ವಿಧಾನಸಭೆ ಚುನಾವಣೆ ಹಿನ್ನೆಲೆ: ಮನೆ ಬಾಗಿಲಿಗೆ ನೀರು ಕೊಡುವ ಮೂಲಕ ಮತದಾರರ ಓಲೈಕೆಗೆ ಯತ್ನ

Published : Mar 14, 2023, 10:30 PM IST
ವಿಧಾನಸಭೆ ಚುನಾವಣೆ ಹಿನ್ನೆಲೆ:  ಮನೆ ಬಾಗಿಲಿಗೆ ನೀರು ಕೊಡುವ ಮೂಲಕ ಮತದಾರರ ಓಲೈಕೆಗೆ ಯತ್ನ

ಸಾರಾಂಶ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)ಗೆ ವಿವಿಧ ಹಂತದ ರಾಜಕಾರಣಿಗಳಿಂದ ವಿವಿಧ ಪ್ರದೇಶಗಳಿಗೆ ಹೆಚ್ಚಿನ ನೀರು ಪೂರೈಸಬೇಕು ಎಂಬ ಬೇಡಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. 

ಬೆಂಗಳೂರು (ಮಾ.14): ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)ಗೆ ವಿವಿಧ ಹಂತದ ರಾಜಕಾರಣಿಗಳಿಂದ ವಿವಿಧ ಪ್ರದೇಶಗಳಿಗೆ ಹೆಚ್ಚಿನ ನೀರು ಪೂರೈಸಬೇಕು ಎಂಬ ಬೇಡಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. 

ಸ್ಥಳೀಯ ವಾರ್ಡ್ ನಾಯಕನಿಂದ ಹಿಡಿದು ಕ್ಷೇತ್ರದ ಶಾಸಕರವರೆಗೆ ಎಲ್ಲರೂ ತಮ್ಮ ಮತದಾರರನ ಮನೆ ಬಾಗಿಲಿಗೆ ಹೆಚ್ಚು ನೀರು ತುಂಬಿಸಲು ಬಯಸುತ್ತಿದ್ದಾರೆ.

ನಂಬಲರ್ಹ ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌(the new indian express)ಗೆ ತಿಳಿಸಿದ್ದು, ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ನೀರು ಸರಬರಾಜು ಮಾಡುವಂತೆ ಶಾಸಕರು ಅಥವಾ ತಮ್ಮ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಗಳಾಗಿರುವವರು ಕೇಳಿಕೊಳ್ಳುತ್ತಿದ್ದಾರೆ.

Bengaluru: ಸಿಲಿಕಾನ್ ಸಿಟಿಯಲ್ಲಿ ನಂದಿನಿ ಹಾಲು, ಮೊಸರು ಕೊರತೆ!

"ನಾವು ಬೆಂಗಳೂರಿ(Bengaluru)ಗೆ ದಿನಕ್ಕೆ ಗರಿಷ್ಠ 1,450 ಮಿಲಿಯನ್ ಲೀಟರ್ ಕಾವೇರಿ ನೀರನ್ನು ಮಾತ್ರ ಪೂರೈಸಬಹುದು. ಏಕೆಂದರೆ ಅದು ಪಂಪ್ ಮಾಡುವ ಗರಿಷ್ಠ ಪ್ರಮಾಣವಾಗಿದೆ. ನಿಜವಾದ ಅವಶ್ಯಕತೆ ಮತ್ತು ಅಗತ್ಯವಿದ್ದಲ್ಲಿ, ನಿರ್ದಿಷ್ಟ ಪ್ರದೇಶಗಳಿಗೆ ಉಚಿತವಾಗಿ ನೀರಿನ ಟ್ಯಾಂಕರ್‌ ಕಳುಹಿಸುವುದನ್ನು ನಾವು ಪರಿಗಣಿಸಬಹುದು ”ಎಂದು ಮೂಲಗಳು ತಿಳಿಸಿವೆ.

ಹೆಚ್ಚುವರಿ ನೀರಿಗಾಗಿ ಮಾತ್ರವಲ್ಲದೆ ಪರ್ಯಾಯ ದಿನಗಳಲ್ಲಿ ನಾವು ನೀರು ಸರಬರಾಜು ಮಾಡುವ ಸಮಯವನ್ನು ಹೆಚ್ಚಿಸುವ ಬೇಡಿಕೆಯೂ ಇದೆ. "ಅವರಲ್ಲಿ ಕೆಲವರು ನಿರ್ದಿಷ್ಟ ಪ್ರದೇಶಗಳಲ್ಲಿ ಅದನ್ನು ಮೂರು ಗಂಟೆಗಳವರೆಗೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಮೂಲಗಳು ತಿಳಿಸಿವೆ.

Party Rounds: ಊಹಾಪೋಹಗಳಿಗೆ ತೆರೆ ಎಳೆದ ಸೋಮಣ್ಣ! ಮಗನಿಗೂ ಬಿಜೆಪಿ ಟಿಕೆಟ್‌?

 

ಇನ್ನು ಹಲವು ರಾಜಕಾರಣಿಗಳು ಹಣ ನೀಡಿ ಖಾಸಗಿ ನೀರಿನ ಟ್ಯಾಂಕರ್‌ಗಳ ಮೂಲಕವೂ ನೀರು ಪೂರೈಸುತ್ತಿದ್ದು, ಆ ಟ್ಯಾಂಕರ್ ಗಳಿಗೆ ತಮ್ಮ ಪಕ್ಷದ ಚಿಹ್ನೆಗಳು ಮತ್ತು ಅಭ್ಯರ್ಥಿಗಳ ಹೆಸರನ್ನು ಅಂಟಿಸುವುದು ಸಾಮಾನ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!