ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ: ಕೊನೆಗೂ ನನಸಾಯ್ತು ವರ್ಷಗಳ‌ ಹಳೆಯ ಬೇಡಿಕೆ!

By Govindaraj S  |  First Published Feb 16, 2024, 11:59 PM IST

ಅದು 25 ವರ್ಷಗಳ ಸುದೀರ್ಘ ಬೇಡಿಕೆಯಾಗಿತ್ತು. ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗೆ ಬಸವನಾಡಿನ ಜನತೆ ಸರ್ಕಾರಗಳನ್ನ ಒತ್ತಾಯಿಸುತ್ತಲೆ ಬಂದಿದ್ದರು. ಆದ್ರೆ ಬಸವಾಭಿಮಾನಿಗಳ ಒತ್ತಾಯ ಕೇವಲ ಒತ್ತಾಯವಾಗಿಯೇ ಉಳಿದಿತ್ತು. 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಫೆ.16): ಅದು 25 ವರ್ಷಗಳ ಸುದೀರ್ಘ ಬೇಡಿಕೆಯಾಗಿತ್ತು. ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗೆ ಬಸವನಾಡಿನ ಜನತೆ ಸರ್ಕಾರಗಳನ್ನ ಒತ್ತಾಯಿಸುತ್ತಲೆ ಬಂದಿದ್ದರು. ಆದ್ರೆ ಬಸವಾಭಿಮಾನಿಗಳ ಒತ್ತಾಯ ಕೇವಲ ಒತ್ತಾಯವಾಗಿಯೇ ಉಳಿದಿತ್ತು. ಆದ್ರಿಗ 25 ವರ್ಷಗಳ ಹಳೆಯ ಬೇಡಿಕೆ ಈಗ ಇಡೇರಿದೆ. ಕೊನೆಗು ಸರ್ಕಾರ ಬಸವಣ್ಣನವರ ಜನ್ಮಭೂಮಿ ಅಭಿವೃದ್ಧಿಗಾಗಿ ಬಸವನ ಬಾಗೇವಾಡಿ ಪ್ರಾಧಿಕಾರ ಘೋಷಣೆ ಮಾಡಿದೆ. ಇದು ಬಸವನಾಡಿನ ಬಸವಾಭಿಮಾನಿಗಳು, ಶರಣರಲ್ಲಿ ಸಂತಸ ಮೂಡಿಸಿದೆ. 

Latest Videos

undefined

ಅಭಿವೃದ್ಧಿ ಪ್ರಾಧಿಕಾರ 25 ವರ್ಷಗಳ ಹಳೆಯ ಬೇಡಿಕೆ: ಬಸವಣ್ಣನವರು ಹುಟ್ಟಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಅಭಿವೃದ್ಧಿ ವಿಚಾರ ಕಳೆದ 25 ವರ್ಷಗಳಿಂದ‌ ಇಂದಿನ ವರೆಗು ಬೇಡಿಕೆಯಾಗಿಯೇ ಉಳಿದಿತ್ತು‌. ಬಸವ ಜನ್ಮ ಭೂಮಿಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಎನ್ನುವ ಬೇಡಿಕೆಯನ್ನ ಬಸವಾಭಿಮಾನಿಗಳು ಇಡುತ್ತಲೆ ಬಂದಿದ್ದರು. ಆದ್ರೆ ಸರ್ಕಾರಗಳು ಇದನ್ನ ಪರಿಗಣನೆಗೆ ತೆಗೆದುಕೊಳ್ಳದೆ ನಿರಾಸೆ ಮಾಡುತ್ತಲೆ ಬಂದಿದ್ದವು. ಈಗ ಕೊನೆಗು ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದೆ.‌ 25 ವರ್ಷಗಳ ಬಳಿಕ ಬಸವಾಭಿಮಾನಿಗಳ ಬೇಡಿಕೆ ಇಡೇರಿದೆ..

ಪೌರ ಕಾರ್ಮಿಕರ ಸೇವೆ ತಕ್ಷಣ ಕಾಯಂಗೊಳಿಸಿ: ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ

ಬಸವಾಭಿಮಾನಿಗಳಲ್ಲಿ ಸಂತಸ ಸಂಭ್ರಮ: ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಬಸವ ಜನ್ಮ ಭೂಮಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಘೋಷಣೆಯಾಗಿದೆ.‌ ಘೋಷಣೆಯಾಗ್ತಿದ್ದಂತೆ ಬಸವಾಭಿಮಾನಿಗಳಲ್ಲಿ ಸಂತಸ ಮೂಡಿದೆ.‌ ಬಸವನ ಬಾಗೇವಾಡಿಯಲ್ಲಿ ಸೇರಿದ ಬಸವ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿಹಿ ಹಂಚಿ ಸಂತಸ ಹಂಚಿಕೊಂಡಿದ್ದಾರೆ. 

2000ರಲ್ಲೆ ಸಿಎಂ ಕೃಷ್ಣಾಗೆ ಪತ್ರ ಬರೆದಿದ್ದ ಮಾಂತೇಶ್ ಸಂಗಮ: ಇನ್ನೂ ವಿಶೇಷ ಅಂದ್ರೆ ಕಳೆದ 24 ವರ್ಷಗಳ ಹಿಂದೆಯೇ ಬಸವನ ಬಾಗೇವಾಡಿಯ ಬಸವ ಜನ್ಮ ಸ್ಮಾರಕ ನಿರ್ಮಾಣ ಹೋರಾಟಗಾರರಾದ ಮಹಾಂತೇಶ ಸಂಗಮ ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಬೇಕು ಎಂದು ಆಗ್ರಹಿಸಿದ್ದರು. 27 ಅಕ್ಟೋಬರ್ 2000 ರಂದು ಆಗ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣಾರಿಗೆ ಪತ್ರ ಬರೆದಿದ್ದ ಮಹಾಂತೇಶ ಸಂಗಮ ಪ್ರತ್ಯೇಕ ಪ್ರಾಧಿಕಾರಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮ ಅಭಿವೃದ್ಧಿ ಪ್ರತ್ಯೇಕ ಪ್ರಾಧಿಕಾರ ರಚಿಸಿದಾಗ, ಅದೆ ಮಾದರಿಯಲ್ಲಿ ಬಸವ ಜನ್ಮಭೂಮಿ ಅಭಿವೃದ್ಧಿಗು ಪ್ರತ್ಯೇಕ ಪ್ರಾಧಿಕಾರ ರಚಿಸಿ ಎಂದು ಬೇಡಿಕೆ ಇಟ್ಟಿದ್ದರು. ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್ ಆರ್ ಕಾಶಪ್ಪನವರ್, ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್ ಗೆ ಪತ್ರ ವನ್ನ ರವಾನಿಸಿದ್ದರು. ಈ ಮನವಿ ಸಲ್ಲಿಸಿದ 24 ವರ್ಷಗಳ ಬಳಿಕ ಬಸವ ಜನ್ಮಭೂಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಘೋಷಣೆಯಾಗಿದೆ. 

ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಅಡಿ ಮಾಸಿಕ ₹2000: ಸಚಿವ ಸಂಪುಟ ಒಪ್ಪಿಗೆ

ಪ್ರಾಧಿಕಾರ ವ್ಯಾಪ್ತಿಯ ಎಷ್ಟು? ಎಷ್ಟು ಹಣ ಮೀಸಲು?: ಇನ್ನೂ ಬಸವ ಜನ್ಮಭೂಮಿ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಪ್ರಾಧಿಕಾರವೇನೋ ರಚನೆಯಾಗಿದೆ. ಆದ್ರೆ ಪ್ರಾಧಿಕಾರದ ವ್ಯಾಪ್ತಿ ಏನು? ಹಾಗೂ ಎಷ್ಟು ಹಣ ಮೀಸಲು ಇಡಲಾಗಿದೆ ಎನ್ನುವ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಪ್ರಾಧಿಕಾರದ ವ್ಯಾಪ್ತಿಗೆ ಬಸವಣ್ಣನವರ ಆಪ್ತಕಾರ್ಯದರ್ಶಿಗಳಾಗಿದ್ದ ಶರಣ ಹಡಪದ ಅಪ್ಪಣ್ಣನವರ ಜನ್ಮ‌ಸ್ಥಳ ಮಸಬಿನಾಳ, ಬಸವಣ್ಣನವರ ಧರ್ಮಪತ್ನಿ ನೀಲಮ್ಮ ಊರು ತಂಗಡಗಿ, ಶರಣ ಮಡಿವಾಳ ಮಾಚಿದೇವರ ದೇವರ ಹಿಪ್ಪರಗಿ ಸ್ಥಳಗಳು ಪ್ರಾಧಿಕಾರ ವ್ಯಾಪ್ತಿಗೆ ಬರುತ್ತಾವಾ ಎನ್ನುವುದು ಬಸವಾಭಿಮಾನಿಗಳ ಪ್ರಶ್ನೆಯಾಗಿದೆ. ಇನ್ನೂ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಶರಣರ ಪುಣ್ಯಕ್ಷೇತ್ರಗಳು ಅಭಿವೃದ್ಧಿಯಾಗಲಿ ಎನ್ತಿದ್ದಾರೆ ಬಸವ ನಾಡಿನ ಬಸವಾಭಿಮಾನಿಗಳು.

click me!