ಒಂದು ಮತಕ್ಕಿದೆ ಎಲ್ಲವನ್ನೂ ಬದಲಿಸುವ ಶಕ್ತಿ: ರಮೇಶ್ ಅರವಿಂದ

By Kannadaprabha News  |  First Published May 10, 2023, 5:20 AM IST

ಒಂದು ಮತಕ್ಕಿರುವ ಶಕ್ತಿ ಗೊತ್ತೇ? ಅದು ಎಲ್ಲವನ್ನೂ ಬದಲಾಯಿಸಬಲ್ಲದು, ಎಲ್ಲವನ್ನೂ ಅಂದರೆ ಎಲ್ಲವನ್ನೂ! ಹಾಗಿದ್ದ ಮೇಲೆ ಮತ ಚಲಾಯಿಸದೇ ಇರುವುದಕ್ಕೆ ಹೇಗೆ ಸಾಧ್ಯ? ಸುಂದರವಾದ ಬದುಕು ಬೇಕು ಅಂತ ಆಶೆಪಡುತ್ತಾ, ಕಣ್ಣೆದುರು ಕಾಣಿಸುವ ಆ ಬದುಕಿನತ್ತ ಒಂದು ಹೆಜ್ಜೆಯನ್ನೂ ಇಡದೇ ಇರುತ್ತೇವಾ? ಇಲ್ಲವಷ್ಟೇ?


- ರಮೇಶ್‌ ಅರವಿಂದ್‌, ನಟ

ಒಂದು ಮತಕ್ಕಿರುವ ಶಕ್ತಿ ಗೊತ್ತೇ? ಅದು ಎಲ್ಲವನ್ನೂ ಬದಲಾಯಿಸಬಲ್ಲದು, ಎಲ್ಲವನ್ನೂ ಅಂದರೆ ಎಲ್ಲವನ್ನೂ! ಹಾಗಿದ್ದ ಮೇಲೆ ಮತ ಚಲಾಯಿಸದೇ ಇರುವುದಕ್ಕೆ ಹೇಗೆ ಸಾಧ್ಯ? ಸುಂದರವಾದ ಬದುಕು ಬೇಕು ಅಂತ ಆಶೆಪಡುತ್ತಾ, ಕಣ್ಣೆದುರು ಕಾಣಿಸುವ ಆ ಬದುಕಿನತ್ತ ಒಂದು ಹೆಜ್ಜೆಯನ್ನೂ ಇಡದೇ ಇರುತ್ತೇವಾ? ಇಲ್ಲವಷ್ಟೇ?

Tap to resize

Latest Videos

ಒಂದು ಮತ, ಅದರಿಂದೇನಾಗುತ್ತದೆ ಎಂದ ಉಪೇಕ್ಷೆ ಬೇಡ. ಹನಿಗೂಡಿ ಹಳ್ಳ, ಮತ ಕೂಡಿ ಬ್ಯಾಲೆಟ್‌ ಸಾಗರ. ನಮಗೆ ಗೊತ್ತಿರಬೇಕಾದ ಸತ್ಯ ಒಂದಿದೆ. ಯಾವುದೇ ಕಾರಣಕ್ಕೆ, ಯಾವುದೋ ನೆಪಕ್ಕೆ, ಯಾವುದೋ ಉದ್ದೇಶಕ್ಕೆ ನಾವು ಮತಹಾಕದೇ ಉಳಿದರೆ ದುರ್ಬಲವಾಗುವುದು ಪ್ರಜಾಪ್ರಭುತ್ವ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಆಡಳಿತ ಎಂಬ ಮಹಾನ್‌ ಚಿಂತನೆ ಅರ್ಥಹೀನವಾಗಲು ಬಿಡಬಾರದು. ಮತವೆಂಬುದು ನಿಮಗಿರುವ ಸೂಪರ್‌ ಪವರ್‌, ಅದ್ಭುತ ಶಕ್ತಿ. ಆ ಶಕ್ತಿಯನ್ನು ನೀವೇ ಬೇಡವೆಂದು ದೂರವಿಡುತ್ತೀರಾ?

ಕಾದಿಹುದು ಇವಿಎಂ ಮತದಾರ ಬರುವನೆಂದು!

ಒಂದು ಪ್ರಶ್ನೆ ಕೇಳಿಕೊಳ್ಳಿ. ಮುಂದೆ ನಿಮ್ಮ ಮಕ್ಕಳು ಎಂಥಾ ಪ್ರಭುತ್ವದ ಅಡಿಯಲ್ಲಿ ಬದುಕಬೇಕು ಅಂದ ಆಶಿಸುತ್ತೀರಿ? ಅವರು ಬದುಕುವ ದೇಶ ಹೇಗಿರಬೇಕು, ನಗರ ಹೇಗಿರಬೇಕು, ಅವರಿಗೆ ಸಿಗುವ ಅನುಕೂಲಗಳು ಹೇಗಿರಬೇಕು ಅಂತ ಬಯಸುತ್ತೀರಿ?

ಆ ಆಶಯ ಈಡೇರಬೇಕಿದ್ದರೆ ಮತ ಹಾಕಬೇಕು. ನಿಮ್ಮ ಮಕ್ಕಳ ಬದುಕನ್ನು ಪ್ರಭಾವಿಸುವ ಸರ್ಕಾರದ ಆಯ್ಕೆ ನಿಮ್ಮ ಕೈಯಲ್ಲಿದೆ. ನಿಮ್ಮ ಹಿತಾಸಕ್ತಿಗಳನ್ನು ಕಾಪಾಡಬಲ್ಲ ಅಭ್ಯರ್ಥಿಯ ಆಯ್ಕೆ ಮಾಡುವ ಹಕ್ಕು ಮತ್ತು ಸ್ವಾತಂತ್ರ್ಯ ನಿಮ್ಮದು.

ನಾವು ಸದಾ ಗೊಣಗುತ್ತಾ, ದೂರುತ್ತಾ ಇರುತ್ತೇವೆ. ಇಲ್ಲಿ ಯಾವುದೂ ಸರಿಯಿಲ್ಲ, ಇದು ಹೀಗಿರಬಾರದಿತ್ತು, ಹಾಗಿರಬೇಕಿತ್ತು ಎನ್ನುತ್ತೇವೆ. ಸರಿಯಾಗಿಲ್ಲದ ವ್ಯವಸ್ಥೆಯನ್ನು ಹೇಗೆ ಸರಿಪಡಿಸಬೇಕು ಅನ್ನುವುದೂ ನಮಗೆ ಗೊತ್ತಿರುತ್ತದೆ. ಆದರೆ ಯಾವಾಗ, ಎಲ್ಲಿ ಸರಿಪಡಿಸಬಹುದು ಗೊತ್ತೇ? ಈಗ, ಮತ ಹಾಕುವ ಮೂಲಕ. ಸರಿಯಾದ ಆಯ್ಕೆ ಮಾಡುವ ಮೂಲಕ. ಸರಿಯಾದ, ಸಮರ್ಥವಾದ, ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಬಲ್ಲ ಸರ್ಕಾರವನ್ನು ಆಯ್ಕೆ ಮಾಡಿ. ಅವರು ಕೊಟ್ಟಮಾತಿಗೆ ತಪ್ಪಿದರೆ ನಂತರ ಪ್ರಶ್ನೆ ಮಾಡಿ. ಅವರನ್ನು ಜವಾಬ್ದಾರರನ್ನಾಗಿ ಮಾಡಿ.

ಭಾರತ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಹೋರಾಡಿದ್ದು, ಸಾವಿರಾರು ಮಂದಿ ಪ್ರಾಣವನ್ನೇ ಕಳಕೊಂಡದ್ದು, ನೂರಾರು ಮಂದಿ ಹೋರಾಟವನ್ನೇ ಬದುಕು ಮಾಡಿಕೊಂಡದ್ದು ನಿಮಗೆ ಗೊತ್ತಿದೆ. ಅವರ ತ್ಯಾಗಕ್ಕೆ ನಾವು ಕೊಡಬಹುದಾದ ಬೆಲೆ ಏನು? ಜವಾಬ್ದಾರಿಯುತ ಮತದಾನ. ಮತ ಹಾಕುವ ಮೂಲಕ ಅವರು ಕನಸು ಕಂಡ ರಾಷ್ಟ$್ದ ಕಲ್ಪನೆಯನ್ನು ಸಾಕಾರಗೊಳಿಸುವುದು. ಅವರ ಬಲಿದಾನವನ್ನು ಗೌರವಿಸುವುದು.

ಇಂದು ನಂದಿಬೆಟ್ಟ, ಜೋಗ ಹಲವು ಪ್ರವಾಸಿ ತಾಣಗಳು ಬಂದ್‌: ಮತದಾನ ಮಾಡಿದ್ರಷ್ಟೇ ಪ್ರವೇಶ!

ಮತದಾನದ ದಿನ ಎಂದರೆ ರಜಾ ದಿನ ಅಲ್ಲ. ಈ ಒಂದು ದಿನ ನಮ್ಮ ಕೆಲಸ ನಾವು ಮಾಡಿದರೆ, ಐದು ವರ್ಷ ಆತ್ಮಗೌರವದಿಂದ, ನೆಮ್ಮದಿಯಿಂದ, ಸಂತೋಷದಿಂದ ಬಾಳಬಹುದು.

ಬನ್ನಿ, ಮತಹಾಕಿ, ಪ್ರಜಾಪ್ರಭುತ್ವವನ್ನು ಬಲಗೊಳಿಸಿ.

click me!