ಹೊರ ದೇಶದಿಂದ ಬರುವವರಿಗೆ ಮಹತ್ವದ ಸುದ್ದಿ ಕೊಟ್ಟ ಅಶೋಕ್

By Suvarna NewsFirst Published May 5, 2020, 5:43 PM IST
Highlights

ವಿದೇಶದಿಂದ ಬಂದ ಕನ್ನಡಿಗರನ್ನು ಕ್ವಾರಂಟೇನ್ ಮಾಡುವ ವಿಚಾರ/  ಶಾಸಕರು, ಸಂಸದರು ಆಯಾ ಜಿಲ್ಲೆಯ ವಿದೇಶದಿಂದ ಬರೋರನ್ನ ಆಯಾ ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಲು ಮನವಿ ಮಾಡಿದ್ದಾರೆ./ ಈ‌ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ/  

ಬೆಂಗಳೂರು(ಮೇ 05) ಜಮೀನು ಹಾಗೂ ನಿವೇಶನ ನೊಂದಣಿ ಆರಂಭವಾಗಿದ್ದು    ಸಬ್ ರಿಜಿಸ್ಟರ್ ಡ್ಯೂಟಿ ಆದಾಯ ಸಂಗ್ರಹ ಪಿಕ್ ಅಪ್ ಆಗಿದೆ.  ಮೊದಲ ದಿನ 6 ಲಕ್ಷ ಆದಾಯ ಸಂಗ್ರಹ ಆಗಿತ್ತು ಮಂಗಳವಾರ 10 ಕೋಟಿ ಸಂಗ್ರಹ ಆಗಿದೆ  ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ  ನೀಡಿದ್ದಾರೆ.

ವಿದೇಶದಿಂದ ಬಂದ ಕನ್ನಡಿಗರನ್ನು ಕ್ವಾರಂಟೇನ್ ಮಾಡುವ ವಿಚಾರದ ಬಗ್ಗೆಯೂ ಅಶೋಕ್ ಮಾಹಿತಿ ನೀಡಿದ್ದಾರೆ . ಶಾಸಕರು, ಸಂಸದರು ಆಯಾ ಜಿಲ್ಲೆಗೆ ವಿದೇಶದಿಂದ ಬರೋರನ್ನ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲು ಮನವಿ ಮಾಡಿದ್ದಾರೆ.  ಈ‌ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.  ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕ್ವಾರಂಟೈನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಶೋಕ್ ತಿಳಿಸಿದರು.

ಎಸ್‌ಎಸ್‌ ಎಲ್ ಸಿ ಪರೀಕ್ಷಾ ದಿನಾಂಕ ಅನೌನ್ಸ್


ಕಾರ್ಮಿಕರನ್ನ ಮನವೊಲಿಸಿ ವಾಪಸ್ ಕ್ಯಾಂಪಸ್ ಗೆ ಕಳುಹಿಸುವ ಕೆಲಸ ಮಾಡುತ್ತಿದ್ದೇವೆ.  ಈಗಾಗಲೇ 1500 ಕಾರ್ಮಿಕರು ವಾಪಸ್ ಬಂದಿದ್ದಾರೆ .  ಉಳಿದವರ ಮನವೊಲಿಸುವ ಕೆಲಸ ನಾವು ಮಾಡ್ತೀವಿ‌.  ಬಿಲ್ಡರ್ ಗಳ ಜೊತೆ ಸಿಎಂ ಸಭೆ ಮಾಡಿದ್ದಾರೆ. ಬಿಲ್ಡರ್ ಗಳು ಪಾಸ್ ಬೇಕು ಅಂತ ಕೇಳಿದ್ದಾರೆ‌.  ಅದನ್ನು ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಕೊರೋನಾ ವಿರುದ್ಧ ರಾಜ್ಯ ಸರ್ಕಾರ ನಿರಂತರ ಹೋರಾಟ ಮಾಡಿಕೊಂಡೇ ಬಂದಿದೆ. ಇದೀಗ ವಿದೇಶದಿಂದ ಬರುವವರನ್ನು ಮೊದಲು ಗುರುತು ಮಾಡಿ  ಅವರವರ ಜಿಲ್ಲೆಯಲ್ಲೇ ಕ್ವಾರಂಟೈನ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

click me!