
ಬೆಂಗಳೂರು (ಮೇ.22): ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಶೇ.40.36 ರಷ್ಟು ಫಲಿತಾಂಶ ದಾಖಲಾಗಿದೆ.
ತರಗತಿ ವಿದ್ಯಾರ್ಥಿಗಳು, ಪುನರಾವರ್ತಿತ ಮತ್ತು ಖಾಸಗಿ ಸೇರಿ ಪರೀಕ್ಷೆ ಬರೆದಿದ್ದ ಒಟ್ಟು 1,20,410 ವಿದ್ಯಾರ್ಥಿಗಳ ಪೈಕಿ 48,605 (ಶೇ.40.36) ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ -1ರಲ್ಲಿ ಶೇ.81.62 ಫಲಿತಾಂಶವಿತ್ತು. ಈಗ ಎರಡೂ ಪರೀಕ್ಷೆಗಳ ಕ್ರೋಢೀಕೃತ ಫಲಿತಾಂಶ ಶೇ.86.72 ತಲುಪಿದೆ.
ಪರೀಕ್ಷೆ-2ರಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇ.48.78 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕರಲ್ಲಿ ಶೇ.44.72 ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಮಕ್ಕಳ ಫಲಿತಾಂಶ ಶೇ.44.89, ನಗರ ಪ್ರದೇಶದ ಮಕ್ಕಳಲ್ಲಿ ಶೇ.45.96 ರಷ್ಟು ಪಾಸಾಗಿದ್ದಾರೆ.
ಫಲಿತಾಂಶದಲ್ಲಿ ಸಮಾಧಾನವಿಲ್ಲದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿಗೆ ಮೇ 21ರಿಂದ ಮೇ 23ರೊಳಗೆ ಅರ್ಜಿ ಸಲ್ಲಿಸಬಹುದು. ನಂತರ ಛಾಯಾ ಪ್ರತಿಯನ್ನು ಮೇ 24ರಂದು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬಹುದು. ಅಗತ್ಯವೆನಿಸಿದರೆ ಅಂಕ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 25 ಕೊನೇ ದಿನ. ಛಾಯಾ ಪ್ರತಿಗೆ ಪ್ರತಿ ವಿಷಯಕ್ಕೆ530 ರು, ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರು. ನಿಗದಿಪಡಿಸಲಾಗಿದೆ.
ಕಾಲೇಜುವಾರು ಸರ್ಕಾರಿ ಕಾಲೇಜುಗಳಲ್ಲ ಶೇ.42.32, ಅನುದಾನಿತ ಕಾಲೇಜುಗಳಲ್ಲಿ ಶೇ.56.51 ಮತ್ತು ಖಾಸಗಿ ಕಾಲೇಜುಗಳಲ್ಲಿ ಶೇ.49.59, ಬಿಬಿಎಂಪಿ ಕಾಲೇಜುಗಳ ಶೇ.34.06, ವಸತಿ ಕಾಲೇಜುಗಳಲ್ಲಿ ಶೇ.54.29ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಮಾಧ್ಯಮವಾರು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ.44.02, ಆಂಗ್ಲ ಮಾಧ್ಯಮದಲ್ಲಿ ಶೇ.47.26 ರಷ್ಟು ಮಕ್ಕಳು ಪಾಸ್ ಆಗಿದ್ದಾರೆ ಎಂದು ಮಂಡಳಿ ಪ್ರಕಟಿಸಿದೆ.
ಪರೀಕ್ಷೆ-2ರಲ್ಲಿ 315 ಮಂದಿ ಗಣಿತ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಪರೀಕ್ಷೆ-1ರಲ್ಲಿ 10,982 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದರು. ಉಳಿದಂತೆ ಕನ್ನಡದಲ್ಲಿ 60, ಲೆಕ್ಕಶಾಸ್ತ್ರದಲ್ಲಿ 38, ಭೌತಶಾಸ್ತ್ರ-61 ಮತ್ತು ರಸಾಯನಶಾಸ್ತ್ರದಲ್ಲಿ 75 ಮಂದಿ ಶೇ.100 ಅಂಕ ಪಡೆದಿದ್ದಾರೆ.
ಪರೀಕ್ಷೆ 1ರಲ್ಲಿ ಪಾಸಾದರೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ 2 ಬರೆದಿದ್ದ ಮಕ್ಕಳೆಷ್ಟು ಅವರಲ್ಲಿ ಎಷ್ಟು ಮಂದಿಯ ಫಲಿತಾಂಶ ಉತ್ತಮಗೊಂಡಿದೆ ಎಂಬ ಅಂಕಿ-ಅಂಶಗಳನ್ನು ಮಂಡಳಿ ನೀಡಿಲ್ಲ.
ಫಲಿತಾಂಶದಲ್ಲಿ ಸಮಾಧಾನವಿಲ್ಲದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿಗೆ ಮೇ 21ರಿಂದ ಮೇ 23ರೊಳಗೆ ಅರ್ಜಿ ಸಲ್ಲಿಸಬಹುದು. ನಂತರ ಛಾಯಾ ಪ್ರತಿಯನ್ನು ಮೇ 24ರಂದು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬಹುದು. ಅಗತ್ಯವೆನಿಸಿದರೆ ಅಂಕ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 25 ಕೊನೇ ದಿನ. ಛಾಯಾ ಪ್ರತಿಗೆ ಪ್ರತಿ ವಿಷಯಕ್ಕೆ530 ರು, ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1670 ರು. ನಿಗದಿಪಡಿಸಲಾಗಿದೆ.
ಏ.30ರಿಂದ ಮೇ 14ರವರೆಗೆ ನಡೆದ ಪರೀಕ್ಷೆ ಬರೆದಿದ್ದ 80,535 ತರಗತಿ ವಿದ್ಯಾರ್ಥಿಗಳಲ್ಲಿ 36,764 ಮಂದಿ(ಶೇ.45.65) ಉತ್ತೀರ್ಣರಾಗಿದ್ದರೆ, 34,419 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 10,279 ಮಂದಿ (ಶೇ.29.86) ಮತ್ತು 5,456 ಖಾಸಗಿ ಅಭ್ಯರ್ಥಿಗಳಲ್ಲಿ 1,562 ಮಂದಿ (ಶೇ.28.63) ಉತ್ತೀರ್ಣರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ