MGNREGA: ನರೇಗಾ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಬೆಸ್ಟ್‌: ಸಚಿವ ಈಶ್ವರಪ್ಪ

By Girish GoudarFirst Published Apr 12, 2022, 7:57 AM IST
Highlights

*    48 ಸಾವಿರ ಕೆರೆ ಅಭಿವೃದ್ಧಿಪಡಿಸಿದ್ದೇವೆ
*  ‘ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ’ ಕುರಿತ ರಾಷ್ಟ್ರೀಯ ಕಾರ್ಯಾಗಾರ
*  ಮನೆ-ಮನೆಗೆ ನಲ್ಲಿಗಳ ಮೂಲಕ ನೀರು ಪೂರೈಸಲು ಕ್ರಮ 
 

ಬೆಂಗಳೂರು(ಏ.12):  ಕರ್ನಾಟಕ ರಾಜ್ಯವು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ(Job) ಸೃಷ್ಟಿಸುವಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ’ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧ ಕುಡಿಯುವ(Pure Drinking Water) ನೀರಿನ ಸೌಲಭ್ಯ ಕಲ್ಪಿಸಿದ್ದು, ಮನೆ-ಮನೆಗೆ ನಲ್ಲಿಗಳ ಮೂಲಕ ನೀರನ್ನು ಪೂರೈಸಲು ಕ್ರಮ ವಹಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ(Central Government) ಜಲಜೀವನ್‌ ಮಿಷನ್‌ ಉತ್ತೇಜನ ನೀಡಿದೆ. ರಾಜ್ಯವು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಘನ ಮತ್ತು ದ್ರವತ್ಯಾಜ್ಯ ಘಟಕಗಳನ್ನು ಪಂಚಾಯಿತಿಗಳ ಹಂತದಲ್ಲಿ ಸ್ಥಾಪಿಸಲು ಹೆಚ್ಚಿನ ಕ್ರಮವಹಿಸಿರುವುದಾಗಿ ತಿಳಿಸಿದರು.

Latest Videos

Koppal: ನಿವೃತ್ತ ಶಿಕ್ಷಕಿಯ ಬದುಕಿಗೆ ನರೇಗಾ ಆಸರೆ: ಇಳಿ ವಯಸ್ಸಲ್ಲೂ ದುಡಿದು ತಿನ್ನುವ ಪರಿಸ್ಥಿತಿ..!

ಸಂವಿಧಾನದ 73ನೇ ತಿದ್ದುಪಡಿ ಮುಖಾಂತರ 29 ವಲಯಗಳನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದು, ಇವುಗಳಲ್ಲಿ ಅನೇಕ ಚಟುವಟಿಕೆಗಳು ನೇರವಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕವು ಆರೋಗ್ಯ ಗ್ರಾಮ, ಮಕ್ಕಳ ಸ್ನೇಹಿ ಪಂಚಾಯಿತಿಗಳಿಗೆ ಒತ್ತು ನೀಡಿದ್ದು, ಇದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಇನ್ನು ನೈಸರ್ಗಿಕ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ 48 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 608 ಕಲ್ಯಾಣಿ ಮತ್ತು ಪುಷ್ಕರಣಿಗಳಿಗೆ ಪುನರ್ಜೀವ ನೀಡಲಾಗಿದೆ. ಸುಮಾರು 300 ಹೊಸ ಕೆರೆಗಳ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಮಟ್ಟಹೆಚ್ಚಳವಾಗುವುದಾಗಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ನರೇಗಾದಡಿ 30 ಲಕ್ಷ ಮಹಿಳೆಯರಿಗೆ ಕೆಲಸ: 

ಬೆಂಗಳೂರು: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ(MNAREGA) ಯೋಜನೆಯಡಿ ಕೇಂದ್ರ ಸರ್ಕಾರವು(Central Government) ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯ ಗುರಿಯನ್ನು ರಾಜ್ಯಕ್ಕೆ ನೀಡಿತ್ತು. ಆದರೆ ರಾಜ್ಯ ಸರ್ಕಾರ ಹೆಚ್ಚುವರಿ ಬೇಡಿಕೆ ಸಲ್ಲಿಸಿದ್ದರಿಂದ 16 ಕೋಟಿಗೆ ಹೆಚ್ಚಳ ಮಾಡಲಾಯಿತು. ಇದರಲ್ಲಿ ಈಗಾಗಲೇ 15.27 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದರು. 

Jal Jeevan Mission, ನರೇಗಾದಲ್ಲಿ ಗುರಿ ಮೀರಿ ಸಾಧನೆ: ಸಚಿವ ಈಶ್ವರಪ್ಪ

ಮಾ.9 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women's Day) ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ(Karnataka) ಮಟ್ಟದಲ್ಲಿ ನವಭಾರತದ ನಾರಿ ಯೋಜನೆಯಡಿ ಅತ್ಯುತ್ತಮ ಕೆಲಸ ನಿರ್ವಹಿಸಿದ ಮಹಿಳಾ ಕಾಯಕ ಬಂಧುಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಪ್ರಸ್ತುತ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರ ಮೊದಲು 13 ಕೋಟಿ ಮಾನವ ದಿನಗಳ ಉದ್ಯೋಗ(Job) ಸೃಜನೆ ನೀಡಿತ್ತು. ನಾವು ಇದನ್ನು ಡಿಸೆಂಬರ್‌ನಲ್ಲೇ ಪೂರ್ಣಗೊಳಿಸಿ ಹೆಚ್ಚುವರಿ ಬೇಡಿಕೆ ಸಲ್ಲಿಸಿದೆವು. ಬಳಿಕ ಕೇಂದ್ರವು 1.4 ಕೋಟಿ ದಿನ ನೀಡಿತು. ಅದನ್ನೂ ಜನವರಿಯಲ್ಲೇ ಪೂರ್ಣಗೊಳಿಸಿ ಮತ್ತೆ ಬೇಡಿಕೆ ಇಟ್ಟೆವು. ಆಗ ಪುನಃ 1.6 ಕೋಟಿ ದಿನ ನೀಡಿತು. ಒಟ್ಟಾರೆ 16 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಗುರಿ ನೀಡಿದ್ದು, ಇದರಲ್ಲಿ 15.27 ಕೋಟಿ ಗಡಿ ದಾಟಿದ್ದೇವೆ ಎಂದು ವಿವರಿಸಿದರು.
 

click me!