'ಎಣ್ಣೆ ಪ್ರೀಮಿಯಂ ಬ್ರ್ಯಾಂಡ್‌ಗಳ ರೇಟ್‌ ಕಡಿಮೆ ಮಾಡ್ತಿದ್ದೀವಿ..' ಮದ್ಯಪ್ರಿಯರ ಕುರಿತಾದ ಪ್ರಶ್ನೆಗೆ ಸಿಎಂ ಉತ್ತರ!

Published : Feb 16, 2024, 06:19 PM ISTUpdated : Feb 16, 2024, 06:32 PM IST
'ಎಣ್ಣೆ ಪ್ರೀಮಿಯಂ ಬ್ರ್ಯಾಂಡ್‌ಗಳ ರೇಟ್‌ ಕಡಿಮೆ ಮಾಡ್ತಿದ್ದೀವಿ..' ಮದ್ಯಪ್ರಿಯರ ಕುರಿತಾದ ಪ್ರಶ್ನೆಗೆ ಸಿಎಂ ಉತ್ತರ!

ಸಾರಾಂಶ

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮದ್ಯದ ದರವನ್ನು ಪರಿಷ್ಕರಣೆ ಮಾಡುವ ಘೋಷಣೆ ಮಾಡಿದೆ. ಬಿಯರ್‌ ಬೆಲೆಯನ್ನು ಏರಿಕೆ ಮಾಡುವ ಸೂಚನೆ ನೀಡಿರುವ ರಾಜ್ಯ ಸರ್ಕಾರ ಎಷ್ಟು ಮಾಡಲಾಗುತ್ತದೆ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸುವುದಾಗಿ ತಿಳಿಸಿದೆ.  

ಬೆಂಗಳೂರು (ಫೆ.16): ಬಜೆಟ್‌ ಕುರಿತಾಗಿ ಸಿಎಂ ಸಿದ್ಧರಾಮಯ್ಯ ಅವರ ಸುದ್ದಿಗೋಷ್ಠಿಯಲ್ಲಿ ಮದ್ಯದ ದರ ಏರಿಕೆಯ ಕುರಿತಾಗಿ ಸ್ವಾರಸ್ಯಕರ ಮಾತುಗಳು ನಡೆಯಿತು. ಇದೇ ವೇಳೆ ಸಿದ್ದರಾಮಯ್ಯ ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳ ಬೆಲೆ ಕಡಿಮೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ತಮ್ಮ ಬಜೆಟ್‌ ಭಾಷಣದಲ್ಲಿ ಸಿದ್ಧರಾಮಯ್ಯ, ಮದ್ಯದ ಘೋಷಿತ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆಯ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಸ್ವದೇಶಿ ನಿರ್ಮಿತ ಮದ್ಯಗಳು ಹಾಗೂ ಬಿಯರ್‌ನ ಬೆಲೆಗಳ ಸ್ಲ್ಯಾಬ್‌ಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ' ಎಂದು ತಿಳಿಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಿಎಂಗೆ ಪ್ರಶ್ನೆ ಮಾಡಲಾಯಿತು. ಈ ಕುರಿತಾಗಿ ಅವರು ನೀಡಿರುವ ಉತ್ತರ ಕೂಡ ಸ್ವಾರಸ್ಯಕರವಾಗಿದೆ. ಉತ್ತರಿಸುವ ವೇಳೆ ಸಿಎಂ ಕೆಲವು ಮದ್ಯದ ಬ್ರ್ಯಾಂಡ್‌ಗಳ ವಿವರಗಳನ್ನೂ ನೀಡಿದರು.

ಮದ್ಯದ ಬೆಲೆಯನ್ನು ತರ್ಕಬದ್ಧಗೊಳಿಸುವ ತೀರ್ಮಾನ ಮಾಡಲಾಗಿದೆ. ಪ್ರೀಮಿಯಂ ಬ್ರ್ಯಾಂಡ್‌ಗಳ ರೇಟ್‌ ಕಡಿಮೆ ಆಗಲಿದೆ. ಪ್ರೀಮಿಯಂ ಬ್ರ್ಯಾಂಡ್ಸ್‌ ಅಂದ್ರೆ ಗೊತ್ತಲ್ವಾ ನಿಮಗೆ (ಪತ್ರಕರ್ತರಿಗೆ)? ಗೊತ್ತಾ ಪ್ರೀಮಿಯಂ ಬ್ರ್ಯಾಂಡ್ಸ್‌ ಅಂದ್ರೆ? ಎಲ್ಲಾ ಗೊತ್ತಿದೆ..ಹೇಳಲ್ಲ ನೀವು ಅಷ್ಟೇ ಎಂದು ಸಿದ್ಧರಾಮಯ್ಯ ಹೇಳುವ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, 'ಸಾಹುಕಾರರು ಕುಡಿಯೋ ಎಣ್ಣೆಗೆ ಜಾಸ್ತಿ ಮಾಡ್ತಿದ್ದೀವಿ, ಬಡವರು ಕುಡಿಯೋ ಎಣ್ಣೆಗೆ ಕಡಿಮೆ ಮಾಡುತ್ತಿದ್ದೇವೆ' ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ, 'ಹೇ ಇಲ್ಲಪ್ಪ.. ಹಾಗಲ್ಲ ಅದು..' ಎನ್ನುತ್ತಾ, ಕಳೆದ ಸಾರಿ ಅದು ರೇಟ್‌ ಸ್ವಲ್ಪ ಜಾಸ್ತಿ ಆಗಿತ್ತು. ಅದೀಗ ಕಡಿಮೆ ಆಗುತ್ತೆ. 'ಬ್ಲ್ಯೂ ಲೇಬಲ್‌, ರಾಯಲ್‌ ಸೆಲ್ಯೂಟ್‌..' ಇವುಗಳ ರೇಟ್‌ ಎಲ್ಲಾ ಕಡಿಮೆ ಆಗುತ್ತದೆ ಎಂದು ಹೇಳುವ ಮೂಲಕ ಸಿಎಂ ಹಾಸ್ಯ ಚಟಾಕಿ ಹಾರಿಸಿದರು. ಅಕ್ಕಪಕ್ಕದ ರಾಜ್ಯಗಳಲ್ಲಿ ಇವುಗಳಿಗೆಲ್ಲಾ ರೇಟ್‌ ಹೇಗಿದೆ ಎನ್ನುವುದನ್ನು ನೋಡಿಕೊಂಡು ನಾವು ರೇಟ್‌ಅನ್ನು ತರ್ಕಬದ್ಧಗೊಳಿಸಲಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.



ಬಿಜೆಪಿ ನಮ್ಮ ಗ್ಯಾರಂಟಿ ಪದ ಕದ್ದು ಬಿಟ್ಟಿದೆ:  ನಮ್ಮ ಗ್ಯಾರಂಟಿಯನ್ನು ಬಿಟ್ಟಿ ಭಾಗ್ಯ ಎಂದು ಕರೆಯುವ ಮೂಲಕ ಬಿಜೆಪಿಗರು ಬಡವರಿಗೆಲ್ಲಾ ಅವಮಾನ ಮಾಡಿದ್ದಾರೆ. ನಮ್ಮ ಗ್ಯಾರಂಟಿ ಪದವನ್ನೇ ಅವರು ಕದ್ದು ಬಿಟ್ಟಿದ್ದಾರೆ. ಈಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತೆ. ನಮ್ಮ ಗ್ಯಾರಂಟಿಯನ್ನ ಅವರು ಕಾಪಿ ಮಾಡಿಬಿಟ್ಟಿದ್ದಾರೆ ಎಂದು ಹೇಳಿದರು. ನಮ್ಮ ಬಜೆಟ್  ಸಾಮಾಜೀಕ ನ್ಯಾಯದ ಆದರದಲ್ಲಿ ಎಲ್ಲಾ ವರ್ಗ ಜಿಲ್ಲೆಗಳೂ ಅನುಕೂಲವಾಗುವಂತ ಬಜೆಟ್ ಮಂಡಿಸಿದ್ದೇವೆ. ಪಾಪ ಕುಮಾರಸ್ವಾಮಿ ಸಹ ಅವರ ಜೊತೆ ಸೇರಿಕೊಂಡು ಬಿಟ್ಟಿದ್ದಾರೆ. ಮಾರಸ್ವಾಮಿ ಈಗ ಬಿಜೆಪಿ ವಕ್ತಾರ ಆಗಿದ್ದಾರೆ‌ ಎಂದು ತಿವಿದಿದ್ದಾರೆ. ಬಿಜೆಪಿ ಜೆಡಿಎಸ್ ನವರಿಗೆ ಬಜೆಟ್ ಅಂದ್ರೆನೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಅನ್ಯಾಯವಾಗಿದೆ ಎಂದು ಹೇಳಿದ್ರೆ ಅದನ್ನ ಸಹಿಸೋಕೆ ಆಗಲ್ಲ ಇವರಿಗೆ. ನಮ್ಮ ಬಜೆಟ್ ದೂರದೃಷ್ಟಿಯುಳ್ಳ ಬಜೆಟ್. ರಾಜ್ಯದ ಸರ್ವತೋಮುಖ ಅಭಿವೃದ್ಧಿಪೂರಕ ಬಜೆಟ್ ಎಂದರು. ಅಂಜನಾದ್ರಿ ಗೆ 100 ಕೋಟಿ ಕೊಟಿದ್ದೇವೆ. ಜನಾರ್ಧನ ರೆಡ್ಡಿ ಬಂದು ಥ್ಯಾಂಕ್ಸ್‌ ಹೇಳಿ ಹೋದರು ಎಂದರು.

ಉತ್ತರ ಪ್ರದೇಶಕ್ಕೆ ಕೊಡಿ, ಆದರೆ ನಮ್ಮನ್ನು ಹಸಿವಿನಲ್ಲಿ ಇಡಬೇಡಿ: ಕೇಂದ್ರಕ್ಕೆ ತಿವಿದ ಸಿಎಂ ಸಿದ್ದರಾಮಯ್ಯ

ಅವರದ್ದದು ಬಾಯಲ್ಲಿ ಮಾತ್ರ ಸಬ್‌ಕಾ ವಿಕಾಸ್‌:
ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ಎಂಬ ಬಿಜೆಪಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಸಿಎಂ 3,71383 ಕೋಟಿ ಬಜೆಟ್ ಗಾತ್ರ. ಇದರಲ್ಲಿ 3071 ಕೋಟಿ ಮುಸ್ಲಿರಿಗೆ ಕೊಟ್ಟು ಬಿಟ್ನಾ? ಅವರದ್ದು ಕಾಮಲೇ ಕಣ್ಣು. ಅವರಿಗೆ ಕಾಮಲೇ ರೋಗ. ಅವರದ್ದು ಬಾಯಲ್ಲಿ ಮಾತ್ರ ಸಬ್ ಕಾ ಸಾಥ್, ಸಬ್‌ಕಾ ವಿಕಾಸ್‌ ಎಂದರು. ಇನ್ನು ಬೆಂಗಳೂರಿಗೆ ಅನುದಾನ ಜಾಸ್ತಿ ಕೊಟ್ಟಿಲ್ಲ ಆದರೆ,  ಕಾರ್ಯಕ್ರಮಗಳಿಗೆ ಜಾಸ್ತಿ ಇವೆ ಎಂದರು.

ಪ್ರತಿ ಜಿಲ್ಲೆಗಳಲ್ಲೂ ಡೇ-ಕೇರ್‌ ಕಿಮೋಥೆರಪಿ ಕೇಂದ್ರ, 7 ತಾಲೂಕುಗಳಲ್ಲಿ ಹೊಸ ಆಸ್ಪತ್ರೆ!

ವಾಣಿಜ್ಯ ಸಾರಿಗೆ ವಾಹನಗಳ ನೋಂದಣಿ ಮೇಲೆ ಸುಂಕ ಮತ್ತು ಆನ್ ಲೈನ್ ವಹಿವಾಟುಗಳ ಮೇಲೆ ಸೆಸ್ ವಿಧಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಇದಕ್ಕಾಗಿ ಬಿಲ್ ತರುತ್ತೇವೆ. ಆ ಬಿಲ್ ನಲ್ಲಿ ಎಷ್ಟು ಸೆಸ್ ಅಂತ ನಿರ್ಧಾರ ಮಾಡ್ತೀವಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ - ಸಿಎಂ ಡಿಸಿಎಂ