ಸೂಕ್ಷ್ಮ ಇರುವುದಕ್ಕೇ ನಾನು ಇನ್ನೂ ಉಳಿದಿದ್ದೇನೆ, ಸುಮ್‌ಸುಮ್ಮನೆ ಮಾತಾಡಲ್ಲ: ಪರಮೇಶ್ವರ್

Kannadaprabha News, Ravi Janekal |   | Kannada Prabha
Published : Mar 17, 2026, 04:57 AM IST
Karnataka assembly Home Minister Parameshwara s Bold Statement My Sensitivity is the Reason I Am Still Here

ಸಾರಾಂಶ

ವಿಧಾನಸಭೆಯಲ್ಲಿ ನಡೆದ ಚರ್ಚೆಯೊಂದರಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು 'ತಾನು ಸೂಕ್ಷ್ಮವಾಗಿರುವುದರಿಂದಲೇ ರಾಜಕೀಯದಲ್ಲಿ ಉಳಿದಿದ್ದೇನೆ' ಎಂದು ಹೇಳುವ ಮೂಲಕ ಗಮನ ಸೆಳೆದರು. ಬಿಜೆಪಿ ಸದಸ್ಯರು ಕಾಲೆಳೆದಾಗ, ಸಂದರ್ಭ ಬಂದಾಗ ಗಟ್ಟಿಯಾಗಿ ಮಾತನಾಡುತ್ತೇನೆ ಎಂದು ನಗುತ್ತಲೇ ಉತ್ತರಿಸಿದರು.

ವಿಧಾನಸಭೆ (ಮಾ.17) ‘ನಾನು ತುಂಬಾ ಸೂಕ್ಷ್ಮ ಇರುವುದಕ್ಕೇ ಇನ್ನೂ ಉಳಿದಿದ್ದೇನೆ. ನಾನು ಸುಮ್ಮನೆ ಎಲ್ಲದಕ್ಕೂ ಮಾತನಾಡುವುದಿಲ್ಲ. ಆದರೆ, ಸಂದರ್ಭ ಬಂದಾಗ ಖಂಡಿತ ಗಟ್ಟಿಯಾಗಿ ಮಾತನಾಡುತ್ತೇನೆ’ ಎಂಬ ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರ ಮಾತು ಗಮನ ಸೆಳೆಯಿತು. 

ಬಿಜೆಪಿಯ ವೇದವ್ಯಾಸ ಕಾಮತ್‌, ಮಂಗಳೂರಿನಲ್ಲಿ ಪೊಲೀಸ್ ಚೌಕಿ ಅಳವಡಿಸಿ ಜಾಹೀರಾತು ಹಾಕಲು ಇಲ್ಲಿಂದ ಸೂಚನೆ ನೀಡಿದ್ದಾರೆ ಎಂದು ದೂರಿದರು. ಆಗ ಡಾ। ಜಿ.ಪರಮೇಶ್ವರ್, ‘ನಾವು ಯಾವ ಸೂಚನೆಯನ್ನೂ ನೀಡಿಲ್ಲ. ನೀವು ಹೇಳಿದ್ದನ್ನು ಸರಿ ಮಾಡಿಕೊಳ್ಳಿ’ ಎಂದರು. ಆಗ ವೇದವ್ಯಾಸ ಕಾಮತ್‌, ‘ಕ್ಷಮಿಸಿ ಸರ್‌, ನಿಮ್ಮ ಹೆಸರೇ ತೆಗೆದುಕೊಂಡಿಲ್ಲ’ ಎಂದರು. ಬಿಜೆಪಿ ಸದಸ್ಯ ಸುರೇಶ್‌ಗೌಡ, ‘ನೀವು ಇಷ್ಟು ಸೂಕ್ಷ್ಮ ಆದರೆ ಹೇಗೆ ಸರ್’ ಎಂದು ಪರಮೇಶ್ವರ್ ಕಾಲೆಳೆದರು. ಪರಮೇಶ್ವರ್, ‘ನಾನು ಸೂಕ್ಷ್ಮ ಇರುವುದಕ್ಕೆ ಇನ್ನೂ ಸರ್ವೈವ್‌ ಆಗಿದ್ದೇನೆ’ ಎಂದರು.

ಬಿಜೆಪಿಯ ಸುನಿಲ್‌ ಕುಮಾರ್, ‘ಉಪಚುನಾವಣೆ ನಂತರ ನಿಮಗೆ ಅವಕಾಶ ಬರುತ್ತದೆ. ಆಗ ಗಟ್ಟಿಯಾಗಿ ಮಾತನಾಡಿ. ನಿಮಗೆ ಅವಕಾಶ ಒದಗಿಬರಬೇಕು ಆ ರೀತಿ ಮಾತನಾಡಿ’ ಎಂದು ಕಾಲಳೆದರು. ಅದಕ್ಕೆ ಪರಮೇಶ್ವರ್‌, ‘ಖಂಡಿತ ಗಟ್ಟಿಯಾಗಿಯೇ ಮಾತನಾಡುತ್ತೇನೆ’ ಎಂದು ನಕ್ಕು ಸುಮ್ಮನಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Speaker UT Khader: ದಶಕಗಳಲ್ಲೇ ಅಪರೂಪದ ಘಟನೆ, ಸ್ಪೀಕರ್‌ ಖಾದರ್‌ ಎದ್ದು ಹೋದರು! ಲಿಖಿತ ಉತ್ತರ ಕೊಡದ್ದಕ್ಕೆ ಅಸಮಾಧಾನ
ಕರ್ನಾಟಕದಲ್ಲಿ ಕಿರು ಸಾಲದ ನೀಡಿಕೆ ಶೇ.34ರಷ್ಟು ಕುಸಿತ