ಹಿಂದೂ ಆಚರಣೆಗಳ ದ್ವೇಷಕ್ಕೆ ಒಂದಾದ ಸಿದ್ಧರಾಮಯ್ಯ-ಸ್ಟ್ಯಾಲಿನ್‌, ಆಯುಧಪೂಜೆಯೇ ಟಾರ್ಗೆಟ್‌!

By Suvarna News  |  First Published Oct 18, 2023, 8:36 PM IST

ಕಾವೇರಿ ವಿಚಾರದಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌ ಅವರ ಮಾತಿಗೆ ಬದ್ಧ ಎನ್ನುವಂತೆ ನೀರು ಬಿಡುತ್ತಿರುವ ಕರ್ನಾಟಕಸ ಈಗ ಆಯುಧಪೂಜೆ ಸಂಭ್ರಮದಲ್ಲಿ ಹಿಂದು ಧರ್ಮದ ಆಚರಣೆಗಳ ದ್ವೇಷ ಮಾಡಲು ಮುಂದಾಗಿದೆ. 
 


ಬೆಂಗಳೂರು (ಅ.18): ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರ ಆಯುಧಪೂಜೆ ವಿಚಾರದಲ್ಲಿ ಹೆಚ್ಚೂ ಕಡಿಮೆ ಒಂದೇ ರೀತಿಯ ಸುತ್ತೋಲೆಯನ್ನು ಹೊರಡಿಸಿದೆ. ನಾಡಹಬ್ಬ ದಸರಾದ ಸಂಭ್ರಮದ ವೇಳೆ ನಡೆಯುವ ಆಯುಧ ಪೂಜೆಯ ಸಮಯದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಒಡೆಯುವ ಕುಂಬಳಕಾಯಿ ಮತ್ತು ಬಿಡಿಸುವ ರಂಗೋಲಿಗಳಲ್ಲಿ ಯಾವುದೇ ರಾಸಾಯನಿಕ ಮಿಶ್ರಿತ ಕುಂಕುಮ/ಬಣ್ಣ/ಅರಿಶಿನ/ಸುಣ್ಣವನ್ನು ಬಳಸದಂತೆ ಸರ್ಕಾರ ಆದೇಶ ನೀಡಿದೆ. ಸರ್ಕಾರದ ಈ ಆದೇಶಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದು ಹಿಂದೂ ದ್ವೇಷಿ ಸುತ್ತೋಲೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇಂಡಿ ಒಕ್ಕೂಟದಲ್ಲಿರುವ ಕಾಂಗ್ರೆಸ್‌ ಹಾಗೂ ಡಿಎಂಕೆ ಸರ್ಕಾರಗಳು ಕ್ರಮವಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಆದರೆ, ಎರಡೂ ರಾಜ್ಯಗಳು ಹಿಂದೂಗಳ ಸಂಪ್ರದಾಯವನ್ನೇ ಅದರಲ್ಲೂ ಆಯುಧಪೂಜೆಯನ್ನೇ ಟಾರ್ಗೆಟ್‌ ಮಾಡಿ ಪ್ರಕಟಿಸಿರುವ ಈ ಸುತ್ತೋಲೆ ಬಗ್ಗೆ ಕುತೂಹಲ ವ್ಯಕ್ತವಾಗಿದೆ.

ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್‌ ಮಾಡಿದ್ದು, 'ಎರಡು ರಾಜ್ಯ, ಎರಡು ರಾಜ್ಯ ಸರ್ಕಾರಗಳು. ಆದರೆ ಒಂದೇ ಗುರಿ ಅದು ಆಯುಧ ಪೂಜೆ. ಇಂಡಿ ಮೈತ್ರಿ ಪಕ್ಷಗಳ ನಡುವೆ ನೂರು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಈ ನೆಲದ ಸ್ಥಳೀಯ ಸಂಸ್ಕೃತಿಯ ಮೇಲಿನ ದ್ವೇಷ ಮತ್ತು ತಿರಸ್ಕಾರದ ವಿಚಾರದಲ್ಲಿ ಮಾತ್ರ ಖಂಡಿತವಾಗಿ ಒಂದಾಗುತ್ತಾರೆ. ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂ ಇಂದು ಸರ್ಕಾರಿ ಸುತ್ತೋಲೆಯನ್ನು ಹೊರಡಿಸಿದೆ. ವರ್ಷಗಳಿಂದ, ದಕ್ಷಿಣ ಭಾರತದ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಉದ್ಯೋಗಿಗಳು ಆಯುಧ ಪೂಜೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ಮಹತ್ವದ ಸಾಂಸ್ಕೃತಿಕ ಆಚರಣೆಗೆ ಇದೀಗ ಇಂಡಿ ಒಕ್ಕೂಟ ತನ್ನ ಟಾರ್ಗೆಟ್‌ಅನ್ನಾಗಿ ಮಾಡಿಕೊಂಡಿದೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇತ್ತೀಚೆಗೆ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌ ಅವರ ಪುತ್ರ ಹಾಗೂ ಕ್ರೀಡಾ ಸಚಿವ ಉದಯನಿಧಿ ಸ್ಟ್ಯಾಲಿನ್‌ ಸನಾತನ ಧರ್ಮದ ವಿಚಾರವಾಗಿ ಮಾತನಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಸನಾತನ ಧರ್ಮ ಅನ್ನೋದು ಡೆಂಘೆ ಇದ್ದಂತೆ ಅದನ್ನು ನಿರ್ನಾಮ ಮಾಡಬೇಕು ಎಂದು ಹೇಳಿದ್ದರು. ಆ ನಿಟ್ಟಿನಲ್ಲಿಯೇ ಮುಂದುವರಿದಿರುವ ತಮಿಳುನಾಡು ಸರ್ಕಾರ, ಆಯುಧಪೂಜೆಯ ದಿನದಂದು ಕೆಲವು ಹಿಂದೂ ಆಚರಣೆಗಳಿಗೆ ನಿಷೇಧ ಹೇರುವ ಮೂಲಕ ತನ್ನ ಹಿಂದೂ ವಿರೋಧಿ ನೀತಿಯನ್ನು ಮುಂದುವರಿಸಿದೆ.

ಇನ್ನು ಉದಯನಿಧಿ ಸ್ಟ್ಯಾಲಿನ್‌ ಹೇಳಿದ್ದ ಮಾತುಗಳು ಕರ್ನಾಟಕದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್‌ ಸರ್ಕಾರದ ಪ್ರಿಯಾಂಕ್‌ ಖರ್ಗೆ, ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಇನ್ನೂ ಕೆಲವು ಶಾಸಕ-ಸಚಿವರು ಬೆಂಬಲ ನೀಡಿದ್ದರು. ಅದಲ್ಲದೆ, ಸ್ವತಃ ಸಿಎಂ ಸಿದ್ಧರಾಮಯ್ಯ ಕೂಡ ಕೆಲವೊಂದು ವೇದಿಕೆ ಸಮಾರಂಭದಲ್ಲಿ ಮೈಸೂರು ಪೇಟ, ಹಣೆಗೆ ಕುಂಕುಮ ಹಚ್ಚೋದು ಬೇಡ ಎನ್ನುವಂತೆ ವರ್ತಿಸಿದ್ದರು. ಗಣೇಶೋತ್ಸವದ ಸಮಯದಲ್ಲಿ ಬೆಂಗಳೂರಿನಲ್ಲಿ ಹಿಂದೂಗಳ ಮೆರವಣಿಗೆ ನಿಷೇಧ ವಿಧಿಸಿದ್ದ ಸರ್ಕಾರ, ಮುಸ್ಲೀಮರ ಈದ್‌ ಮಿಲಾದ್‌ ಹಾಗೂ ಕ್ರಿಶ್ಚಿಯನ್ನರ್ ಮೆರವಣಿಗೆಗೆ ಅನುಮತಿ ನೀಡಿತ್ತು.

ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ ಹಾಗೂ ರಂಗೋಲಿ ನಿಷೇಧಿಸಿದ ಸರ್ಕಾರ!

ಈಗ ಆಯುಧಪೂಜೆ ವಿಚಾರದಲ್ಲಿ ವಿಧಾನಸೌಧ, ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕುಂಬಳಕಾಯಿ ಒಡೆಯೋದಕ್ಕೆ 'ರಾಸಾಯನಿಕ'ದ ಕಾರಣ ನೀಡಿ ನಿಷೇಧ ಹೇರಲಾಗಿದೆ. 

Tap to resize

Latest Videos

undefined

ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಭಾರಿ ಮುಜುಗರ: ಸತೀಶ್‌ ಜಾರಕಿಹೊಳಿ ದಸರಾ ಟೀಮ್‌ನಿಂದ ತಿರುಗೇಟು!


 

click me!