ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

By Govindaraj S  |  First Published Dec 10, 2022, 1:27 PM IST

ಹಿಂದಿ ಬಗ್ಗೆ ಹೇಳಿದರೆ ಹೇರಿಕೆ ಅಂತಾರೆ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡದಲ್ಲಿರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ತಿಳಿಸಿದ್ದಾರೆ. 


ಧಾರವಾಡ (ಡಿ.10): ಹಿಂದಿ ಬಗ್ಗೆ ಹೇಳಿದರೆ ಹೇರಿಕೆ ಅಂತಾರೆ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ಪ್ರಥಮ ಆದ್ಯತೆ ಕನ್ನಡದಲ್ಲಿರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ತಿಳಿಸಿದ್ದಾರೆ. ಕನ್ನಡದಲ್ಲಿಯೇ ಮಾತನಾಡಬೇಕು, ಕನ್ನಡದಲ್ಲಿಯೆ ವ್ಯವಹರಿಸಬೇಕು. ನಾವು ಮಾಡುವ ವಿಚಾರ ಜನರಿಗೆ ತಿಳಿಸಲು ಮಾತೃಭಾಷೆಯೇ ಬೇಕು.  ಕನ್ನಡದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂಗ್ಲೀಷ್‌ಗೆ ಐದಾರು ನೂರು ವರ್ಷಗಳ ಇತಿಹಾಸ ಇದೆ. ಹೀಗಾಗಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.

ನಮ್ಮಲ್ಲಿ ಹಿಂದಿ ಬೇಡ ಅಂತಾರೆ.  ಹಿಂದಿ ಫಲಕಗಳಿಗೆ ಮಸಿ ಬಳಿಯುತ್ತಾರೆ. ಇಂಗ್ಲೀಷ್ ಹಾಗೆಯೇ ಬಿಡ್ತಾರೆ ಇಂಗ್ಲೀಷ್ ಏನು ನಮ್ಮ ಅಪ್ಪನ ಮನೆ ಭಾಷೆಯಾ? ಇಂಗ್ಲಿಷ್ ನಮ್ಮನ್ನು ದಾಸ್ಯದಲ್ಲಿ ಇಟ್ಟವರ ಭಾಷೆ. ಮೆಕಾಲೆ ಆರಂಭಿಸಿದ ಉದ್ದೇಶ ಇದು. ವ್ಯಕ್ತಿತ್ವ ನಿರೂಪಣೆ ಮಾಡುವ ಶಿಕ್ಷಣ ನಮ್ಮಲ್ಲಿತ್ತು. ಅದನ್ನು ನಿಲ್ಲಿಸಿ ಗುಲಾಮರನ್ನು ತಯಾರು ಮಾಡೋ ಮನಸ್ಥಿತಿ ಮೆಕಾಲೆಗೆ ಇತ್ತು. ಅಂದಿನಿಂದ ಇಂಗ್ಲೀಷ್ ಶಿಕ್ಷಣ ಬಂತು. ನಮ್ಮಲ್ಲಿ ಕನ್ನಡ ಇಲ್ಲ ಅಂದ್ರೆ ಇಂಗ್ಲಿಷ್ ನಡೆಯುತ್ತದೆಯಂತೆ? ಇದು ವಿಚಿತ್ರ ಸ್ಥಿತಿ. ಇಂತಹ ಸ್ಥಿತಿ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂದು ಜೋಶಿ ಹೇಳಿದರು.

Tap to resize

Latest Videos

ಕಲ್ಲಿದ್ದಲು ಹರಾಜು ವಿರೋಧಿಸುವ ನೈತಿಕತೆಯಿಲ್ಲ: ಪ್ರಲ್ಹಾದ್ ಜೋಶಿ ವಾಗ್ದಾಳಿ

ಸಿಎಸ್‌ಆರ್‌ ನಿಧಿಯಡಿ 50 ಶಾಲೆ ಕೊಠಡಿ ಮಂಜೂರು: ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ತಾಲೂಕುಗಳಲ್ಲಿ ಸಿಎಸ್‌ಆರ್‌ ಯೋಜನೆಯಡಿ ಪ್ರಾಥಮಿಕ ಶಾಲೆಗಳಿಗೆ 50 ಹೆಚ್ಚುವರಿ ಶಾಲಾ ಕೊಠಡಿಗಳನ್ನು ವಿವೇಕ ಶಾಲೆ ಯೋಜನೆಯಡಿ ಮಂಜೂರು ಮಾಡಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಾಥಮಿಕ ಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ . 13.90 ಲಕ್ಷ ಮತ್ತು ಪ್ರೌಢಶಾಲೆಯ ಒಂದು ಕೊಠಡಿ ನಿರ್ಮಾಣಕ್ಕೆ . 16.40 ಲಕ್ಷ ಎಂಬುದನ್ನು ಕ್ರಿಯಾಯೋಜನೆಯಲ್ಲಿ ನಮೂದಿಸಲಾಗಿದೆ. ಅನುದಾನವೂ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಮಳೆಯಿಂದ ಶಿಥಿಲಗೊಂಡ ಹಾಗೂ ದುರಸ್ತಿಯಲ್ಲಿದ್ದ ಕೊಠಡಿಗಳ ಪಟ್ಟಿಯನ್ನು ಇಲಾಖೆಯಿಂದಲೇ ಪಡೆಯಲಾಗಿತ್ತು. ಅದರಂತೆ ತುರ್ತು ಅಗತ್ಯವಿರುವ ಶಾಲೆಗಳಿಗೆ ಕೊಠಡಿಯನ್ನು ಇಲಾಖೆಯಿಂದ ಮಂಜೂರು ಮಾಡಲಾಗಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ 4 ಪ್ರೌಢಶಾಲೆ ಹಾಗೂ 27 ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದ್ದಾರೆ. ಕುಂದಗೋಳ ತಾಲೂಕಿನ 5, ಹುಬ್ಬಳ್ಳಿ ಗ್ರಾಮೀಣ 6, ಹುಬ್ಬಳ್ಳಿ ಶಹರದಲ್ಲಿ 5 ಸೇರಿದಂತೆ 16 ಕೊಠಡಿ ನಿರ್ಮಾಣಕ್ಕೆ . 2.29 ಕೋಟಿ ಮಂಜೂರು ಮಾಡಲಾಗಿದೆ.

ಮಂಡ್ಯದಲ್ಲಿ ವೈಭವದ ಜಾನಪದ ಲೋಕ ಅನಾವರಣ

ಧಾರವಾಡ ಗ್ರಾಮೀಣ 8, ಕಲಘಟಗಿ 7, ನವಲಗುಂದ 4 ಹೀಗೆ ಒಟ್ಟು 26 ಶಾಲಾ ಕೊಠಡಿಗಳನ್ನು 3.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಶಾಲೆಗಳು ಕಟ್ಟಡ ಕೊರತೆ ಎದುರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿತ್ತು. ಈ ಯೋಜನೆಯಿಂದ ಕೊಠಡಿ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ನೂತನ ಕೊಠಡಿ ಭಾಗ್ಯ ಲಭಿಸಲಿದೆ. ಶೀಘ್ರದಲ್ಲೇ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಕೊಠಡಿಗಳು ವಿದ್ಯಾರ್ಥಿಗಳ ಬಳಕೆಗೆ ದೊರೆಯಲಿವೆ ಎಂದು ತಿಳಿಸಿದ್ದಾರೆ.

click me!