ಕನ್ನಡಪರ ಸಂಘಟನೆಗಳಿಂದ ಸೋನು ನಿಗಮ್‌ಗೆ ಮಸಿ ಬಳಿಯಲು ತೀರ್ಮಾನ, ಅರ್ಜುನ್ ಜನ್ಯಗೂ ಎಚ್ಚರಿಕೆ!

Published : May 03, 2025, 01:44 PM ISTUpdated : Jul 17, 2025, 03:06 PM IST
ಕನ್ನಡಪರ ಸಂಘಟನೆಗಳಿಂದ ಸೋನು ನಿಗಮ್‌ಗೆ ಮಸಿ ಬಳಿಯಲು ತೀರ್ಮಾನ, ಅರ್ಜುನ್ ಜನ್ಯಗೂ ಎಚ್ಚರಿಕೆ!

ಸಾರಾಂಶ

ಸೋನು ನಿಗಮ್‌ರ ಹೇಳಿಕೆಯಿಂದ ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿವೆ. ಕ್ಷಮೆ ಕೇಳದಿದ್ದರೆ 

ಬೆಂಗಳೂರು (ಮೇ 03): ಭಾರತದ ಪ್ರಸಿದ್ಧ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾವೆ. ಸೋನು ನಿಗಮ್ ನೀಡಿದ ಹೇಳಿಕೆಗಳು ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದ್ದು, ಕೂಡಲೇ ಕನ್ನಡಿಗರ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ನೀವು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿ ಬಂದು ನಿಮ್ಮ ಮುಖಕ್ಕೆ ಮಸಿ ಬಳಿಯಲಾಗುವುದು. ಇದರಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಎಚ್ಚೆತ್ತುಕೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ರವಾನಿಸಿವೆ.

ಬೆಂಗಳೂರಿನ ಅವಲಹಳ್ಳಿಯ ಖಾಸಗಿ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸೋನು ನಿಗಮ್, ಕನ್ನಡ ಅಭಿಮಾನವನ್ನು ಪೆಹಲ್ಗಾಮ್ ಉಗ್ರವಾದಿ ದಾಳಿಗೆ ಹೋಲಿಸಿದ್ದಾರೆ (Sonu Nigam Over Anti-Kannada Comments) ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶಕ್ಕೆ ಒಳಗಾಗಿದ್ದು, ಕ್ಷಮೆ ಕೇಳುವಂತೆ ಪಟ್ಟುಹಿಡಿದಿವೆ.  ಕರ್ನಾಟಕಕ್ಕೆ ಬಂದಾಗ ಕನ್ನಡದ ಹಾಡುಗಳನ್ನು ಹಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಕ್ಕೆ ಈ ರೀತಿ ಹೇಳಿಕೆಯನ್ನು ನಿಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ವೇದಿಕೆ, ಖಾಸಗಿ ಕಾಲೇಜು ಹಾಗೂ ಸಂಗೀತ ಕಾರ್ಯಕ್ರಮ ಆಯೋಜಕರೊಂದಿಗೆ ಮಾತನಾಡಿ, ಸೋನು ನಿಗಮ್‌ನಿಂದ ಬಹಿರಂಗ ಕ್ಷಮೆ ಕೇಳಿಸುವಂತೆ ಒತ್ತಾಯಿಸಿದೆ. ಕ್ಷಮೆ ಕೇಳದಿದ್ದಲ್ಲಿ, ಎಲ್ಲೆಲ್ಲಿ ಸಿಗ್ತಾರೋ ಅಲ್ಲಿ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಅವರ ವಿರುದ್ದ ಪೊಲೀಸರಿಗೆ ದೂರು ನೀಡಲು ರೂಪೇಶ್ ರಾಜಣ್ಣ ಮುಂದಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ. ಸೋನು ನಿಗಮ್ ವಿರುದ್ಧ ಚಲನಚಿತ್ರ ರಂಗದಲ್ಲಿ ಸಂಪೂರ್ಣ ಬಹಿಷ್ಕಾರಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನುಮುಂದೆ ಯಾವುದೇ ಕನ್ನಡ ಚಲನಚಿತ್ರದಲ್ಲಿ ಸೋನು ನಿಗಮ್ ಹಾಡಿದರೆ ಆ ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ಮಾಡಲಾಗುತ್ತದೆ. ಅದಕ್ಕೆ ವಾಣಿಜ್ಯ ಮಂಡಳಿಯೇ ನೇರ ಹೊಣೆಗಾರರಾಗುತ್ತದೆ' ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆಯನ್ನು ನೀಡಿವೆ. ಜೊತೆಗೆ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಹರಿಕೃಷ್ಣ, ಅಜನೀಶ್ ಲೋಕನಾಥ್ ಹಾಗೂ ಇತರರಿಗೆ ಸಹ ಎಚ್ಚರಿಕೆ ನೀಡಲಾಗಿದೆ. ಇವರೆಲ್ಲರೂ ಈ ಘಟನೆಯಿಂದ ಕನ್ನಡಿಗರಿಗೆ ಆಗೊರುವ ಅವಮಾನವನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಸೋನು ನಿಗಮ್ ಹೆಸರು ದೇಶದಲ್ಲಿ ಪ್ರಸಿದ್ಧಿಗೆ ಬರಲು ಕರ್ನಾಟಕದ ಕನ್ನಡ ಸಿನಿಮಾಗಳಲ್ಲಿ ಚಾನ್ಸ್ ಕೊಟ್ಟಿರುವುದೇ ಪ್ರಮುಖ ಕಾರಣವಾಗಿದೆ. ಆದರೂ, ಇದನ್ನು ತಿಳಿದುಕೊಳ್ಳದ ಅವಿವೇಕಿ ವ್ಯಕ್ತಿಯನ್ನ ಕನ್ನಡದ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು ಕನ್ನಡಿಗರಿಗೆ ಧಕ್ಕೆ ತರುವ ಸಂಗತಿಯಾಗಿದೆ' ಎಂಬ ಅಭಿಪ್ರಾಯವನ್ನು ಕನ್ನಡಪರ ಸಂಘಟನೆಗಳು ವ್ಯಕ್ತಪಡಿಸಿವೆ. ಇನ್ನುಮುಂದೆ, ಕರ್ನಾಟಕದಲ್ಲಿ ಸೋನು ನಿಗಮ್‌ಗೆ ಯಾವುದೇ ಬಗೆಯ ಕಾರ್ಯಕ್ರಮಗಳಿಗೆ ಯಾರೊಬ್ಬರೂ ಆಹ್ವಾನ ನೀಡಬಾರದು, ಸೋನು ನಿಗಮ್ ಕರ್ನಾಟಕಕ್ಕೆ ಬರಬಾರದು' ಎಂದು ಕನ್ನಡಪರ ಸಂಘಟನೆಗಳು ಆಗ್ರಹ ಮಾಡಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಶಿ ಕಾರ್ಟಿಯರ್‌ ವಾಚ್‌ ಕದ್ದದ್ದಾ? ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಲ್ಲವೇಕೆ?: ಛಲವಾದಿ
ಪರಮೇಶ್ವರ್ ಮುಂದಿನ ಸಿಎಂಗೆ ಆಗ್ರಹಿಸಿ ರಕ್ತದಲ್ಲಿ ನೂರಾರು ಜನರಿಂದ ಸಹಿ ಸಂಗ್ರಹ