಖಾತೆ ಹಂಚಿಕೆಯ ಅಧಿಕೃತ ಹಾಗೂ ಫೈನಲ್ ಪಟ್ಟಿ ಇಲ್ಲಿದೆ

ಕಾಂಗ್ರೆಸ್ ನಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಖಾತೆ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. 8 ನೂತನ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಖಾತೆ ಹಂಚಿಕೆ ನಡೆಸಿದ್ದು, ಖಾತೆ ಹಂಚಿಕೆಯ ಅಧಿಕೃತ ಹಾಗೂ ಫೈನಲ್ ಪಟ್ಟಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಹಾಗಾದ್ರೆ ಯಾವ ಸಚಿವರಿಗೆ ಯಾವ ಖಾತೆ ನೀಡಲಾಗಿದೆ? ಇಲ್ಲಿದೆ ವಿವರ

ಡಾ. ಜಿ ಪರಮೇಶ್ವರ್ ಬಳಿ ಇದ್ದ ಗೃಹ ಖಾತೆಯ ಬದಲು 2 ಹೊಸ ಖಾತೆ ನೀಡಲಾಗಿದೆ. ಸದ್ಯಕ್ಕೀಗ  ಬೆಂಗಳೂರು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ಖಾತೆ, IT-BT ವಿಜ್ಞಾನ ಖಾತೆ ಹೀಗೆ ಒಟ್ಟು ಮೂರು ಖಾತೆಗಳು ಪರಂ ಬಳಿ ಇವೆ. 

ಡಿಕೆ ಶಿವಕುಮಾರ್ ಗೆ ವೈದ್ಯಕೀಯ ಶಿಕ್ಷಣ ಬದಲು ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಸದ್ಯ ಜಲ ಸಂಪನ್ಮೂಲ, ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಹೀಗೆ ಒಟ್ಟು ಮೂರು ಖಾತೆಗ ಡಿಕೆಶಿ ಕೈ ಸೇರಿದೆ.

ಆರ್.ವಿ.ದೇಶಪಾಂಡೆಗೆ ಕೇವಲ ಕಂದಾಯ ಇಲಾಖೆಯ ಜವಾಬ್ದಾರಿಯನ್ನಷ್ಟೇ ನೀಡಲಾಗಿದೆ. 

ಕೆ. ಜೆ ಜಾರ್ಜ್ ಬಳಿ ಇದ್ದ ಸಕ್ಕರೆ ಖಾತೆಯನ್ನು ಹಿಂಪಡೆಯಲಾಗಿದ್ದು, ಕೇವಲ ಕೈಗಾರಿಕಾ ಖಾತೆಯನ್ನಷ್ಟೇ ನೀಡಲಾಗಿದೆ.

ಕೃಷ್ಣಾ ಬೈರೇಗೌಡರಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ನೀಡಲಾಗಿದೆ.

ಯು.ಟಿ.ಖಾದರ್ ನಗರಾಭಿವೃದ್ಧಿ ಸಚಿವ ಸ್ಥಾನ ಪಡೆಯಲಿದ್ದಾರೆ.

ಆರ್.ಬಿ.ತಿಮ್ಮಾಪುರ ಸಕ್ಕರೆ ಮತ್ತು ಒಳಸಾರಿಗೆ ಖಾತೆ ಜವಾಬ್ದಾರಿ ಸಿಗಲಿದೆ.

ರಹೀಂ ಖಾನ್ ಯುವಜನಾ ಸೇವೆ, ಕ್ರೀಡಾ ಇಲಾಖೆ ವಹಿಸಿಕೊಳ್ಳಲಿದ್ದಾರೆ.

ಪಿ.ಟಿ.ಪರಮೇಶ್ವರ್ ನಾಯಕ್ ಮುಜರಾಯಿ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಸ್ಥಾನ ಪಡೆಯಲಿದ್ದಾರೆ.

ಇ.ತುಕಾರಾಂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಎಂಟಿಬಿ ನಾಗರಾಜ್ ವಸತಿ ಸಚಿವರಾಗುತ್ತಿದ್ದು, ಸಿ.ಎಸ್.ಶಿವಳ್ಳಿ ಪೌರಾಡಳಿತ ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಸತೀಶ್ ಜಾರಕಿಹೊಳಿ ಅರಣ್ಯ ಇಲಾಖೆ ಸಚಿವರಾದರೆ, ಎಂ.ಬಿ.ಪಾಟೀಲ್ ಗೃಹ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

click me!