
ಕಲಬುರಗಿ (ಮಾ.16): ರಾಜ್ಯದಲ್ಲಿ 7ನೇ ವೇತನ ಆಯೋಗದ ಅಂತಿಮ ಶಿಫಾರಸು ಈಡೇಸುವ ಕರ್ತವ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಾಗಿದೆ. ಆದರೆ, ವೇತನ ಆಯೋಗದ ವರದಿ ಸ್ವೀಕಾರ ಮಾಡುವುದು ಗೊತ್ತಿದ್ದರೂ, ಬಜೆಟ್‌ನಲ್ಲಿ ಒಂದು ನಯಾಪೈಸೆಯನ್ನೂ ನೌಕರರ ವೇತನ ಹೆಚ್ಚಳಕ್ಕೆಂದು ಮೀಸಲಿಲಟ್ಟಿಲ್ಲ. ಸರ್ಕಾರಿ ನೌಕರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 7ನೇ ವೇತನ ಆಯೋಗದ ವರದಿ ಜಾರಿ ಮಾಡಬೇಕು. ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಸಿಎಂ ಸಿದ್ದರಾಮಯ್ಯ ಬಹಳಷ್ಟು ಭಾಷಣ ಮಾಡುತ್ತಿದ್ದರು. ಈಗ ಅವರು ಅಧಿಕಾರದಲ್ಲಿದ್ದಾರೆ. ನಾವು ಶೇ.17ರಷ್ಟು ಮಧ್ಯಂತರ ಪರಿಹಾರ ಕೊಟ್ಟಿದ್ದೇವು. ಸಿದ್ದರಾಮಯ್ಯನವರಿಗೆ ಮಾರ್ಚ್ ಏಪ್ರಿಲ್ ನಲ್ಲಿ 7ನೇ ವೇತನ ಆಯೋಗದ ವರದಿ ಬರುತ್ತದೆ ಅಂತ ಗೊತ್ತಿದ್ದರೂ ಕೂಡಾ ಬಜೆಟ್ ನಲ್ಲಿ ಯಾವುದೇ ಹಣ ಮೀಸಲಿಡದೇ. ಸರ್ಕಾರಿ ನೌಕರರಿಗೆ ಮೂಗಿಗೆ ತುಪ್ಪ ಒರಿಸುವ ಕೆಲ್ಸ ಮಾಡಿದ್ದಾರೆ ಎಂದು ಆರೋಪಿಸಿದರು.
ಮೋದಿ ಸರ್ಕಾರ ಕಾರ್ಮಿಕ ಯೋಜನೆಗಳನ್ನು ದುರ್ಬಲಗೊಳಿಸಿದೆ, ನರೇಗಾ ಹಣವೂ ಪಾವತಿಯಾಗ್ತಿಲ್ಲ: ಖರ್ಗೆ ಆರೋಪ
ಈಗ ವೇತನಾ ಆಯೋಗದ ವರದಿ ಜಾರಿ ಆಗುತ್ತದೆಯೋ ಇಲ್ಲವೋ ಕಾದು ನೋಡಬೇಕು. ಈ ಹಿಂದೆಯೇ 7ನೇ ವೇತನ ಆಯೋಗದ ವರದಿ ರೆಡಿಯಾಗಿತ್ತು. ಆದರೂ, 6 ತಿಂಗಳು ಕಾಲಾವಕಾಶ ನೀಡಿದರು. ಈಗ ನೀತಿ ಸಂಹಿತೆ ಜಾರಿ ಆಗುತ್ತಿದೆ. ಆಮೇಲೆ ಮಾಡೋಣ ಅಂತ ಹೇಳುವುದು ಗೊತ್ತಿರುವ ವಿಚಾರವಾಗಿದೆ. ಇದು ಲೋಕಸಭಾ ಚುನಾವಣೆಗಾಗಿ ಮಾಡುತ್ತಿರುವ ಗಿಮಿಕ್ ಎನ್ನುವ ರೀತಿಯಲ್ಲಿ ಮಾರ್ಮಿಕವಾಗಿ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದರು.
ಇದೇ ವೇಳೆ, ಶಿವಮೊಗ್ಗ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪರ್ಧೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ನಾಯಕರು ಈಶ್ವರಪ್ಪ ಅವರ ಜೊತೆ ಮಾತನಾಡುತ್ತಾರೆ. ಇನ್ನು ಈಶ್ವರಪ್ಪ ಅವರ ಎದೆ ಬಗಿದರೆ ಮೋದಿ ಕಾಣುತ್ತಾರೆ ಅಂತ ಅವರೇ ಹೇಳಿದ್ದಾರೆ. ಹಾಗಾಗಿ, ಮೋದಿ ಮೇಲೆ ಅವರಿಗೆ ಭಕ್ತಿ ಇದೆ. ಈಶ್ವರಪ್ಪರನ್ನು ಮತ್ತೆ ಪಕ್ಷದ ನೇತೃತ್ವ ವಹಿಸಲು ಸಹಾಯ ಆಗುತ್ತದೆ ಎಂಬ ವಿಶ್ವಾಸವಿದೆ. ಮಾತುಕತೆಯ ಮೂಲಕ ಎಲ್ಲವೂ ಬಗೆಹರಿಯುತ್ತವೆ ಎಂದು ಹೇಳಿದರು.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಖಿಲ್ ಸ್ಪರ್ಧೆ ಬಗ್ಗೆ ನಮ್ಮ ವರಿಷ್ಠರು ಹಾಗೂ ಜೆಡಿಎಸ್ ನಾಯಕರು ಚರ್ಚೆ ಮಾಡುತ್ತಾರೆ. ಇನ್ನೂ ಯಾವುದು ಅಂತಿಮಗೊಂಡಿಲ್ಲ, ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿದ್ದಾರೆ, ಅವರು ವರಿಷ್ಠರ ಜೊತೆ ಚರ್ಚಿಸಿ ಅಂತಿಮವಾಗುತ್ತದೆ ಎಂದರು.
ಶಿವಮೊಗ್ಗ: ತಂಗಿಯನ್ನು ಪ್ರೀತಿಸಿದ ಭಾವನನ್ನೇ ಇನ್ನೋವಾ ಕಾರಿನಲ್ಲಿ ಸುಟ್ಟು ಹಾಕಿದ ಭಾವಮೈದುನರು!
ಎಲ್ಲಾ ಕ್ಷೇತ್ರದ ರಿಪೋರ್ಟ್ ಗಳು ವರಿಷ್ಠರ ಬಳಿ ಇದೆ, ಯಾರಿಗೆ ಟಿಕೆಟ್ ಕೊಟ್ಟರೆ ಗೆಲುವು ಸಿಗುತ್ತದೆ ಎನ್ನುವ ಸೋಷಿಯಲ್ ಕಾಂಬಿನೇಷನ್ ವರಿಷ್ಠರ ಬಳಿ ಆಗಿದೆ. ಈಗಾಗಲೇ ನಾವು ಏನು ಹೇಳಬೇಕು ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಎಲ್ಲವೂ ಹೇಳಿ ಆಗಿದೆ. ಅಂತಿಮ ನಿರ್ಧಾರ ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಚರ್ಚಿಸಿದ್ದಾರೆ. ಟಿಕೆಟ್ ಹಂಚಿಕೆ ಅದು ಅವರ ಹಂತದಲ್ಲಿದೆ. ಆದಷ್ಟು ಬೇಗನೇ ಎರಡನೇ ಪಟ್ಟಿ ಬಿಡಿಗಡೆ ಆಗಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ