ಕರ್ನಾಟಕ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ತಾಯಿ ಶ್ರೀಮತಿ ವೆಂಕಮ್ಮ (75) ನಿಧನರಾಗಿದ್ದಾರೆ.
ರಾಯಚೂರು, (ಜುಲೈ.26): ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ತಾಯಿ ಶ್ರೀಮತಿ ವೆಂಕಮ್ಮ (75) ಇಂದು (ಭಾನುವಾರ) ಸಂಜೆ ವಿಧಿವಶರಾಗಿದ್ದಾರೆ.
ವೆಂಕಮ್ಮ ಭಾನುವಾರ ಸಂಜೆ ಎದೆ ನೋವು ಕಾಣಿಸಿಕೊಂಡಿತ್ತು. ಹಿನ್ನಲೆಯಲ್ಲಿ ಅವರನ್ನು ಕೂಡಲೇ ಲಿಂಗಸಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸೆರೆಳೆದಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿದ್ದಾಗಲೇ ಟಿಕೆಟ್ ಪೋನ್ ಬಂತು: ಅಭ್ಯರ್ಥಿಯ ಮನದಾಳದ ಮಾತು
ಮೂವರು ಪುತ್ರರಾದ ರಾಜ್ಯಸಭಾ ಸದಸ್ಯರಾದ ಅಶೋಕ ಗಸ್ತಿ, ಶಶಿಕಾಂತ ಗಸ್ತಿ, ಪ್ರಭು ಗಸ್ತಿ,ಹಾಗು ಓರ್ವ ಪುತ್ರಿ ವಿಜಯಲಕ್ಷ್ಮಿ ಯವರನ್ನು ಬಿಟ್ಟು ಅಗಲಿದ್ದಾರೆ.
ನಾಳೆ (ಸೋಮವಾರ) ಲಿಂಗಸಗೂರು ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.