ಎಚ್‌ಡಿಕೆ ಹೊಗಳಿದ ಸಾಹುಕಾರ್, ಇನ್ನೂ ಹಲವು ವಿಚಾರ ಬಹಿರಂಗ!

By Suvarna NewsFirst Published Mar 9, 2021, 10:35 AM IST
Highlights

ಸಿಡಿ ರಿಲೀಸ್ ಪ್ರಕರಣ| ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ, ಸಿಡಿ ನಕಲಿ| ತಮ್ಮ ವಿರುದ್ಧ ಮಾಡಲಾದ ಆರೋಪವನ್ನು ಅಲ್ಲಗಳೆದ ಸಾಹುಕಾರ್

ಬೆಂಗಳೂರು(ಮಾ.09) ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ, ಸಿಡಿ ನಕಲಿಯಾಗಿದೆ ಎಂದಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಮಾಡಲಾದ ಆರೋಪವನ್ನು ಅಲ್ಲಗಳೆದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ರಮೇಶ್ ಜಾರಕಿಹೊಳಿ ತನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಇದರ ಹಿಂದಿರುವ ಜನರನ್ನು ಜೈಲಿಗೆ ಹಾಕಿಸುವವರಿಗೂ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಇನ್ನು ಈ ನಡುವೆ ಗದ್ಗದಿತರಾಗಿ ಕಣ್ಣೀರು ಹಾಕಿದ ಜಾರಕಿಹೊಳಿ ಸಿಡಿ ರಿಲೀಸ್ ಆಗುವ ವಿಷಯ ನಾಲ್ಕು ತಿಂಗಳ ಮೊದಲೇ ನನಗೆ ತಿಳಿದಿತ್ತು, ಆದರೆ ನಾನು ತಪ್ಪು ಮಾಡಿಲ್ಲದ ಕಾರಣ ಧೃತಿಗೆಡಲಿಲ್ಲ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ತನಗೆ ಕುಟುಂಬದ ಗೌರವ ಬಹಳ ಮುಖ್ಯ ಎಂದು ಹೇಳಿದ್ದಾರೆ.

"

ಯಾರ ಒತ್ತಡದ ಮೇರೆಗೂ ನಾನು ರಾಜಿನಾಮೆ ಕೊಟ್ಟಿಲ್ಲ, ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣದಿಂದ ರಾಜಿನಾಮೆ ನೀಡಿದ್ದೇನೆ, ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ, ನನಗೆ ನನ್ನ ಕುಟುಂಬದ ಮರ್ಯಾದೆ  ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ತನ್ನ ವಿರುದ್ಧ ಷಡ್ಯಂತ್ರ ನಡೆಸಿದವರ ಹೆಸರು ಹೇಳದ ಸಾಹುಕಾರ್ ಇದು ಒಬ್ಬ ಮಹಾನ್ ನಾಯಕನ ಕುತಂತ್ರವಾಗಿದೆ ಅವರು, ಬೆಂಗಳೂರಿನಲ್ಲಿ ಎರಡು ಕಡೆ ಷಡ್ಯಂತ್ರ ನಡೆದಿರುವ ಬಗ್ಗೆ ಮಾಹಿತಿ ನೀಡಿದರು. ಯಾರು ಷಡ್ಯಂತ್ರ ಮಾಡಿದ್ಧಾರೆ ಎಂದು ನನಗೆ ಚೆನ್ನಾಗಿ ಗೊತ್ತು. ಆದರೆ ನಾನು ಈಗ ಹೇಳಲ್ಲ. ಯಶವಂತಪುರದ ಪೊಲೀಸ್ ಠಾಣೆ ಅಕ್ಕಪಕ್ಕದಲ್ಲಿ ನಾಲ್ಕನೇ ಮಹಡಿ ಹಾಗೂ ಒರಾಯನ್ ಮಾಲ್ ಅಕ್ಕಪಕ್ಕದಲ್ಲಿ ಐದನೇ ಮಹಡಿಯಲ್ಲಿ ಈ ಷಡ್ಯಂತ್ರ ನಡೆದಿದೆ. ಇದಕ್ಕಾಗಿ ನೂರಾರು ಕೋಟಿ ರು ಖರ್ಚು ಮಾಡಿದ್ದಾರೆ. ಇಷ್ಟು ಮಾತ್ರ ನಾನು ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ನಾನು ಸಿಡಿ ಬಿಡುಗಡೆ ಆದ್ಮೇಲೆ ವಚಾನಂದ ಶ್ರೀಗಳ ಆಶ್ರಮದಲ್ಲಿ‌ಇದ್ದೆ. ಮೈಸೂರು ಬೆಟ್ಟಕ್ಕೆ ಹೋಗಿದ್ದೆ. ಸಿಡಿ ಬಿಡುಗಡೆಯಾದ ನಂತರ ನನ್ನ ಬೆನ್ನಿಗೆ ನಿಂತ ಎಲ್ಲಾ ನಾಯಕರು ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ನನ್ನ ಧನ್ಯವಾದ, ಅವರು ನನ್ನ ಪರವಾಗಿದ್ದಾರೆ ಎಂದು ಹೇಳಿದ್ದಾರೆ.

ಯುವತಿಗೆ 5 ಕೋಟಿ ರು ಹಣದ ಜೊತೆಗೆ 2 ಐಷಾರಾಮಿ ಫ್ಲ್ಯಾಟ್ ಗಳನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಸಿಡಿ ರಿಲೀಸ್ ಆಗುವ 26 ಗಂಟೆ ಮೊದಲೇ ನನಗೆ ತಿಳಿದಿತ್ತು, ಆದರೆ ನಾನು ತಪ್ಪು ಮಾಡಿರದ ಕಾರಣ ನಾನು ತಲೆ ಕೆಡಿಸಿಕೊಂಡಿರಲಿಲ್ಲ, ನಾನು ನಿರಪರಾಧಿ ಎಂದು ಕಣ್ಣೀರು ಹಾಕಿದ್ದಾರೆ.

click me!