ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲದೆ, ಮದ್ಯ ಮಾರಾಟಗಾರರಿಗೂ ತಟ್ಟಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿಗದಿಗಿಂತ ಹೆಚ್ಚಿನ ಮದ್ಯ ಮಾರಾಟ ಮಾಡಿದ 200ಕ್ಕೂ ಹೆಚ್ಚಿನ ಮದ್ಯ ಮಾರಾಟ ಮಳಿಗೆಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರು (ಮೇ.9) : ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಬಿಸಿ ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲದೆ, ಮದ್ಯ ಮಾರಾಟಗಾರರಿಗೂ ತಟ್ಟಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿಗದಿಗಿಂತ ಹೆಚ್ಚಿನ ಮದ್ಯ ಮಾರಾಟ ಮಾಡಿದ 200ಕ್ಕೂ ಹೆಚ್ಚಿನ ಮದ್ಯ ಮಾರಾಟ ಮಳಿಗೆಗಳನ್ನು ಬಂದ್ ಮಾಡಲಾಗಿದೆ.
ಚುನಾವಣೆ ನೀತಿ ಸಂಹಿತೆ (Code of Election Conduct)ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಕಳೆದ ವರ್ಷಕ್ಕಿಂತ ಶೇ.10ರಿಂದ 20 ಹೆಚ್ಚುವರಿ ಮದ್ಯ ಮಾರಾಟಕ್ಕಷ್ಟೇ ಅವಕಾಶ ನೀಡಲಾಗಿದೆ. ಜತೆಗೆ ಯಾರಾದರೂ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿ ಮಾಡಿದರೆ ಅದರ ಬಗ್ಗೆ ಮಾಹಿತಿ ನೀಡುವಂತೆಯೂ ಚುನಾವಣಾ ಆಯೋಗ ಮದ್ಯ ಮಾರಾಟಗಾರರಿಗೆ ಈ ಹಿಂದೆಯೇ ಸೂಚಿಸಿತ್ತು. ಆದರೆ, ಬೆಂಗಳೂರು ನಗರ(Bengaluru city) ಜಿಲ್ಲೆ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗ ಸೂಚನೆಯನ್ನು ಮೀರಿ ಮದ್ಯ ಮಾರಾಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ನಗರ ಜಿಲ್ಲೆ ವ್ಯಾಪ್ತಿಯ 200ಕ್ಕೂ ಹೆಚ್ಚಿನ ಮದ್ಯ ಮಾರಾಟ ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದ್ದು, ಮುಂದಿನ ಆದೇಶದವರೆಗೆ ಅವುಗಳನ್ನು ತೆರೆಯದಂತೆ ಸೂಚಿಸಲಾಗಿದೆ.
Bengaluru- ಸ್ಲಂಗಳಲ್ಲಿ ಸಿಕ್ತು 20 ಕೋಟಿ ಮೌಲ್ಯದ ಡ್ರಗ್ಸ್! ಚುನಾವಣೇಲಿ ಡ್ರಗ್ಸ್ ನಶೆಯಲ್ಲಿ ತೇಲಾಡಲು ಪ್ಲ್ಯಾನ್!
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಮದ್ಯ ಮಾರಾಟ ಮಳಿಗೆಗಳಿಗೆ ಕಳೆದ ವರ್ಷದ ಬೇಡಿಕೆಯಷ್ಟುಅಥವಾ ಅದಕ್ಕಿಂತ ಶೇ. 10ರಿಂದ 20ರಷ್ಟುಹೆಚ್ಚುವರಿ ಮದ್ಯ ಪೂರೈಕೆ ಮಾಡುವಂತೆ ಅಬಕಾರಿ ಇಲಾಖೆಗೆ ಸೂಚನೆ ನೀಡಿತ್ತು. ಆದರೆ, ನಗರ ಜಿಲ್ಲೆ ವ್ಯಾಪ್ತಿಯ 200ಕ್ಕೂ ಹೆಚ್ಚಿನ ಮದ್ಯ ಮಾರಾಟ ಮಳಿಗೆಗಳು ಕಳೆದ ವರ್ಷಕ್ಕಿಂತ ಹೆಚ್ಚಿನ ಮದ್ಯ ಪೂರೈಕೆಗೆ ಬೇಡಿಕೆಯನ್ನು ಸಲ್ಲಿಸಿವೆ. ಅಲ್ಲದೆ, ಒಮ್ಮೆಲೇ ಹೆಚ್ಚುವರಿ ಪ್ರಮಾಣದ ಮದ್ಯ ಮಾರಾಟ ಮಾಡಿವೆ. ಅಂತಹ ಮಳಿಗೆಗಳ ಕುರಿತಂತೆ ಅಬಕಾರಿ ಇಲಾಖೆ ಮತ್ತು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ, ಒಮ್ಮೆಲೇ ಹೆಚ್ಚಿನ ಪ್ರಮಾಣದ ಮದ್ಯ ಮಾರಾಟಕ್ಕೆ ಕಾರಣ ಪರಿಶೀಲಿಸಿದ್ದಾರೆ. ಆದರೆ, ಆ ಕುರಿತು ಸಮರ್ಪಕ ದಾಖಲೆ ಅಥವಾ ಮಾಹಿತಿ ಸಲ್ಲಿಸದ ಕಾರಣ ಮದ್ಯ ಮಾರಾಟ ಮಳಿಗೆಗಳನ್ನು ಬಂದ್ ಮಾಡಲಾಗಿದೆ.
ತಮಿಳುನಾಡಿನಲ್ಲೂ ಮದ್ಯ ಮಾರಾಟವಿಲ್ಲ
ಮೇ 10ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಮದ್ಯ ಮಾರಾಟ ಮತ್ತೆ ಆರಂಭವಾಗಲಿದೆ. ಅದೇ ರೀತಿ ಮೇ 13ರಂದು ನಡೆಯಲಿರುವ ಮತ ಎಣಿಕೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮೇ 12ರಿಂದ ಮದ್ಯ ಮಾರಾಟ ಇರುವುದಿಲ್ಲ. ತಮಿಳುನಾಡು ಅಬಕಾರಿ ಇಲಾಖೆ(Tamil Nadu Excise Department)ಯೊಂದಿಗೆ ಮಾತುಕತೆ ನಡೆಸಿ, ರಾಜ್ಯದ ಗಡಿ ಭಾಗದಿಂದ 5 ಕಿಮೀ ದೂರದವರೆಗೆ ಯಾವುದೇ ಮದ್ಯ ಮಾರಾಟ ಮಳಿಗೆಯನ್ನು ತೆರೆಯದಂತೆ ಸೂಚಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ 3 ದಿನ ಮದ್ಯ ನಿಷೇಧ, ಕ್ಯೂನಲ್ಲಿ ನಿಂತು ಖರೀದಿ!
ನೀತಿ ಸಂಹಿತೆ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದ 200ಕ್ಕೂ ಹೆಚ್ಚಿನ ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಮಳಿಗೆಗಳನ್ನು ತೆರೆಯದಂತೆ ಸೂಚಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಮಳಿಗೆ ತೆರೆದರೆ ಪರವಾನಗಿ ರದ್ದು ಮಾಡಲಾಗುವುದು. ಹಾಗೆಯೇ, ರಾಜ್ಯದಲ್ಲಿ ಮದ್ಯ ನಿಷೇಧ ಇರುವ ದಿನಗಳಂದು ಗಡಿ ಭಾಗದ ರಾಜ್ಯಗಳ 5 ಕಿಮೀ ವ್ಯಾಪ್ತಿಯಲ್ಲೂ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ.
-ಕೆ.ಎ.ದಯಾನಂದ್, ಎಡಿಇಒ (ಬೆಂಗಳೂರು ನಗರ)