2026ನೇ ವರ್ಷದ ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ: ಒಟ್ಟು ಎಷ್ಟು ದಿನ ರಜೆ?

Published : Nov 14, 2025, 07:38 AM IST
Karnataka 2026 holidays

ಸಾರಾಂಶ

ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದ್ದು, 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ಬೆಂಗಳೂರು (ನ.14): ರಾಜ್ಯ ಸರ್ಕಾರದ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದ್ದು, 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದ್ದು, ಭಾನುವಾರ ಬರುವ ಮಹಾ ಶಿವರಾತ್ರಿ (ಫೆ.15), ಮಹರ್ಷಿ ವಾಲ್ಮೀಕಿ ಜಯಂತಿ (ಅ.25), ಕನ್ನಡ ರಾಜ್ಯೋತ್ಸವ (ನ.1) ಹಾಗೂ ನರಕ ಚತುರ್ದಶಿ (ನ.8) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು (ಅ.10) ಸಾರ್ವತ್ರಿಕ ರಜೆ ದಿನಗಳ ಪಟ್ಟಿಯಲ್ಲಿ ನಮೂದಿಸಿಲ್ಲ.

ಸೆ.3 ರಂದು (ಗುರುವಾರ) ಕ್ರೈಲ್ ಮೂಹೂರ್ತ, ಅ.18 (ಭಾನುವಾರ) ತುಲಾ ಸಂಕ್ರಮಣ ಹಾಗೂ ನ.26 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2026ರ ಸಾರ್ವತ್ರಿಕ ರಜೆ ಪಟ್ಟಿ: 1) ಜ.15- ಮಕರ ಸಂಕ್ರಾತಿ, ಉತ್ತರಾಯಣ ಪುಣ್ಯಕಾಲ, 2) ಜ.26 - ಗಣರಾಜ್ಯೋತ್ಸವ 3) ಮಾ.19 - ಯುಗಾದಿ , 4) ಮಾ.2 - ರಂಜಾನ್, 5) ಮಾ.31 - ಮಹಾವೀರ ಜಯಂತಿ, 6) ಏ.3 - ಗುಡ್‌ ಫ್ರೈಡೇ, 7) ಏ.14 - ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ, 8) ಏ.20- ಬಸವ ಜಯಂತಿ, 9) ಮೇ 1- ಕಾರ್ಮಿಕ ದಿನಾಚರಣೆ, 10) ಮೇ 28- ಬಕ್ರೀದ್, 11) ಜೂ. 26- ಮೊಹರಂ ಕಡೆ ದಿನ, 12) ಆ.15- ಸ್ವಾತಂತ್ರ್ಯ ದಿನಾಚರಣೆ, 13) ಆ.26 - ಈದ್‌ ಮಿಲಾದ್ 14) ಸೆ.14- ವರಸಿದ್ಧಿ ವಿನಾಯಕ ವ್ರತ, 15) ಅ.2 - ಗಾಂಧಿಜಯಂತಿ, 16) ಅ.20 - ಆಯುಧಪೂಜೆ, 17) ಅ.21 - ವಿಜಯದಶಮಿ, 18) ನ.10- ಬಲಿಪಾಡ್ಯಮಿ, ದೀಪಾವಳಿ, 19) ನ.27 - ಕನಕದಾಸ ಜಯಂತಿ, 20) ಡಿ.25 - ಕ್ರಿಸ್‌ಮಸ್

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಂ ಸಮುದಾಯದವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಬಹುದು.

21 ಪರಿಮಿತ ರಜಾದಿನ

2026ರ ಸಾಲಿನಲ್ಲಿ 21 ಪರಿಮಿತ ರಜಾ ಪಟ್ಟಿಗೆ ಸಂಪುಟ ಸಭೆ ಮಂಜೂರಾತಿ ನೀಡಿದೆ. ಈ ರಜಾ ಪಟ್ಟಿಯಲ್ಲಿ ತುಲಾ ಸಂಕ್ರಮಣ (ಅ.18) ಭಾನುವಾರ ಬರುವುದರಿಂದ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ. ಜತೆಗೆ ಸಾರ್ವತ್ರಿಕ ರಜೆ ದಿನಗಳಲ್ಲಿ ಬರುವ ಬುದ್ದ ಪೂರ್ಣಿಮೆ ಸೇರಿ ಕೆಲ ರಜೆಗಳನ್ನು ಪರಿಮಿತಿ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!