ಇತಿಹಾಸದಲ್ಲೇ ಮೊದಲು, ಈ ಕ್ಷೇತ್ರಕ್ಕೆ ಹೊಸ ನೀತಿ, ₹4,000 ಕೋಟಿ ಹಣಕಾಸು ಬೆಂಬಲ! 5 ಲಕ್ಷ ಉದ್ಯೋಗ ಸೃಷ್ಟಿಗೆ ಮೆಗಾ ಪ್ಲ್ಯಾನ್ ಏನು?

Kannadaprabha News   | Kannada Prabha
Published : Oct 01, 2026, 07:51 AM IST
Karnataka new textile and apparel policy 4.0

ಸಾರಾಂಶ

ರಾಜ್ಯದಲ್ಲಿ 20 ಸಾವಿರ ಕೋಟಿ ರೂ. ಹೂಡಿಕೆ ಮತ್ತು 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನೂತನ ಜವಳಿ ಮತ್ತು ಉಡುಪು ನೀತಿ 4.0 ಪ್ರಕಟಿಸಲಾಗಿದೆ. ಈ ನೀತಿಯ ಅನುಷ್ಠಾನಕ್ಕಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ 4000 ಕೋಟಿ ರೂ. ಹಣಕಾಸು ಬೆಂಬಲ ನೀಡಲಾಗುತ್ತಿದೆ. ಬೆಂಗಳೂರಿನ ಹೊರಗಡೆ ಕೈಗಾರಿಕೆಗಳ ವಿಸ್ತರಣೆ.

ಬೆಂಗಳೂರು (ಅ.1): ರಾಜ್ಯದ ಜವಳಿ ಮತ್ತು ಉಡುಪು ಕ್ಷೇತ್ರದಲ್ಲಿ 20 ಸಾವಿರ ಕೋಟಿ ರು. ಹೂಡಿಕೆ ಮತ್ತು 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯ ನೂತನ ಜವಳಿ ಮತ್ತು ಉಡುಪು ನೀತಿ 4.0 ಪ್ರಕಟಿಸಲಾಗಿದೆ. ರಾಜ್ಯದ ಜವಳಿ ಮತ್ತು ಉಡುಪು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಸಿಎಂ ಡಿ.ಕೆ.ಶಿವಕುಮಾರ್‌ ಅವರ ವಿಶೇಷ ಆಸಕ್ತಿಯೊಂದಿಗೆ ನೂತನ ನೀತಿ ರೂಪಿಸಲಾಗಿದೆ.

ಜವಳಿ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ನೀತಿ ಅನುಷ್ಠಾನ

ಈ ನೀತಿ 2026-31ಕ್ಕೆ ಅನ್ವಯವಾಗಲಿದೆ. ಅಲ್ಲದೆ, ಜವಳಿ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ನೀತಿ ಅನುಷ್ಠಾನಕ್ಕೆ 4000 ಕೋಟಿ ರು. ಹಣಕಾಸು ಬೆಂಬಲಕ್ಕೂ ಅನುಮೋದನೆ ನೀಡಲಾಗಿದೆ. ಅದರ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ 20 ಸಾವಿರ ಕೋಟಿ ರು. ಆಕರ್ಷಿಸುವುದು ಹಾಗೂ ಐದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ರಾಜ್ಯದ 34 ತಾಲೂಕುಗಳನ್ನು ವಿಶೇಷ ಆದ್ಯತೆಯ ತಾಲೂಕುಗಳೆಂದು ಗುರುತಿಸಲಾಗಿದೆ

ಬೆಂಗಳೂರಿನಾಚೆಗೂ ಜವಳಿ ಉಡುಪು ಕೈಗಾರಿಕೆ

ಬೆಂಗಳೂರಿನಾಚೆಗೂ ಜವಳಿ ಮತ್ತು ಉಡುಪು ಕೈಗಾರಿಕೆಗಳ ವಿಸ್ತರಣೆ, ಪ್ರಾದೇಶಿಕ ಸಮತೋಲದೊಂದಿಗೆ ಕೈಗಾರಿಕಾ ಬೆಳವಣಿಗೆ ಸಾಧಿಸಲು

ಆ ತಾಲೂಕುಗಳಲ್ಲಿ ಸ್ಥಾಪಿಸಲಾಗುವ ಅರ್ಹ ಜವಳಿ ಮತ್ತು ಉಡುಪು ಉತ್ಪಾದನಾ ಘಟಕಗಳಿಗೆ ನೀತಿ ಅಡಿ ಸಾಮಾನ್ಯ ಸೌಲಭ್ಯಗಳ ಜತೆಗೆ ಹೆಚ್ಚುವರಿ ಪ್ರೋತ್ಸಾಹ ಧನ ಹಾಗೂ ರಿಯಾಯ್ತಿ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.

ಮೊದಲ ಬಾರಿಗೆ ರೇಷ್ಮೆ ನೂಲು ಉತ್ಪಾದನೆಗೆ ಸಂಬಂಧಿಸಿದ ರೇಷ್ಮೆ ರೀಲಿಂಗ್‌ ಮತ್ತು ಸ್ಪಿನ್ನಿಂಗ್‌ ಚಟುವಟಿಕೆಗಳನ್ನು ನೀತಿ ವ್ಯಾಪ್ತಿಗೆ ತರಲಾಗಿದೆ. ಅದರ ಜತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಲಬುರಗಿಯ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್‌ ರೀಜನ್‌ ಆ್ಯಂಡ್‌ ಅಪೇರಲ್‌ ಪಾರ್ಕ್‌ನಲ್ಲಿ ಸ್ಥಾಪನೆಯಾಗುವ ಅರ್ಹ ಘಟಕಗಳಿಗೆ ವಿಶೇಷ ಪ್ರೋತ್ಸಾಹ ಧನ ಮತ್ತು ರಿಯಾಯಿತಿಗಳನ್ನು ನೀತಿ ಅಡಿ ನೀಡುವುದಾಗಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಇತಿಹಾಸದಲ್ಲೇ ಮೊದಲು, ಈ ಕ್ಷೇತ್ರಕ್ಕೆ ಹೊಸ ನೀತಿ, ₹4,000 ಕೋಟಿ ಹಣಕಾಸು ಬೆಂಬಲ! 5 ಲಕ್ಷ ಉದ್ಯೋಗ ಸೃಷ್ಟಿಗೆ ಮೆಗಾ ಪ್ಲ್ಯಾನ್ ಏನು?
Goa Mangaluru Vande Bharat Express ಬೆಂಗಳೂರು ಯಶವಂತಪುರಕ್ಕೂ ವಿಸ್ತರಣೆ! ಸಮಯ, ನಿಲುಗಡೆ ಸಂಪೂರ್ಣ ವಿವರ ಇಲ್ಲಿದೆ