Breaking: ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ, ಈ ಬಾರಿ ಕೂಡ ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್

Published : Apr 21, 2023, 10:20 AM ISTUpdated : Apr 21, 2023, 12:32 PM IST
Breaking: ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ, ಈ ಬಾರಿ ಕೂಡ  ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್

ಸಾರಾಂಶ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯು 95.34% ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.  

ಬೆಂಗಳೂರು (ಏ.21): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾರ್ಚ್ ನಲ್ಲಿ ನಡೆಸಿದ್ದ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಶುಕ್ರವಾರ ಬಿಡುಗಡೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ 74.67% ಫಲಿತಾಂಶ ಬಂದಿದೆ. ಪ್ರತೀ ಬಾರಿಯಂತೆ ಈ ಬಾರಿ ಕೂಡ ಬಾಲಕಿಯರೇ (80.25%) ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗ 85.71% , ವಾಣಿಜ್ಯ ವಿಭಾಗ 75.89%, ಕಲಾ ವಿಭಾಗದಲ್ಲಿ 61.22 % ಫಲಿತಾಂಶ ಬಂದಿದೆ.

ಕಳೆದ ಬಾರಿಯಂತೆ ಈ ಬಾರಿ ಕೂಡ ಈ ಬಾರಿ ದಕ್ಷಿಣ ಕನ್ನಡ (95.34%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (95.24%) ಎರಡನೇ ಸ್ಥಾನ ಪಡೆದಿದೆ. ಕೊಡಗು (90.55%) ತೃತೀಯ ಸ್ಥಾನ ಪಡೆದಿದೆ.  ಯಾದಗಿರಿ (62.98%) ಕೊನೆಯ ಸ್ಥಾನ ಪಡೆದಿದೆ. ನಾಲ್ಕನೇ ಸ್ಥಾನ ಉತ್ತರ ಕನ್ನಡ 89.74,% ವಿಜಯಪುರ 85%, ಚಿಕ್ಕಮಗಳೂರು 83% ಫಲಿತಾಂಶ ಪಡೆದಿದೆ. 

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ತಬಸ್ಸಮ್ ಶಾಹಿಕ್ - 593 ಪ್ರಥಮ ರ‍್ಯಾಂಕ್- NMKRV ಜಯನಗರ
ಕುಶ ನಾಯ್ಕ್ -592- ಎರಡನೇ ರ‍್ಯಾಂಕ್  ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ದಡ್ಡಿ ಕರೀಬಸಮ್ಮ- 592 ಎರಡನೇ ರ‍್ಯಾಂಕ್  ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ಸಹನಾ- 591- ಮೂರನೇ ರ‍್ಯಾಂಕ್  ಸರ್ಕಾರಿ ಪಿಯು ಕಾಲೇಜು ಬೆಳಗಾವಿ 

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ಅನನ್ಯಾ - 600 - ಪ್ರಥಮ ರ‍್ಯಾಂಕ್  ಅಳ್ವಾಸ್  ಪಿಯು ಕಾಲೇಜು ಮೂಡುಬಿದರೆ 
ಅನ್ವಿತ ಡಿಎನ್ 596 - ಎರಡನೇ ರ‍್ಯಾಂಕ್ - ವಿಕಾಸ್ ಕಾಂಪೋಸಿಟ್ ಪಿಯು ಕಾಲೇಜು 
ಶುಭಶ್ರೀ ಎಂ- 595 - ಮೂರನೇ ರ‍್ಯಾಂಕ್  ರಾಜಾಜಿನಗರ ಎಎಸ್ ಸ್ಸಿ ಪಿಯು ಕಾಲೇಜು 

ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪ್ ರ‍್ಯಾಂಕ್  ಪಡೆದ ವಿದ್ಯಾರ್ಥಿಗಳು
ಎಸ್.ಎಂ.ಕೌಶಿಕ್ 596 -  ಪ್ರಥಮ ರ‍್ಯಾಂಕ್ ಕೋಲಾರ, ಗಂಗೋತ್ರಿ ಪಿಯು ಕಾಲೇಜು
ಕಟ್ಟೋಜು ಜೈಶಿಕ್ - 595 - ಎರಡನೇ ರ‍್ಯಾಂಕ್-  Rv Pu ಕಾಲೇಜು ಬೆಂಗಳೂರು ಜಯನಗರ 
ಹರ್ಷಿತ ಆರ್ -594 - ಮೂರನೇ ರ‍್ಯಾಂಕ್ ನಾರಾಯಣ ಪಿಯು ಕಾಲೇಜು ಬೆಂಗಳೂರು

ಈ ಬಾರಿ 42 ಸರಕಾರಿ ಕಾಲೇಜುಗಳು ಮತ್ತು 10 ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಒಟ್ಟು 78 ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 264 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 100 ಫಲಿತಾಂಶ ಬಂದಿದೆ. 

 ಈ ಮೂಲಕ  ನಿರೀಕ್ಷೆಗಿಂತ ಎರಡು ವಾರದ ಮೊದಲೇ ಫಲಿತಾಂಶ ಪ್ರಕಟಿಸಲಾಗಿದೆ. ಮಲ್ಲೇಶ್ವರದಲ್ಲಿರುವ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ  ಫಲಿತಾಂಶ ಪ್ರಕಟಿಸಲಾಗಿದೆ.  ಬೆಳಗ್ಗೆ 11 ಗಂಟೆಯ ವೇಳೆಗೆ ವಿದ್ಯಾರ್ಥಿಗಳು  https://karresults.nic.in/ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಕೂಡ ಫಲಿತಾಂಶ ಕಳುಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

2ND PUC ಜಿಲ್ಲಾವಾರು ಲಿಸ್ಟ್, ಕಳೆದ ಬಾರಿ ಕೊನೆ ಸ್ಥಾನದಲ್ಲಿದ್ದು ಉಗಿಸಿಕೊಂಡ ಚಿತ್ರದುರ್ಗಕ್ಕೆ ಎಷ್ಟನೇ ಸ್ಥಾನ?

ಮಾ.9ರಿಂದ 29ರವರೆಗೆ ಪರೀಕ್ಷೆ ನಡೆಸಲಾಗಿತ್ತು. ಏ.4ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿತ್ತು. ಕೇವಲ 15 ದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ. ಮಂಡಳಿಯು ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿತ್ತು. ಆದರೆ, ಅಂದುಕೊಂಡಿದ್ದ ಅವಧಿಗೂ ಮೊದಲೇ ಮೌಲ್ಯಮಾಪನ ಕಾರ್ಯ ಪೂರ್ಣವಾಗಿರುವುದರಿಂದ ಫಲಿತಾಂಶ ಪ್ರಕಟವಾಗುತ್ತಿದೆ. ಈ ಬಾರಿ ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 7,02,067 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ