ಜು.25, 26ಕ್ಕೆ ರಾಜ್ಯದ ಎಲ್ಲೆಡೆ ಬಿಜೆಪಿ SIR ಜಾಗೃತಿ ಅಭಿಯಾನ, ಪ್ರತಿ ಕಾರ್ಯಕರ್ತನಿಗೆ ಕೊಟ್ಟ ಟಾರ್ಗೆಟ್ ಎಷ್ಟು?

Kannadaprabha News   | Kannada Prabha
Published : Jul 22, 2026, 06:11 AM IST
Karnataka BJP s SIR awareness campaign across the state on July 25 and 26

ಸಾರಾಂಶ

ಜುಲೈ 25 ಮತ್ತು 26 ರಂದು ಬಿಜೆಪಿ ರಾಜ್ಯಾದ್ಯಂತ ಎಸ್‌ಐಆರ್ ಫಾರಂ ಕುರಿತು ಜಾಗೃತಿ ಮೂಡಿಸಲು ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ನಡೆಯುವ ಈ ಅಭಿಯಾನದಲ್ಲಿ, 1 ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಹೊಂದಲಾಗಿದೆ -ವಿಜಯೇಂದ್ರ

  • 1 ಕೋಟಿ ಮನೆಗಳ ತಲುಪುವ ಗುರಿ
  •  ಫಾರಂ ಭರ್ತಿಗೆ ಈ ವೇಳೆ ಸಹಾಯ

 ಶಿವಮೊಗ್ಗ (ಜು.22): ಜುಲೈ 25 ಹಾಗೂ 26ರಂದು ಬಿಜೆಪಿಯಿಂದ ರಾಜ್ಯಾದ್ಯಂತ ಎಸ್‌ಐಆರ್ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಸ್ಐಆರ್ ಸಂಬಂಧ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರು ಹಾಗೂ ಶಾಸಕರ ನೇತೃತ್ವದಲ್ಲಿ ಮಹಾಸಂಪರ್ಕ ಅಭಿಯಾನ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

1 ಕೋಟಿ ಮನೆಗಳ ತಲುಪುವ ಗುರಿ

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ, ‘ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಂದು ಮಹಾಸಂಪರ್ಕ ಅಭಿಯಾನ ನಡೆಸುತ್ತೇವೆ. ಬಿಜೆಪಿಯ ಸಂಸದರು, ಶಾಸಕರು ಹಾಗೂ ಪರಿಷತ್‌ ಸದಸ್ಯರ ನೇತೃತ್ವದಲ್ಲಿ ಈ ಮಹಾಸಂಪರ್ಕ ಅಭಿಯಾನ ನಡೆಯಲಿದೆ. ಎರಡು ದಿನಗಳ ಈ ಅಭಿಯಾನದಲ್ಲಿ 1 ಕೋಟಿ ಮನೆಗಳನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ’ ಎಂದರು.

ಪ್ರತಿ ಬಿಜೆಪಿ ಕಾರ್ಯಕರ್ತನಿಗೆ ಕನಿಷ್ಠ 20 ಮನೆಗಳು ಟಾರ್ಗೆಟ್

‘ಅಂದು ಬಿಜೆಪಿಯ ಪ್ರತಿ ಕಾರ್ಯಕರ್ತನಿಗೆ ಕನಿಷ್ಠ 20 ಮನೆಗಳನ್ನು ತಲುಪುವ ಗುರಿ ನೀಡಲಾಗುತ್ತಿದೆ. ಅಭಿಯಾನದ ಮೂಲಕ ಮತದಾರರಿಗೆ ಎಸ್ಐಆರ್ ಫಾರ್ಮ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅದರ ಅಗತ್ಯತೆ, ಎಸ್‌ಐಆರ್‌ ಫಾರಂ ತುಂಬುವ ಪ್ರಕ್ರಿಯೆ, ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು ಸೇರಿದಂತೆ ಮತದಾರರಲ್ಲಿ ಎಸ್‌ಐಆರ್‌ ಫಾರಂ ಬಗೆಗೆ ಇರಬಹುದಾದ ಎಲ್ಲಾ ರೀತಿಯ ಗೊಂದಲ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಎಸ್‌ಐಆರ್‌ ಫಾರಂ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ಈ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ದೌರ್ಜನ್ಯ ಎಸಗಿದ ವಿಡಿಯೋ ವೈರಲ್; ಕೊಪ್ಪಳದ ಬೇವೂರು ಪಿಎಸ್‌ಐ ಎತ್ತಂಗಡಿ!
ಸಿಎಂ ಡಿಕೆ ಶಿವಕುಮಾರ್‌ಗೆ ರಂಭಾಪುರಿ ಶ್ರೀಗಳ ಮೇಲೇಕೆ ಅಷ್ಟೊಂದು ಭಕ್ತಿ?: ರಹಸ್ಯ ಬಿಚ್ಚಿಟ್ಟ ಜಗದ್ಗುರುಗಳು!