
ಬೆಂಗಳೂರು ಗ್ರಾಮಾಂತರ (ಫೆ.12): ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರು ವಾಸ ಮಾಡುವುದಕ್ಕೆ ಯೋಗ್ಯರಲ್ಲ ಎಂಬ ನಿಯಮವನ್ನು ಖಾಸಗಿ ಬಿಲ್ಡರ್‌ಗಳು ಹಾಕಿಕೊಂಡಿದ್ದಾರೆ. ಹೀಗಾಗಿ, ಎಸ್‌ಎಲ್‌ವಿ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿ ಮಾಡಲು ಹೋದ ವ್ಯಕ್ತಿ ಕನ್ನಡಿಗ ಎಂಬ ಕಾರಣಕ್ಕೆ ಫ್ಲ್ಯಾಟ್ ಖರೀದಿಯನ್ನು ನಿಷೇಧ ಹೇರಿದ್ದಾರೆ. ಒಂದು ವೇಳೆ ಕರ್ನಾಟಕದವರು ಫ್ಲ್ಯಾಟ್ ಖರೀದಿ ಮಾಡಬೇಕೆಂದರೆ 16 ಲಕ್ಷ ರೂ. ಹೆಚ್ಚುವರಿ ಹಣ ಕೊಡಬೇಕು ಎಂದು ಬಿಲ್ಡರ್ ಹೇಳಿದ್ದಾರೆ ಎಂದು ಕನ್ನಡಿಗನೊಬ್ಬ ಹೇಳಿಕೊಂಡು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಹೌದು, ಕರ್ನಾಟಕದ ಅನ್ನ, ನೀರು ಹಾಗು ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ನಲ್ಲಿ ಕನ್ನಡಿಗ ಎಂಬ ಕಾರಣಕ್ಕೆ ಬಿಲ್ಡರ್ ಫ್ಲ್ಯಾಟ್ ಬುಕಿಂಗ್ ಕ್ಯಾನ್ಸಲ್ ಮಾಡಲು ಮುಂದಾಗಿದ್ದಾನೆ. ಈ ಘಟನೆ ಬೆಂಗಳೂರಿನ ಗ್ರಾಮಾಂತರ ಹೊಸಕೋಟೆ ಟೌನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಹೊಸಕೋಟೆ ಚಿಂತಾಮಣಿ ರಸ್ತೆಯಲ್ಲಿರುವ SLV Brindavan ಹೆಸರಿನ ಅಪಾರ್ಟ್ ಮೆಂಟ್. ಸುಮಾರು 1.20 ಸಾವಿರ ಮುಂಗಡ ಪಾವತಿಸಿ ಫ್ಲ್ಯಾಟ್ ಬುಕಿಂಗ್ ಮಾಡಲಾಗಿತ್ತು. ಇದೀಗ ಬುಕಿಂಗ್ ಮಾಡಿ 1 ತಿಂಗಳ ನಂತರ ಫ್ಲ್ಯಾಟ್ ಅಗ್ರೀಮೆಂಟ್ ಮಾಡಿಕೊಡಲು ಬಿಲ್ಡರ್ ನಿರಾಕರಿಸಿದ್ದಾರೆ. ಜೊತೆಗೆ, ಬಾಕಿ ಹಣವನ್ನು ಪಾವತಿಸಿಕೊಂಡು ಮುಂದಿನ ಪ್ರೊಸೆಸಿಂಗ್ ಮಾಡಿಕೊಡುವಂತೆ ಕೇಳಿದರೂ ಬಿಲ್ಡರ್ ಹಿಂದೇಟು ಹಾಕಿದ್ದಾರಂತೆ.
ಇದಕ್ಕೆ ಬಿಲ್ಡರ್ ಬಳಿ ಕಾರಣವನ್ನು ಕೇಳಿದರೆ ನಾನು ಕೇವಲ ಕನ್ನಡ ಮಾತನಾಡುತ್ತೇನೆ, ಸ್ಥಳೀಯ ಎಂಬ ಕಾರಣಕ್ಕೆ ಫ್ಲ್ಯಾಟ್ ನೀಡಲು ನಿರಾಕರಣೆ ಮಾಡಿದ್ದಾರಂತೆ. ಇಲ್ಲಿ ಕನ್ನಡ ಮಾತನಾಡುವವರಿಗೆ ಫ್ಲ್ಯಾಟ್ ಕೊಡುವುದಿಲ್ಲ. ಅನ್ಯ ಭಾಷಿಕರಾದಲ್ಲಿ ಮಾತ್ರ ಫ್ಲ್ಯಾಟ್ ಮಾರಾಟ ಬೆಲೆ ಜೊತೆಗೆ ಡಿಸ್ಕೌಂಟ್ ಕೂಡ ಕೊಡಲಾಗುತ್ತದೆ. ಹೀಗೆ ಕನ್ನಡದ ನೆಲದಲ್ಲಿ ಅಪಾರ್ಟ್‌ಮೆಂಟ್ ಕಟ್ಟಿ ಕನ್ನಡಿಗರೇ ಇಲ್ಲಿ ವಾಸಕ್ಕೆ ಯೋಗ್ಯರಲ್ಲ ಎಂದು ಹೇಳುತ್ತಿರುವ ಬಿಲ್ಡರ್ ಆಂಧ್ರಪ್ರದೇಶ ಮೂಲದ ಸುಬ್ಬಾರೆಡ್ಡಿ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ; ಈ ಆದೇಶ ಇಟ್ಟುಕೊಂಡು ಕಿರುಕುಳದಿಂದ ಪಾರಾಗಿ!
ಬಿಲ್ಡರ್ ಸುಬ್ಬಾರೆಡ್ಡಿ ಹೊಸಕೋಟೆಯಲ್ಲಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಕನ್ನಡಿಗರಿಗೆ ನೀಡದಿರಲು ನಿರ್ಧಾರ ಮಾಡಿದ್ದಾರಂತೆ. ಎಲ್ಲ ಫ್ಲ್ಯಾಟ್‌ಗಳನ್ನು ಕೇವಲ ತೆಲುಗು ಮತ್ತು ಹಿಂದಿ ಭಾಷಿಕರಿಗೆ ಮಾತ್ರ ಮಾರಾಟ ಮಾಡುತ್ತಾರಂತೆ. ಕನ್ನಡಿಗರು ಎಂದು ಗೊತ್ತಾದಲ್ಲಿ ಖರೀದಿ ಮೊತ್ತದ ಜೊತೆಗೆ 16 ಲಕ್ಷ ರೂ. ಕನ್ನಡ ಭಾಷೆ ಮಾತನಾಡುವುದಕ್ಕೆ ದಂಡವನ್ನು ಕಟ್ಟಬೇಕಂತೆ. ಆದ್ದರಿಂದ ಅಡ್ವಾನ್ಸ್ ಹಣ ಪಾವತಿಸಿ ಫ್ಲ್ಯಾಟ್ ಬುಕಿಂಗ್ ಮಾಡಿದ್ದ ಭಾಸ್ಕರ್ ಎಂಬ ಕನ್ನಡಿಗ ನನಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಭಾಸ್ಕರ್ ಎನ್ನುವ ವ್ಯಕ್ತಿಯ ಸಂಪೂರ್ಣ ಹೆಸರು ಭಾಸ್ಕರ್ ರೆಡ್ಡಿ ಇದ್ದುದರಿಂದ ಇವರು ಆಂಧ್ರಪ್ರದೇಶ ಮೂಲದವರು ಇರಬಹುದು ಎಂದು ಅಡ್ವಾನ್ಸ್ ಫ್ಲ್ಯಾಟ್ ಬುಕಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಫ್ಲ್ಯಾಟ್ ಅಗ್ರೀಮೆಂಟ್‌ಗೆ ಬಂದಾಗ ಭಾಸ್ಕರ್ ಕನ್ನಡಿಗ ಎಂಬುದು ಗೊತ್ತಾಗುತ್ತಿದ್ದಂತೆ ಕ್ಯಾತೆ ತೆಗೆದಿದ್ದಾರೆ. ಜೊತೆಗೆ, ಫ್ಲ್ಲಾಟ್ ನೀಡದಿರಲು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗನಿಗೆ ಅನ್ಯಾಯ ಆಗುತ್ತಿದ್ದು, ನಾನು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇನೆ. ಕನ್ನಡಿಗರೆಲ್ಲರು ಸೇರಿ ನನಗೆ ನ್ಯಾಯ ಕೊಡಿಸಬೇಕು ಎಂದು ಭಾಸ್ಕರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಟೀಮ್ ಇಂಡಿಯಾ ಥ್ರೋಡೌನ್ ಸ್ಪೆಷಲಿಸ್ಟ್ ಕನ್ನಡಿಗ ರಘುಗೆ ಹೋಟೆಲ್ ಎಂಟ್ರಿ ನಿರಾಕರಿಸಿದ ಪೊಲೀಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ