Karnataka assembly election: ಕಾದಿಹುದು ಇವಿಎಂ ಮತದಾರ ಬರುವನೆಂದು!

ರಾಜ್ಯ ವಿಧಾಸಭಾ ಚುನಾವಣೆಯ ಮತದಾನದ ದಿನ ಬಂದೇ ಬಿಟ್ಟಿದೆ. ಸಾರ್ವಜನಿಕರು ಸಹ ಮತದಾನಕ್ಕೆ ಉತ್ಸುಕರಾಗಿದ್ದಾರೆ. ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಹಲವು ವ್ಯವಸ್ಥೆ ಮಾಡಿದೆ. ವೃದ್ಧರು, ಅಂಗವಿಕಲರಿಗೆ ಮತದಾನಕ್ಕೆ ಕ್ಯಾಬ್‌ ವ್ಯವಸ್ಥೆ, ಮತಗಟ್ಟೆಮಾಹಿತಿ, ಅಭ್ಯರ್ಥಿಗಳ ವಿವರ, ಮತಗಟ್ಟೆಸುತ್ತಲಿನ ಸೌಲಭ್ಯಗಳು ಸೇರಿದಂತೆ ಮತದಾರಸ್ನೇಹಿ ಕ್ರಮಗಳನ್ನು ಕೈಗೊಂಡಿದೆ.

Voting for Karnataka assembly elections today  EVM waiting for the voters rav

ಬೆಂಗಳೂರು (ಮೇ.10) : ರಾಜ್ಯ ವಿಧಾಸಭಾ ಚುನಾವಣೆಯ ಮತದಾನದ ದಿನ ಬಂದೇ ಬಿಟ್ಟಿದೆ. ಸಾರ್ವಜನಿಕರು ಸಹ ಮತದಾನಕ್ಕೆ ಉತ್ಸುಕರಾಗಿದ್ದಾರೆ. ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಹಲವು ವ್ಯವಸ್ಥೆ ಮಾಡಿದೆ. ವೃದ್ಧರು, ಅಂಗವಿಕಲರಿಗೆ ಮತದಾನಕ್ಕೆ ಕ್ಯಾಬ್‌ ವ್ಯವಸ್ಥೆ, ಮತಗಟ್ಟೆಮಾಹಿತಿ, ಅಭ್ಯರ್ಥಿಗಳ ವಿವರ, ಮತಗಟ್ಟೆಸುತ್ತಲಿನ ಸೌಲಭ್ಯಗಳು ಸೇರಿದಂತೆ ಮತದಾರಸ್ನೇಹಿ ಕ್ರಮಗಳನ್ನು ಕೈಗೊಂಡಿದೆ.

ಬಹಳಷ್ಟುಮಂದಿಗೆ ತಮ್ಮ ಮತಗಟ್ಟೆಎಲ್ಲಿದೆ? ಅಲ್ಲಿಗೆ ಹೇಗೆ ಹೋಗಬೇಕು? ಮತ ಚಲಾವಣೆಗೆ ಏನೆಲ್ಲಾ ದಾಖಲೆ ಇರಬೇಕು ಎಂಬುದು ಸೇರಿದಂತೆ ಕೆಲ ಪ್ರಮುಖ ಮಾಹಿತಿಗಳ ಕೊರತೆ, ಗೊಂದಲಗಳು ಸಾಮಾನ್ಯವಾಗಿದೆ. ಈ ಗೊಂದಲ ಪರಿಹರಿಸುವ ಹಾಗೂ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಮತದಾರರ ಸ್ನೇಹಿಯಾದ ‘ಚುನಾವಣಾ’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಇಂದು ನಂದಿಬೆಟ್ಟ, ಜೋಗ ಹಲವು ಪ್ರವಾಸಿ ತಾಣಗಳು ಬಂದ್‌: ಮತದಾನ ಮಾಡಿದ್ರಷ್ಟೇ ಪ್ರವೇಶ!

ಸಾರ್ವಜನಿಕರು ಮೊಬೈಲ್‌ನಲ್ಲಿ ಈ ಚುನಾವಣಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಮತಗಟ್ಟೆವಿವರ, ಲೊಕೇಶನ್‌, ನ್ಯಾವಿಗೇಷನ್‌ ಆದಿಯಾಗಿ ಮತದಾನಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಈ ಆ್ಯಪ್‌ನಲ್ಲಿ ನೋಡಬಹುದಾಗಿದೆ. ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಹೋಮ್‌ ಪೇಜ್‌ನಲ್ಲಿ ಮತದಾರರು ವೋಟರ್‌ ಐಡಿ(ಎಪಿಕ್‌ ಕಾರ್ಡ್‌) ಸಂಖ್ಯೆ ನಮೂದಿಸಿದರೆ ಈ ಮಾಹಿತಿಗಳು ಲಭ್ಯವಾಗಲಿದೆ.

ಏನೆಲ್ಲಾ ಮಾಹಿತಿ ಲಭ್ಯ?

  • ಮತಗಟ್ಟೆವಿವರ, ಲೊಕೇಷನ್‌, ನ್ಯಾವಿಗೇಷನ್‌
  • ಅಭ್ಯರ್ಥಿಗಳ ವಿವರ
  • ಮತದಾನದ ವೇಳಾ ಪಟ್ಟಿ
  • ಮತಗಟ್ಟೆಸಮೀಪದ ಆಸ್ಪತ್ರೆ, ಪೊಲೀಸ್‌ ಠಾಣೆ, ಪಾರ್ಕಿಂಗ್‌ ವ್ಯವಸ್ಥೆ
  • ಮತಗಟ್ಟೆಬಳಿ ಕ್ಯೂನಲ್ಲಿರುವ ಜನರ ಸಂಖ್ಯೆ

ಮತದಾನಕ್ಕೆ 12 ಪರ್ಯಾಯ ದಾಖಲೆಗಳು

ಮತದಾನಕ್ಕೆ ವ್ಯಕ್ತಿಯ ಅಧಿಕೃತ ಗುರುತಿನ ದಾಖಲೆಗಳು ಕಡ್ಡಾಯವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ಮತದಾರರ ಗುರುತಿನ ಚೀಟಿ(ಎಪಿಕ್‌ ಕಾರ್ಡ್‌) ಇಲ್ಲದವರು ಪರ್ಯಾಯ ಗುರುತಿನ ಚೀಟಿಗಳನ್ನು ಬಳಸಿಕೊಂಡು ಮತದಾನ ಮಾಡಲು ರಾಜ್ಯ ಚುನಾವಣಾ ಆಯೋಗ ಅವಕಾಶ ನೀಡಿದೆ. ಅಂದರೆ, ಎಪಿಕ್‌ ಕಾರ್ಡ್‌ ಇಲ್ಲದವರು ಅಧಿಕೃತ 12 ಗುರುತಿನ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಬಳಸಿ ಮತಚಲಾಯಿಸಬಹುದು. ಒಂದು ವೇಳೆ ಅಧಿಕೃತ ಗುರುತಿನ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಮತಚಲಾಯಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಎಪಿಕ್‌ ಕಾರ್ಡ್‌ ಇಲ್ಲದ ಮತದಾರರು ಮತದಾನಕ್ಕೆ ತೆರಳುವಾಗ ಈ ಕೆಳಕಂಡ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಜತೆಯಲ್ಲಿ ತೆಗೆದುಕೊಂಡು ಹೋಗಬೇಕು.

ಪರ್ಯಾಯ ದಾಖಲೆಗಳು ಯಾವುವು?

  • ಪಾನ್‌ ಕಾರ್ಡ್‌
  • ಆಧಾರ್‌ ಕಾರ್ಡ್‌
  • ಪಾಸ್‌ ಪೋರ್ಚ್‌
  • ನರೇಗಾ ಜಾಬ್‌ ಕಾರ್ಡ್‌
  • ಫೋಟೋ ಅಂಟಿಸಿರುವ ಅಂಚೆ ಕಚೇರಿ ಪಾಸ್‌ಬುಕ್‌, ಬ್ಯಾಂಕ್‌ ಪಾಸ್‌ಬುಕ್‌
  • ಫೋಟೋ ಇರುವ ಪಿಂಚಣಿ ದಾಖಲೆ
  • ಕೇಂದ್ರ, ರಾಜ್ಯ, ಸಾರ್ವಜನಿಕ ವಲಯದ ಕಂಪನಿಗಳ ಐಡಿ
  • ಡ್ರೈವಿಂಗ್‌ ಲೈಸೆನ್ಸ್‌
  • ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ ಸ್ಮಾರ್ಚ್‌ ಕಾರ್ಡ್‌
  • ಆರ್‌ಜಿಐ ಮತ್ತು ಎನ್‌ಪಿಆರ್‌ ಅಡಿ ನೀಡಿದ ಸ್ಮಾರ್ಚ್‌ ಕಾರ್ಡ್‌
  • ಎಂಎಲ್‌ಎ, ಎಂಪಿ, ಎಂಎಲ್ಸಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ,
  • ವಿಶೇಷ ಅಂಗವೈಕಲ್ಯ ಕಾರ್ಡ್‌

ಹಿರಿಯ ನಾಗರಿಕರು, ವಿಕಲಚೇತನರಿಗೆ ಕ್ಯಾಬ್‌ ವ್ಯವಸ್ಥೆ

ರಾಜ್ಯ ಚುನಾವಣಾ ಆಯೋಗವು ಮತದಾನಕ್ಕೆ ತೆರಳುವ 80 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಮೇ 10ರಂದು ಮನೆಯಿಂದ ಮತಗಟ್ಟೆಗೆ ತೆರಳಲು ಉಚಿತ ಕ್ಯಾಬ್‌ ಸೌಲಭ್ಯ ಕಲ್ಪಿಸಿದೆ. ಮಳೆ, ಬಿಸಿಲು ಹೆಚ್ಚಾದರೆ ಮತಗಟ್ಟೆಗೆ ತೆರಳಲು ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಓಲಾ, ಉಬರ್‌ ಕ್ಯಾಬ್‌ ಸೇವೆಗಳಿರುವ ಊರುಗಳಲ್ಲಿ ಈ ಸೇವೆಯನ್ನು ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ‘ಚುನಾವಣಾ ಆ್ಯಪ್‌’ ಮೂಲಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮೇ 8ರೊಳಗೆ ಹೆಸರು ನೋಂದಣಿ ಮಾಡಿದವರು ಈ ಸೌಲಭ್ಯ ಪಡೆಯಬಹುದಾಗಿದೆ.

ಸೇವೆ ಪಡೆಯುವುದು ಹೇಗೆ?

ಮೊಬೈಲ್‌ನಲ್ಲಿ ಚುನಾವಣಾ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು. ಹೋಮ್‌ ಪೇಜ್‌ನಲ್ಲಿ ವಾಹನ ಸೇವೆಗಳು ಆಯ್ಕೆ ಮಾಡಬೇಕು. ಅದರಲ್ಲಿ ಜಿಲ್ಲೆ ಆಯ್ಕೆ ಮಾಡಿ ಸಂಬಂಧಪಟ್ಟವಿಧಾನಸಭಾ ಕ್ಷೇತ್ರ ಹಾಗೂ ಮತಗಟ್ಟೆಆಯ್ಕೆ ಮಾಡಬೇಕು. ಬಳಿಕ ವೋಟರ್‌ ಐಡಿ, ಹೆಸರು, ಇ-ಮೇಲ್‌, ಆಧಾರ್‌ ಸಂಖ್ಯೆ ನಮೂದಿಸಬೇಕು. ಇದಾದ ಬಳಿಕ ವಯೋವೃದ್ಧರೋ ಅಥವಾ ವಿಕಲಚೇತನರೋ ಎಂದು ಒಂದನ್ನು ಆಯ್ಕೆ ಮಾಡಬೇಕು. ನಂತರ ಪಿಕಾಪ್‌ ಸ್ಥಳ ಮತ್ತು ಡ್ರಾಪ್‌ ಸ್ಥಳ ಉಲ್ಲೇಖಿಸಿ ಕಡೆಯದಾಗಿ ಸಬ್‌ ಮಿಟ್‌ ಕೊಟ್ಟಲ್ಲಿ ಮತದಾನದ ದಿನ ಕ್ಯಾಬ್‌ ಸೌಲಭ್ಯ ಪಡೆಯಬಹುದಾಗಿದೆ. ಇನ್ನು ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರನ್ನು ಮತಗಟ್ಟೆಗೆ ಒಳಗೆ ಕರೆದೊಯ್ಯಲು ವ್ಹೀಲ್‌ ಚೇರ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾರೂ ಇಷ್ಟವಾಗದಿದ್ದಲ್ಲಿ ಇದ್ದೇ ಇದೆ ನೋಟಾ ಆಯ್ಕೆ!

ಕಳೆದ ಈ ಬಾರಿಯಂತೆ ಈ ಬಾರಿಯೂ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಿಷನ್‌ನಲ್ಲಿ (ಇವಿಎಂ) ‘ನೋಟಾ’ ಆಯ್ಕೆ ಸೌಲಭ್ಯ ನೀಡಲಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ತಮ್ಮಿಷ್ಟದ ಅಭ್ಯರ್ಥಿಗೆ ಮತ ಚಲಾಯಿಸಬಹುದು. ಒಂದು ವೇಳೆ ಮತಕ್ಕೆ ಯಾವೊಬ್ಬ ಅಭ್ಯರ್ಥಿಯೂ ಅರ್ಹರಲ್ಲ ಎನಿಸಿದರೆ, ಮತದಾರರು ಇವಿಎಂ ಯಂತ್ರದಲ್ಲಿ ನೀಡಿರುವ ನೋಟಾ ಆಯ್ಕೆಗೆ ತಮ್ಮ ಮತ ಚಲಾಯಿಸಬಹುದಾಗಿದೆ. ಅಂದರೆ, ಈ ಮತ ಯಾವ ಅಭ್ಯರ್ಥಿಗೂ ಜಮೆ ಆಗುವುದಿಲ್ಲ. ನೋಟಾ ಆಯ್ಕೆಯ ಲೆಕ್ಕದಲ್ಲಿ ಜಮೆ ಆಗುತ್ತದೆ. ಮತದಾರ ಅರ್ಹ ಅಭ್ಯರ್ಥಿ ಇಲ್ಲವೆಂದು ಮತ ಚಲಾವಣೆ ಮಾಡದಿರುವುದನ್ನು ತಪ್ಪಿಸಲು ಈ ನೋಟಾ ಪರಿಚಯಿಸಲಾಗಿದೆ.

ಉದಾಹರಣೆಗೆ ಒಂದು ಕ್ಷೇತ್ರದಲ್ಲಿ ವಿವಿಧ ರಾಜ್ಯಕೀಯ ಪಕ್ಷಗಳು ಹಾಗೂ ಪಕ್ಷೇತರರು ಸೇರಿ 15 ಮಂದಿ ಅಭ್ಯರ್ಥಿಗಳು ಇದ್ದಲ್ಲಿ, ಇವಿಎಂ ಯಂತ್ರದಲ್ಲಿ ಈ 15 ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ ಇರುತ್ತದೆ. ಇದರ ಜತೆಗೆ ನೋಟಾ ಆಯ್ಕೆಯೂ ಇರುತ್ತದೆ. ಹೀಗಾಗಿ ಮತದಾರರು ತಮ್ಮಿಷ್ಟದಂತೆ ಮತ ಚಲಾಯಿಸಬಹುದಾಗಿದೆ.

ನಿಮ್ಮ ಮತ ಸರಿಯಾಗಿದೆಯೇ, ಹೀಗೆ ಖಚಿತಪಡಿಸಿಕೊಳ್ಳಿ

ಮತದಾರರು ಮತಗಟ್ಟೆಯಲ್ಲಿ ಮತ ಚಲಾಯಿಸಿದಾಗ ಇವಿಎಂ ಯಂತ್ರದಲ್ಲಿ ಶಬ್ಧ ಹಾಗೂ ವಿವಿ ಪ್ಯಾಟ್‌ನಲ್ಲಿ ಚೀಟಿ ಬರುವುದರಿಂದ ಮತ ಚಲಾವಣೆ ಖಚಿತಪಡಿಸಿಕೊಳ್ಳಬಹುದಾಗಿದೆ. ಅಂದರೆ, ಮತದಾರರು ಮತಗಟ್ಟೆಪ್ರವೇಶದ ಬಳಿಕ ದಾಖಲೆಗಳ ಪರಿಶೀಲನೆ ಹಾಗೂ ಬೆರಳಿಗೆ ಶಾಯಿ ಹಾಕಿದ ಬಳಿಕ ಮತಚಲಾಯಿಸಲು ಇವಿಎಂ ಯಂತ್ರ ಬಳಿಗೆ ಹೋಗಬೇಕು. ಈ ವೇಳೆ ಇವಿಎಂ ಯಂತ್ರದಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿ ಮುಂದಿನ ಬಟನ್‌ ಒತ್ತಿದಾಗ, ಶಬ್ದ ಬರುತ್ತದೆ. ಇದೇ ವೇಳೆ ವಿವಿ ಪ್ಯಾಟ್‌ನಲ್ಲಿ ಚೀಟಿ ಬರುತ್ತದೆ. ಆಗ ಮತಚಲಾವಣೆ ಯಶಸ್ವಿಯಾಗಿರುವುದು ಖಚಿತವಾಗುತ್ತದೆ. ಒಂದು ವೇಳೆ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿ ಎದುರಿನ ಬಟನ್‌ ಒತ್ತಿದಾಗ ಶಬ್ದ ಹಾಗೂ ವಿವಿ ಪ್ಯಾಟ್‌ನಲ್ಲಿ ಚೀಟಿ ಬಾರದಿದ್ದರೆ, ಮತ ಚಲಾವಣೆ ಆಗಿಲ್ಲ ಎಂದು ತಿಳಿದುಕೊಳ್ಳಬೇಕು. ಈ ವೇಳೆ ಸ್ಥಳದಲ್ಲೇ ಇರುವ ಮತಗಟ್ಟೆಅಧಿಕಾರಿಗಳ ಗಮನಕ್ಕೆ ತರಬೇಕು.

ಚಾಲೆಂಜ್‌ ವೋಟ್‌, ಟೆಂಡರ್‌ ವೋಟ್‌

ಮತದಾರರ ಗುರುತಿನಚೀಟಿಯ ಜತೆಗೆ ಮತದಾರನ ಚಹರೆ ಹೋಲಿಕೆಯಾಗದಿದ್ದರೆ ಬೂತ್‌ ಏಜೆಂಟರುಗಳು ತಕಾರರು ತೆಗೆಯಲು ಇರುವ ಅವಕಾಶವೇ ಚಾಲೆಂಜ್‌ ವೋಟ್‌ ಎಂದು ಕರೆಯಲಾಗುತ್ತದೆ. ಮತ ಏಜೆಂಟರುಗಳು ತೆಗೆದ ತಕರಾರನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕಾಗುತ್ತದೆ. ಗುರುತಿನಚೀಟಿಯೊಂದಿಗೆ ಮತದಾರರ ಚಹರೆ ಹೋಲಿಕೆಯಾಗದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಟೆಂಡರ್‌ ವೋಟ್‌ಗೂ ಅವಕಾಶ ಇದೆ. ತಮ್ಮ ಮತವನ್ನು ಬೇರೊಬ್ಬರು ಚಲಾಯಿಸಿದ್ದಾರೆ ಎಂದು ಯಾವುದಾದರೂ ಮತದಾರ ಕಂಡುಕೊಂಡರೆ ಆ ಮತದಾರ ಟೆಂಡರ್‌ವೋಟ್‌ಗೆ ಮನವಿ ಮಾಡಬಹುದು. ಟೆಂಡರ್‌ ಮತಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದರೆ ಅದನ್ನು ಪರಿಗಣಿಸಿ ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.

Karnataka assembly election: ಬೆಂಗಳೂರಿಂದ 3000 ಬಸ್‌ಗಳಲ್ಲಿ ತವರಿಗೆ ಹೊರಟ ಮತದಾರರು!

ಮಳೆ ಬರಬಹುದು, ಬೇಗ ಹೋಗಿ ಮತ ಚಲಾಯಿಸಿ ಬನ್ನಿ

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರವೂ ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ ಮತದಾರರು ಸಂಜೆ ವರೆಗೂ ಕಾಯದೇ ಆದಷ್ಟುಬೇಗ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುವುದು ಒಳಿತು. ಹವಾಮಾನ ವೈಪರಿತ್ಯದ ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಸುರಿಯುತ್ತಿದೆ. ಬುಧವಾರವೂ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯ ಚುನಾವಣಾ ಆಯೋಗವು ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತ ಚಲಾಯಿಸಲು ವೇಳಾಪಟ್ಟಿನಿಗದಿಪಡಿಸಿದೆ. ಹೀಗಾಗಿ ಮತದಾರರು ಸಂಜೆ ವರೆಗೂ ಕಾಯದೆ ಸಾಧ್ಯವಾದಷ್ಟುಮಧ್ಯಾಹ್ನದೊಳಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು.

Latest Videos
Follow Us:
Download App:
  • android
  • ios